ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಸಿ ಬಿಸಿ ಸಮೋಸಾ, ಮಾವಿನ ಕಾಯಿ ಚಟ್ನಿ ತಯಾರಿಸಿದ ಆಸ್ಟ್ರೇಲಿಯಾ ಪಿಎಂ!

|
Google Oneindia Kannada News

ನವದೆಹಲಿ, ಮೇ 31: ಕೊರೊನಾ ವೈರಸ್ ಲಾಕ್ ಡೌನ್ ನಿಂದಾಗಿ ಮನೆಯಲ್ಲೇ ಕುಳಿತ ಅದೆಷ್ಟೋ ಯುವಕ-ಯುವತಿಯರು ಸೌಟು ಹಿಡಿದು ಪಾಕ ಶಾಲೆಯಲ್ಲಿ ಪ್ರಯೋಗಿಸಿದ ರೆಸಿಪಿಗಳು ಒಂದೆರಡಲ್ಲ. ಜನಸಾಮಾನ್ಯರು ಮಾತ್ರ ಅಲ್ಲ.. ಆಸ್ಟ್ರೇಲಿಯಾದ ಪ್ರಧಾನಿ ಕೂಡ ಅಡುಗೆ ಮನೆಗೆ ತೆರಳಿ ಅಡುಗೆ ಮಾಡಿದ್ದಾರೆ.

Recommended Video

ಕೊರೋನಾ ವಾರಿಯರ್ಸ್ ಗೆ ಕಾಸ್ಟ್ಲಿ ಶೂ ಕೊಟ್ಟ ಕನ್ನಡಿಗ ಕೆಎಲ್ ರಾಹುಲ್| Oneindia Kannada

ಅಸಲಿಗೆ, ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್ ತಯಾರಿಸಿರುವ ವಿಶಿಷ್ಟ ಖಾದ್ಯ ಯಾವುದು ಅಂತೀರಾ.? ಭಾರತದ ಯುವ ಪೀಳಿಗೆಯ ಅಚ್ಚುಮೆಚ್ಚಿನ.. ಚಾಟ್ ಸೆಂಟರ್ ಗಳಲ್ಲಿ ಬಹುಬೇಡಿಕೆ ಹೊಂದಿರುವ.. ರುಚಿಕರವಾದ 'ಸಮೋಸಾ'.

ಕೋವಿಡ್-19 ಗೆ ಲಸಿಕೆ: ಆಸ್ಟ್ರೇಲಿಯಾದಲ್ಲಿ ಮನುಷ್ಯರ ಮೇಲೆ ಪ್ರಯೋಗ ಶುರು!ಕೋವಿಡ್-19 ಗೆ ಲಸಿಕೆ: ಆಸ್ಟ್ರೇಲಿಯಾದಲ್ಲಿ ಮನುಷ್ಯರ ಮೇಲೆ ಪ್ರಯೋಗ ಶುರು!

ಹೌದು, ಭಾನುವಾರ ಬೆಳಗ್ಗಿನ ಉಪಹಾರಕ್ಕೆ ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್ ಸಮೋಸಾ ಮತ್ತು ಮಾವಿನ ಕಾಯಿ ಚಟ್ನಿ ತಯಾರಿಸಿದ್ದಾರೆ. ಸಮೋಸಾ ಮತ್ತು ಮ್ಯಾಂಗೋ ಚಟ್ನಿಯನ್ನು ಯಾರೊಂದಿಗೆ ಸೇವಿಸುವ ಇಚ್ಛೆ ಆಸ್ಟ್ರೇಲಿಯಾದ ಪ್ರಧಾನಿಗಿದೆ ಗೊತ್ತೇನು.?

ಸ್ವತಃ ತಾವೇ ತಯಾರಿಸಿದ ಸಮೋಸಾ-ಚಟ್ನಿ.!

ಸ್ವತಃ ತಾವೇ ತಯಾರಿಸಿದ ಸಮೋಸಾ-ಚಟ್ನಿ.!

ಸಮೋಸಾ ಮತ್ತು ಮಾವಿನ ಕಾಯಿ ಚಟ್ನಿಯ ರೆಸಿಪಿ ನೋಡಿಕೊಂಡು, ಖುದ್ದಾಗಿ ತಾವೇ ಎರಡೂ ಖಾದ್ಯಗಳನ್ನೂ ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ತಯಾರಿಸಿದ್ದಾರೆ. ಭಾರತದಲ್ಲಿ ಫೇಮಸ್ ಆಗಿರುವ ಸಮೋಸಾ ಮತ್ತು ಮಾವಿನಕಾಯಿ ಚಟ್ನಿ ದೂರದ ಆಸ್ಟ್ರೇಲಿಯಾದಲ್ಲಿನ ಪ್ರಧಾನಿ ನಿವಾಸದಲ್ಲಿ ರೆಡಿಯಾಗಿರುವುದು ಅಚ್ಚರಿಯೇ ಸರಿ.

ಟ್ವೀಟ್ ಮಾಡಿರುವ ಸ್ಕಾಟ್ ಮಾರಿಸನ್

''ಭಾನುವಾರ... ಸ್ಕೊಮೋಸಾ (ಸಮೋಸಾ) ಮತ್ತು ಮ್ಯಾಂಗೋ ಚಟ್ನಿ. ಎಲ್ಲವನ್ನೂ ನಾನೇ ತಯಾರಿಸಿದ್ದೇನೆ. ಇದೇ ವಾರ ಭಾರತದ ಪ್ರಧಾನಿ ನರೇಂದ್ರ ಮೋದಿ ಜೊತೆಗೆ ವಿಡಿಯೋ ಸಂವಾದ ಇದೆ. ಅವರು ಸಸ್ಯಹಾರಿ. ಹೀಗಾಗಿ, ಇದನ್ನ ನಾನು ಅವರೊಂದಿಗೆ ಸೇವಿಸಲು ಇಚ್ಛಿಸುವೆ'' ಎಂದು ಸ್ಕಾಟ್ ಮಾರಿಸನ್ ಟ್ವೀಟ್ ಮಾಡಿದ್ದಾರೆ.

ಪ್ರತಿಕ್ರಿಯಿಸಿದ ಪ್ರಧಾನಿ ಮೋದಿ

''ಹಿಂದೂ ಮಹಾಸಾಗರದಿಂದ ಕನೆಕ್ಟ್ ಆಗಿರುವ ನಾವು, ಭಾರತೀಯ ಸಮೋಸಾದಿಂದ ಒಗ್ಗೂಡುತ್ತಿದ್ದೇವೆ. ನೀವು ತಯಾರಿಸಿರುವ ಸಮೋಸಾ ರುಚಿಯಾಗಿ ಕಾಣುತ್ತಿದೆ. ಕೋವಿಡ್-19 ವಿರುದ್ದ ಜಯ ಸಾಧಿಸಿದ ನಂತರ ನಾವು ಒಟ್ಟಾಗಿ ಕೂತು ಸಮೋಸಾ ಸೇವಿಸೋಣ'' ಎಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.

ವಿಡಿಯೋ ಸಂವಾದ ಯಾವಾಗ.?

ವಿಡಿಯೋ ಸಂವಾದ ಯಾವಾಗ.?

ಜೂನ್ 4 ರಂದು ವಿಡಿಯೋ ಲಿಂಕ್ ಮೂಲಕ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್ ಸಂವಾದ ನಡೆಸಲಿದ್ದಾರೆ.

English summary
Australian Prime Minister Scott Morrison made Samosas, desires to share it with PM Modi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X