ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿಂದೂಗಳು ಗರಂ, ಕುರಿಮಾಂಸ ತಿನ್ನುವ ಗಣೇಶನ ಜಾಹೀರಾತು

By ವಿಕಾಸ್ ನಂಜಪ್ಪ
|
Google Oneindia Kannada News

Recommended Video

Australian ad showing Lord Ganesha eating lamb irritates India | Oneindia Kannada

ಸಿಡ್ನಿ, ಸೆ. 12: ಇಲ್ಲಿನ ಸ್ಥಳೀಯ ಟಿವಿ ಜಾಹೀರಾತೊಂದರಲ್ಲಿ ಹಿಂದೂಗಳ ಪ್ರಥಮ ಪೂಜ್ಯ ದೇವತೆ ಗಣೇಶನನ್ನು ಅವಮಾನಿಸಲಾಗಿದೆ. ಕುರಿ ಮಾಂಸವನ್ನು ಗಣೇಶ ಭಕ್ಷಿಸುವಂತೆ ತೋರಿಸಲಾಗಿದೆ ಎಂದು ಎನ್ನಾರೈಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಟಿವಿ ಜಾಹೀರಾತು ಸಂಸ್ಥೆ ವಿರುದ್ಧ ದೂರು ಸಲ್ಲಿಸಲಾಗಿದೆ.

ಮಾಂಸ ಭಕ್ಷಣೆಗೆ ಪ್ರಚಾರ ನೀಡಲು ಈ ಟಿವಿ ಜಾಹೀರಾತು ಮಾಡಲಾಗಿದೆ. ಆಸ್ಟ್ರೇಲಿಯಾದಲ್ಲಿ ದೈನಂದಿನ ಬದುಕಿನಲ್ಲಿ ಬಳಸುವ ಆಹಾರಗಳು ಊಟದ ಟೇಬಲ್ ಮೇಲಿರುತ್ತದೆ. ಹಿಂದೂಗಳ ದೇವತೆ ಗಣೇಶ ಅಲ್ಲದೆ, ಜೀಸಸ್, ಬುದ್ಧ, ಸೈನ್ಟೋಲಾಜಿ ಸ್ಥಾಪಕ ರಾನ್ ಹುಬ್ಬಾರ್ಡ್ ಸೇರಿದಂತೆ ಹಲವಾರು ಮಂದಿಯ ಪ್ರತಿರೂಪದಂತಿರುವ ವ್ಯಕ್ತಿಗಳು ಕುಳಿತಿರುತ್ತಾರೆ.

Australian ad showing Lord Ganesha eating lamb irks India

ಈ ಸಂದರ್ಭದಲ್ಲಿ ಕುರಿ ಮಾಂಸ ಹಾಗೂ ಮದ್ಯ ಸೇವನೆಯನ್ನು ಎಲ್ಲರೂ ಸಾಮೂಹಿಕವಾಗಿ ಮಾಡುತ್ತಾರೆ. ಈ ದೃಶ್ಯಗಳಿಗೆ ಆಸ್ಟ್ರೇಲಿಯಾದಲ್ಲಿರುವ ಭಾರತೀಯ ಮೂಲದ ಹಿಂದೂಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂಥ ಜಾಹೀರಾತುಗಳನ್ನು ಸಹಿಸಲು ಸಾಧ್ಯವಿಲ್ಲ ಎಂದು ಪ್ರಕಟಣೆ ಹೊರಡಿಸಲಾಗಿದೆ. ಈ ಬಗ್ಗೆ ಕ್ರಮ ಕೈಗೊಂಡಿರುವ ಸಿಡ್ನಿಯಲ್ಲಿರುವ ಭಾರತೀಯ ದೂತವಾಸ ಕಚೇರಿ, ಈ ಬಗ್ಗೆ ಪ್ರಶ್ನಿಸಿ ಜಾಹೀರಾತು ಸಂಸ್ಥೆಗೆ ನೋಟಿಸ್ ನೀಡಿದೆ. ಕೂಡಲೇ ಜಾಹೀರಾತು ಪ್ರಸಾರ ಸ್ಥಗಿತಕ್ಕೆ ನಿರ್ದೇಶಿಸಿದೆ.

English summary
An advertisement feature Hindu God Ganesha and other religious icons endorsing lamb in an Australian advertisement has irked India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X