ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪತ್ನಿ,ಪುತ್ರಿಯ ಕಳೇಬರ ಕೈಮೇಲಿತ್ತು!ಶ್ರೀಲಂಕಾ ಸ್ಫೋಟದ ಮನಕಲಕುವ ಕತೆ

|
Google Oneindia Kannada News

ಕೋಲಂಬೋ, ಏಪ್ರಿಲ್ 24: "ನೀವು ಇಲ್ಲೇ ಇರಿ, ಐದು ನಿಮಿಷ ಹೊರಗೆ ಹೋಗಿ ಬಂದುಬಿಡ್ತೀನಿ..." ಎಂದು ಪತ್ನಿ, ಪುತ್ರಿಯನ್ನು ಚರ್ಚಿನ ಮೂರನೇ ಸಾಲಿನ ಬೆಂಚಿನ ಮೇಲೆ ಕೂರಿಸಿ ಹೊರಗೆ ಹೋಗಿದ್ದೆ. ಆದರೆ ಅದು ಅವರ ಪಾಲಿನ ಕೊನೆಯ ಈಸ್ಟರ್ ಸಂಭ್ರಮ ಎಂಬುದು ನನಗೆಲ್ಲಿ ಗೊತ್ತಿತ್ತು?!

ವಿಶೇಷ ಪುಟ

ಶ್ರೀಲಂಕಾ ಸ್ಫೋಟದಲ್ಲಿ ತಮ್ಮ ಪತ್ನಿ ಮತ್ತು ಪುತ್ರಿಯನ್ನು ಕಳೆದುಕೊಂಡ ತಂದೆಯೊಬ್ಬರ ಮನಕಲಕುವ ಕತೆ ಇದು. ಪತ್ನಿ ಮತ್ತು ಪುತ್ರಿ ಇಬ್ಬರೂ ತನ್ನ ಕೈಮೇಲೆ ತಲೆ ಇಟ್ಟು ಭಯಂಕರ ಯಾತನೆಯೊಂದಿಗೆ, ತನ್ನ ಕಣ್ಣೆದುರಲ್ಲೇ ಈ ಬದುಕಿಗೇ ವಿದಾಯ ಹೇಳುವಾಗ ಯಾವ ಮನುಷ್ಯ ತಾನೇ ಧೈರ್ಯದಿಂದ ಇರುವುದಕ್ಕೆ ಸಾಧ್ಯ?

ಆಸ್ಟ್ರೇಲಿಯಾ ಮೂಲದ ಸುದೇಶ್ ಕೊಲೋನ್ನ್ ಮತ್ತು ಪತ್ನಿ ಮಣಿಕ್ ಸುರಿಯಾರಟ್ಸಚಿ ತಮ್ಮ ಹತ್ತು ವರ್ಷ ವಯಸ್ಸಿನ ಮಗಳು ಅಲೆಕ್ಸಾಂಡ್ರಿಯಾ ಜೊತೆ ಈಸ್ಟರ್ ಗಾಗಿ ಶ್ರೀಲಂಕಾದ ನೆಗೊಂಬೋ ಚರ್ಚಿಗೆ ಬಂದಿದ್ದರು. ಪತ್ನಿ-ಮಗಳನ್ನು ಚರ್ಚಿನಲ್ಲೇ ಇರುವಂತೆ ಹೇಳಿ, ತುರ್ತು ಕೆಲಸದ ನಿಮಿತ್ತ ಚರ್ಚಿನಿಂದ ಆಗಷ್ಟೇ ಸುದೇಶ್ ಹೊರಗೆ ಬಂದಿದ್ದರು. ಅಷ್ಟರಲ್ಲೇ ಸ್ಫೋಟ ಸಂಭವಿಸಿತ್ತು.

