ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಿಂದ ಮ್ಯಾಗಿ ಆಮದು ನಿಷೇಧಿಸಿದ ಆಸ್ಟ್ರೇಲಿಯಾ

By Mahesh
|
Google Oneindia Kannada News

ಸಿಡ್ನಿ, ಜೂ.16: ನೆಸ್ಲೆ ಇಂಡಿಯಾ ಉತ್ಪಾದನೆಯ ಮ್ಯಾಗಿ ಆಮದಿಗೆ ಆಸ್ಟ್ರೇಲಿಯಾ-ನ್ಯೂಜಿಲೆಂಡ್ ನಲ್ಲಿ ನಿಷೇಧ ಹೇರಲಾಗಿದೆ. ಮ್ಯಾಗಿಯಲ್ಲಿ ಹಾನಿಕಾರಕ ಅಂಶಗಳಿರುವ ಬಗ್ಗೆ ಪರೀಕ್ಷೆ ಜಾರಿಯಲ್ಲಿದೆ. ಮುನ್ನೆಚ್ಚರಿಕೆ ಕ್ರಮವಾಗಿ ತಾತ್ಕಾಲಿಕವಾಗಿ ನಿಷೇಧಿಸ ಹೇರಲಾಗಿದೆ.

ಭಾರತದ ವಿವಿಧ ರಾಜ್ಯಗಳಲ್ಲಿ ಮ್ಯಾಗಿ ಈಗಾಗಲೇ ನಿಷೇಧಗೊಂಡಿದೆ. ಆಸ್ಟ್ರೇಲಿಯಾದ ಆಹಾರ ನಿಯಂತ್ರಣ ಸಂಸ್ಥೆ ವಿಧಿಸಿರುವ ಗುಣಮಟ್ಟದ ನಿಯಮಗಳಿಗೆ ತಕ್ಕಂತೆ ಮ್ಯಾಗಿ ನೂಡಲ್ಸ್ ಇದೆ. ಅದರೆ, ಆಹಾರದ ಗುಣಮಟ್ಟದಲ್ಲಿ ರಾಜಿಯಾಗಲು ಸಾಧ್ಯವಿಲ್ಲ. ಮ್ಯಾಗಿ ಗುಣಮಟ್ಟದ ಬಗ್ಗೆ ಸಂಪೂರ್ಣ ಖಾತ್ರಿಯಾಗುವ ತನಕ ಆಮದು ಮಾಡಿಕೊಳ್ಳುವುದಿಲ್ಲ ಎಂದು ಆಸ್ಟ್ರೇಲಿಯಾ ಸರ್ಕಾರ ಹೇಳಿದೆ.

Australia suspends import of Maggi noodles from India

ನೆಸ್ಲೆ ಗ್ಲೋಬಲ್ ವೆಬ್ ಸೈಟ್ ಹಾಗೂ ನೆಸ್ಲೆ ಇಂಡಿಯಾ ಪ್ರಕಾರ ಅಲ್ಪ ಪ್ರಮಾಣದಲ್ಲಿ ಮ್ಯಾಗಿ ನೂಡಲ್ಸ್ ಯುಎಸ್, ಕೆನಡಾ, ಯುಕೆ, ಆಸ್ಟ್ರೇಲಿಯಾ, ಸಿಂಗಪುರ ಹಾಗೂ ಕೀನ್ಯಾಕ್ಕೆ ಭಾರತದಿಂದ ರಫ್ತು ಮಾಡಲಾಗುತ್ತಿದೆ. ಭಾರತದಲ್ಲಿ ಆಹಾರ ಸುರಕ್ಷತೆ ಮತ್ತು ನಿಯಂತ್ರಣ ಪ್ರಾಧಿಕಾರ ಮ್ಯಾಗಿ ಮಾರಾಟಕ್ಕೆ ನಿಷೇಧ ಹೇರಿದ ಬೆನ್ನಲ್ಲೇ ಮಾರುಕಟ್ಟೆಯಿಂದ ಮ್ಯಾಗಿ ಮಾಯವಾಗಿದೆ. (ಪಿಟಿಐ)

English summary
Australia has temporarily suspended import of Maggi noodles from India as the popular instant snack has come under mounting scrutiny over food safety concerns.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X