ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಸ್ಟ್ರೇಲಿಯಾದ ಆಂಕರ್ ರನ್ನು ವಶಕ್ಕೆ ಪಡೆದ ಚೀನಾ ಅಧಿಕಾರಿಗಳು

|
Google Oneindia Kannada News

ಕ್ಯಾನಬೇರಾ, ಸಪ್ಟೆಂಬರ್.01: ಆಸ್ಟ್ರೇಲಿಯಾ ಮೂಲದ ಆಂಕರ್ ಒಬ್ಬರನ್ನು ಚೀನಾದ ಬೀಜಿಂಗ್ ನಲ್ಲಿ ವಶಕ್ಕೆ ಪಡೆದುಕೊಳ್ಳಲಾಗಿದೆ. ಚೀನಾದ ಸಿಜಿಟಿಎನ್ ಸುದ್ದಿ ಸಂಸ್ಥೆಯಲ್ಲಿ ಸುದ್ದಿ ವಾಚಕಿ ಚೆಂಗ್ ಲೀ ಸೂಕ್ಷ್ಮ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಒಳಪಡಿಸಲಾಗಿದೆ.

Recommended Video

China ಗಡಿಗೆ ಎಂಟ್ರಿ ಕೊಟ್ಟ ಭಾರತೀಯ ಸೇನೆ | Oneindia Kannada

ಚೀನಾದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಆಸ್ಟ್ರೇಲಿಯಾದ ಆಂಕರ್ ರನ್ನು ಸ್ಥಳೀಯ ಅಧಿಕಾರಿಗಳು ವಶಕ್ಕೆ ಪಡೆದಿರುವ ಬಗ್ಗೆ ಚೀನಾ ವಿದೇಶಾಂಗ ಸಚಿವ ಮರಿಸೆ ಪಾನ್ಯೆ ಸ್ಪಷ್ಟನೆ ನೀಡಿದ್ದಾರೆ. ಕಳೆದ ವಾರ ಆಸ್ಟ್ರೇಲಿಯಾದ ರಾಯಭಾರಿ ಜೊತೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡುವುದಕ್ಕೆ ಅನುಮತಿ ನೀಡಲಾಗಿತ್ತು ಎಂದು ಎಬಿಸಿ ವರದಿ ಮಾಡಿದೆ.

ಕೇರಳ ಚಿನ್ನ ಕಳ್ಳಸಾಗಣೆ: 5 ಗಂಟೆ ಟಿವಿ ಪತ್ರಕರ್ತನ ವಿಚಾರಣೆಕೇರಳ ಚಿನ್ನ ಕಳ್ಳಸಾಗಣೆ: 5 ಗಂಟೆ ಟಿವಿ ಪತ್ರಕರ್ತನ ವಿಚಾರಣೆ

ಆಸ್ಟ್ರೇಲಿಯಾದ ಪ್ರಜೆಯಾಗಿರುವ ಚೇಂಗ್ ಲೀ ರನ್ನು ವಶಕ್ಕೆ ಪಡೆದಿರುವ ಬಗ್ಗೆ ಆಸ್ಟ್ರೇಲಿಯಾ ಸರ್ಕಾರಕ್ಕೆ ಈಗಾಗಲೇ ಮಾಹಿತಿ ನೀಡಲಾಗಿದೆ ಎಂದು ಚೀನಾ ವಿದೇಶಾಂಗ ಸಚಿವ ಮರಿಸೆ ಪಾನ್ಯೆ ತಿಳಿಸಿದ್ದಾರೆ. ಕಳೆದ ಆಗಸ್ಟ್.14ರಂದು ಈ ಬಗ್ಗೆ ಅಧಿಕೃತವಾಗಿ ಅಧಿಸೂಚನೆಯನ್ನು ರವಾನಿಸಲಾಗಿದೆ.

Australian News Anchor, Who Working In Chinese CGTN Channel Detained In Beijing

ಚೆಂಗ್ ಲೀ ಬೆಂಬಲಕ್ಕೆ ನಿಂತ ಆಸ್ಟ್ರೇಲಿಯಾ ಸರ್ಕಾರ:

ಚೀನಾದಲ್ಲಿ ಬಂಧಿಸಲ್ಪಟ್ಟ ಆಂಕರ್ ಚೆಂಗ್ ಲೀ ನೆರವಿಗೆ ಆಸ್ಟ್ರೇಲಿಯಾ ಸರ್ಕಾರವು ಧಾವಿಸಿದೆ. ಕಳೆದ ಆಗಸ್ಟ್.27ರಂದು ಚೆಂಗ್ ಲೀ ಅವರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಆಸ್ಟ್ರೇಲಿಯಾ ಸರ್ಕಾರದ ಅಧಿಕಾರಿಗಳು ಚರ್ಚೆ ನಡೆಸಿದ್ದರು. ಚೆಂಗ್ ಲೀ ಮತ್ತು ಅವರ ಕುಟುಂಬದ ಸದಸ್ಯರಿಗೆ ಅಗತ್ಯ ನೆರವು ನೀಡುವುದಾಗಿ ಭರವಸೆ ನೀಡಿದ್ದರು.

