1,900 ಕಾಂಗರೂಗಳನ್ನು ಕೊಲ್ಲಲು ಆಸ್ಟ್ರೇಲಿಯಾದಲ್ಲಿ ಸಿದ್ದತೆ

Written By:
Subscribe to Oneindia Kannada

ಮೆಲ್ಬೋರ್ನ್, ಮೇ. 14: ಪ್ರಪಂಚದಲ್ಲಿ ಆಸ್ಟ್ರೇಲಿಯಾಕ್ಕೆ ಪರ್ಯಾಯ ಹೆಸರೊಂದನ್ನು ನೀಡಿದ್ದರೆ, ಅದು ಕಾಂಗರೂ. ಆದರೆ ಆಸ್ಟ್ರೇಲಿಯಾ ತನ್ನ ದೇಶದ ರಾಷ್ಟ್ರ ಪ್ರಾಣಿಯನ್ನು ತಾನೇ ಕೊಲ್ಲಲು ಮುಂದಾಗಿದೆ ಅಂದರೆ ನಂಬುತ್ತೀರಾ?

ನಂಬಲೇಬೇಕು, ಆಸ್ಟ್ರೇಲಿಯಾ ಸಾವಿರಾರು ಕಾಂಗರೂಗಳ ಹತ್ಯೆ ಮಾಡಲು ಮುಂದಾಗಿದೆ. ಹೆಚ್ಚಿದ ಕಾಂಗರೂ ಸಂತತಿಯಿಂದ ಪರಿಸರದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದ್ದು 1900 ಕಾಂಗರೂಗಳ ಹತ್ಯೆ ಮಾಡಲಾಗುತ್ತಿದೆ.[ಪ್ಲಾಸ್ಟಿಕ್ ನಿಷೇಧ ಅಧಿಕೃತ, ನಿಯಮ ಮುರಿದರೆ ಜೈಲೂಟ]

australia

ಸಿಡ್ನಿ ಪ್ರಾಂತ್ಯ ಎಸಿಟಿ ಸುತ್ತಲಿನ ಕಾಂಗರೂಗಳನ್ನು ಕೊಲ್ಲಲು ನಿರ್ಧಾರ ಮಾಡಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕಾಂಗರೂಗಳ ಸಂತತಿ ಹೆಚ್ಚಾದ್ದರಿಂದ ಉಳಿದ ಪ್ರಾಣಿಗಳ ಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಆಗುತ್ತಿದೆ. ಯಾವುದಾದರೂ ಔಷಧ ಬಳಸಿ ಸಂಖ್ಯೆ ಕಡಿಮೆ ಮಾಡಬಹುದೇ ಎಂಬ ಸಂಶೋಧನೆಯೂ ನಡೆಯುತ್ತಿದೆ.[ಪರಿಸರ ಹಾನಿಕಾರಕ ಬಲ್ಬ್ ಗಳ ಬಗ್ಗೆ ನಿಮಗೆಷ್ಟು ಗೊತ್ತು]

ಇನ್ನೊಂದು ಮಾಹಿತಿ, ಆಘಾತಕಾರಿಯಾದರೂ ನಂಬಲೇಬೇಕು. ಕಳೆದ ಎರಡು ವರ್ಷದ ಅವಧಿಯಲ್ಲಿ ಆಸ್ಟ್ರೇಲಿಯಾ ಸರ್ಕಾರ 4 ಸಾವಿರ ಕಾಂಗರೂಗಳನ್ನು ಕೊಲ್ಲಿಸಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
One may not believe this, but it is true. Reportedly Australian government has decided to kill over 1900 kangaroos. Sources say that government has decided to reduce its population as they can have a devastating impact on the local environment. The decision was announced on its annual measure to control the kangaroo population.
Please Wait while comments are loading...