ಕೊನೆ ಕ್ಷಣದ ನಿರ್ಧಾರ, ಶ್ರೀಲಂಕಾದಲ್ಲಿ ಮಂಗಳೂರಿನ ದಂಪತಿ ಪಾರುಕೊನೆ ಕ್ಷಣದ ನಿರ್ಧಾರ, ಶ್ರೀಲಂಕಾದಲ್ಲಿ ಮಂಗಳೂರಿನ ದಂಪತಿ ಪಾರು

ಸ್ಫೋಟದ ಸದ್ದು ಕೇಳುತ್ತಿದ್ದಂತೆಯೇ ಚರ್ಚಿನ ಒಳಗೆ ಓಡಿದ ಸುದೇಶ್ ತಮ್ಮ ಪತ್ನಿ ಮತ್ತು ಮಗಳ ಹೆಸರನ್ನು ಕೂಗುತ್ತ ಓಡತೊಡಗಿದರು. ಆ ಸ್ಫೋಟದ ಸದ್ದು, ಚೀರಾಟ, ಆಕ್ರಂದನದ ನಡುವಲ್ಲಿ ಸುದೇಶ್ ಅವರ ಧ್ವನಿ ಅವರ ಪತ್ನಿ, ಮಗಳಿಗೆ ಎಲ್ಲಿಂದ ಕೇಳಬೇಕು? ಯಾರದೋ ಮೇಲಿನ ದ್ವೇಷ, ಮತಾಂಧತೆಯ ಮೌಢ್ಯ, ಹಿಂಸೆಯ ವಿಕೃತ ಮನೋಭಾವಕ್ಕಾಗಿ ಅಮಾಯಕರನ್ನು ಬಲಿತೆಗೆದುಕೊಳ್ಳುವ ಇಂಥವರನ್ನೆಲ್ಲ ನೋಡಿ ಏಸುವೂ ಮರುಗಿರಲಿಕ್ಕೆ ಸಾಕು!

Array

ಸುದೇಶ್ ಕೈಮೇಲೆ ಪ್ರಾಣಬಿಟ್ಟ ಪತ್ನಿ, ಪುತ್ರಿ

ಚರ್ಚಿನ ಮೂರನೇ ಸಾಲಿನ ಬೆಂಚಿನಲ್ಲಿ ಪತ್ನಿ-ಮಗಳು ಕುಳಿತಿದ್ದಿದ್ದನ್ನು ನೆನಪಾಗಿ ತಕ್ಷಣವೇ ಸುದೇಶ್ ಅತ್ತೆಡೆ ಓಡಿದರು. ಅದಾಗಲೇ ಇಬ್ಬರೂ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಇಬ್ಬರನ್ನೂ ತನ್ನ ಕೈಮೇಲೆ ಮಲಗಿಸಿಕೊಂಡು, ತಲೆಸವರುತ್ತ ಆಸ್ಪತ್ರೆಗೆ ಕರೆದೊಯ್ಯಲು ವ್ಯವಸ್ಥೆ ಮಾಡಬೇಕು... ಅಷ್ಟರಲ್ಲೇ ಏನನ್ನೋ ಹೇಳಲು ಹೊರಟ ಪತ್ನಿ ಸುರಿಯಾರಟ್ಸಚಿ ಕಣ್ಣು ಮುಚ್ಚಿದ್ದರು, ಇತ್ತ ಪುತ್ರಿಯೂ ಏನಾಗುತ್ತಿದೆ ಎಂಬುದನ್ನು ಅರಿವ ಮೊದಲೇ ಇಹಲೋಕ ತ್ಯಜಿಸಿದ್ದಳು.

ಶ್ರೀಲಂಕಾದ ಸರಣಿ ಸ್ಫೋಟಕ್ಕೆ ಇಸ್ಲಾಮಿಕ್ ಸ್ಟೇಟ್ ಉಗ್ರರೇ ಹೊಣೆ ಶ್ರೀಲಂಕಾದ ಸರಣಿ ಸ್ಫೋಟಕ್ಕೆ ಇಸ್ಲಾಮಿಕ್ ಸ್ಟೇಟ್ ಉಗ್ರರೇ ಹೊಣೆ

Array

ಮಗಳಿಗೆ ಸಂಗೀತವಂದ್ರೆ ಪ್ರಾಣ

"ಮಗಳು ಅಲೆಕ್ಸಾಂಡ್ರಿಯಾಗೆ ಸಂಗೀತ ಎಂದರೆ ಪ್ರಾಣ. ಹತ್ತು ವರ್ಷ ವಯಸ್ಸಿನ ಆಕೆ ಹಾಡನ್ನು ಕೇಳುವುದಷ್ಟೇ ಅಲ್ಲ, ತಾನೇ ಹಾಡನ್ನು ಸಂಯೋಜಿಸುತ್ತಿದ್ದಳು, ರಚಿಸುತ್ತಿದ್ದಳು. ನಾನು ಆಕೆಯನ್ನು ಮಿಸ್ ಮಾಡಿಕೊಳ್ಳುತ್ತೇನೆ" ಎಂದು ಸುದೇಶ್ ಬಿಕ್ಕುತ್ತಾರೆ.