ಇತ್ತೀಚಿನ ದಿನಗಳಲ್ಲಿ ಸಂಬಂಧಿಕರು ಕಳುಹಿಸಿದ ಸಂದೇಶಗಳಿಗೆ ಆಂಕರ್ ಚೆಂಗ್ ಲೀ ಯಾವುದೇ ರೀತಿ ಪ್ರತಿಕ್ರಿಯೆ ನೀಡುತ್ತಿರಲಿಲ್ಲ. ಇದರಿಂದ ಸಂಬಂಧಿಕರಲ್ಲಿ ಸಾಕಷ್ಟು ಕಳವಳ ಸೃಷ್ಟಿಯಾಗಿತ್ತು. ಅಸಲಿಗೆ ಚೀನಾ ಅಧಿಕಾರಿಗಳು ವಶಕ್ಕೆ ಪಡೆದ ಚೆಂಗ್ ಲೀ ವಿರುದ್ಧ ಯಾವುದೇ ಗಂಭೀರ ಆರೋಪಗಳಿಲ್ಲ.

ಚೀನಾದ ನಿಯಮಗಳ ಪ್ರಕಾರ, ಶಂಕಿತರನ್ನು ಆರು ತಿಂಗಳವರೆಗೂ ಗೊತ್ತುಪಡಿಸಿದ ನಿರ್ದಿಷ್ಟ ಪ್ರದೇಶದಲ್ಲಿ ವಿಚಾರಣೆಗಾಗಿ ಗೌಪ್ಯವಾಗಿ ಇರಿಸುವ ಅವಕಾಶ ಇರುತ್ತದೆ. ಚೆಂಗ್ ಲೀ ಅವರನ್ನು ಬೆಂಬಲಿಸುವ ಉದ್ದೇಶದಿಂದ ವಿದೇಶಾಂಗ ವ್ಯವಹಾರ ಇಲಾಖೆ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದೇವೆ ಎಂದು ಸಂಬಂಧಿಕರು ತಿಳಿಸಿದ್ದಾರೆ.

ಚೀನಾದ ಸಿಜಿಟಿಎನ್ ಸುದ್ದಿ ಸಂಸ್ಥೆಯಲ್ಲಿ ಕಳೆದ ಎಂಟು ವರ್ಷಗಳಿಂದಲೂ ಚೆಂಗ್ ಲೀ ಆಂಕರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಚೀನಾದ ವಾರ್ಷಿಕ ರಾಜಕೀಯ ಕಾಂಗ್ರೆಸ್ ಸೇರಿದಂತೆ ರಾಷ್ಟ್ರದ ಅತ್ಯಂತ ಸೂಕ್ಷ್ಮವಾಗ ರಾಜಕೀಯ ಘಟನೆಗಳ ಪ್ರಸಾರವನ್ನು ಪ್ರಸ್ತುತಪಡಿಸಿದ್ದರು ಎಂದು ನಂಬಲಾಗಿದೆ.

ಆಂಕರ್ ಚೆಂಗ್ ಲೀ ಚೀನಾದಲ್ಲಿ ಬಂಧಿಸಲ್ಪಟ್ಟ ಎರಡನೇ ಆಸ್ಟ್ರೇಲಿಯಾದ ಪತ್ರಕರ್ತರಾಗಿದ್ದಾರೆ. ಕಳೆದ 2019ರ ಜನವರಿಯಲ್ಲಿ ಚೀನಾದಲ್ಲೇ ಕಾರ್ಯ ನಿರ್ವಹಿಸುತ್ತಿದ್ದ ಮಾಜಿ ವರದಿಗಾರ ಯಾಂಗ್ ಹೆಂಗಜಿನ್ ರನ್ನು ಬೀಜಿಂಗ್ ನಲ್ಲಿ ವಶಕ್ಕೆ ಪಡೆದುಕೊಳ್ಳಲಾಗಿತ್ತು.

English summary
Australian News Anchor, Who Working In Chinese CGTN Channel Detained In Beijing.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X