ಶ್ರೀಲಂಕಾದಲ್ಲಿ ಇಲ್ಲಿ ತನಕ ಸಂಭವಿಸಿದ ಭೀಕರ ಸ್ಫೋಟಗಳು ಶ್ರೀಲಂಕಾದಲ್ಲಿ ಇಲ್ಲಿ ತನಕ ಸಂಭವಿಸಿದ ಭೀಕರ ಸ್ಫೋಟಗಳು

ಅಂದು ಅವರಿಬ್ಬರು ಯಾಕೆ ಅಷ್ಟು ಅವಸರದಲ್ಲಿದ್ದರೋ!

ನನ್ನ ಮಗಳು ಮತ್ತು ಪತ್ನಿಗೆ ಚರ್ಚಿಗೆ ಹೋಗುವುದೆಂದರೆ ಎಲ್ಲಿಲ್ಲದ ಸಂತೋಷವಿತ್ತು. ಅಂದು ಸಹ ಚರ್ಚಿಗೆ ಹೋಗಲು ಅವರಿಬ್ಬರೂ ತೀರಾ ಅವಸರದಲ್ಲಿದ್ದರು. ಎಂದೂ ಇಲ್ಲದಷ್ಟು ಸಂಭ್ರಮದಲ್ಲಿದ್ದರು. ಆದರೆ ಈ ಸಂಭ್ರಮವೇ ಅವರ ಮತ್ತು ನನ್ನ ಬದುಕಿನ ಕೊನೆಯ ಸಂಭ್ರಮ ಎಂಬುದು ನನಗೆ ಗೊತ್ತಿರಲಿಲ್ಲ ಎನ್ನುತ್ತಾರೆ ಸುದೇಶ್. ಒಮೆಗಾ ಗ್ಲೋಬಲ್ ಎಂಬ ಬ್ಯಸಿನೆಸ್ ಮ್ಯಾನೇಜ್ಮೆಂಟ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕಿಯಾಗಿದ್ದ ಮಣಿಕ್ ಸುರಿಯಾರಟ್ಸಚಿ ಅವರ ಅಗಲಿಕೆಗೆ ಆ ಸಂಸ್ಥೆಯೂ ಭಾವಪೂರ್ಣ ವಿದಾಯ ಸಲ್ಲಿಸಿದೆ.

ಸಾವಿನ ಸಂಖ್ಯೆ 350 ಕ್ಕಿಂತ ಹೆಚ್ಚು

ಏಪ್ರಿಲ್ 17 ರಂದು ಸಂಜೆ ಶ್ರೀಲಂಕಾದಲ್ಲಿ ಒಟ್ಟು ಎಂಟು ಕಡೆ ನಡೆದ ಭೀಕರ ಬಾಂಬ್ ಸ್ಫೋಟಗಳಲ್ಲಿ ಇದುವರೆಗೆ ಒಟ್ಟು 350 ಕ್ಕೂ ಹೆಚ್ಚು ಜನ ಅಸುನೀಗಿದ್ದು, 500 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಈ ಕೃತ್ಯದ ಹೊಣೆಯನ್ನು ಘಟನೆ ನಡೆದ ಎರಡು ದಿನದ ಬಳಿಕ, ಅಂದರೆ ಮಂಗಳವಾರ ಐಸಿಸ್ ಉಗ್ರ ಸಂಘಟನೆ ಹೊತ್ತುಕೊಂಡಿದೆ.

English summary
Sudesh Kolonne, an australian citizen, who lost his wife and daughter in Sri Lanka bomb blast, shares his story.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X