ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಸ್ಟ್ರೇಲಿಯಾದಲ್ಲಿ ಸಂಚರಿಸಲಿದೆ ಮೋದಿ ಎಕ್ಸ್ ಪ್ರೆಸ್

|
Google Oneindia Kannada News

ನವದೆಹಲಿ, ನ.5 : ಪ್ರಧಾನಿ ನರೇಂದ್ರ ಮೋದಿ ನವೆಂಬರ್ 15 ರಂದು ಜಿ 20 ಶೃಂಗಸಭೆಯಲ್ಲಿ ಭಾಗವಹಿಸಲು ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಿದ್ದಾರೆ. ಮೋದಿಯವರ ಸ್ವಾಗತಕ್ಕೆ ಆಸ್ಟ್ರೇಲಿಯಾ ಸಿದ್ಧವಾಗಿದ್ದು ಮೇಲ್ಬೋರ್ನ್ ನಿಂದ ಸಿಡ್ನಿಯವೆರೆಗೆ ವಿಶೇಷ ರೈಲೊಂದನ್ನು ಬಿಡಲಿದೆ. ಮೋದಿ ಎಕ್ಸ್ ಪ್ರೆಸ್ ಎಂಬ ಹೆಸರಿನ ರೈಲು ಎರಡು ನಗರಗಳ ನಡುವೆ ಸಂಚರಿಸಲಿದೆ.

ನೂರಾರು ಜನ ಭಾರತೀಯ ಮೂಲದವರು ರೈಲಿನಲ್ಲಿ ಸಂಚರಿಸಲಿದ್ದಾರೆ. ಮೇಲ್ಬೋರ್ನ್ ಮತ್ತು ಸಿಡ್ನಿ ನಡುವಿನ 870 ಕಿಮೀ ದೂರ ರೈಲು ಸಂಚಾರ ಮಾಡಲಿದೆ. ಮೆಲ್ಬೋರ್ನ್ ನಿಲ್ದಾಣದಿಂದ ನವೆಂಬರ್ 16 ರ ರಾತ್ರಿ 8.30ಕ್ಕೆ ರೈಲು ಹೊರಡಲಿದೆ.[ನರೇಂದ್ರನ ಅನುಸರಿಸಿದ ದೇವೇಂದ್ರನಿಗೆ ಆಪತ್ತು!]

narendra modi

ಭಾರತೀಯ ಸಮುದಾಯವು ಸಿಡ್ನಿ ಅಲ್ಫೋನ್ಸ್ ಅರೇನಾದಲ್ಲಿ ನರೇಂದ್ರ ಮೋದಿಗೆ ಅಭಿನಂದನಾ ಸಮಾರಂಭ ಹಮ್ಮಿಕೊಂಡಿದೆ. ಈ ವೇಳೆ ಗುಜರಾತಿ ಸಿನಿಮಾವೊಂದನ್ನು ಬಿಡುಗಡೆ ಮಾಡಲಾಗುವುದು. ಆಸ್ಟ್ರೇಲಿಯಾದಲ್ಲಿ ನೆಲೆಸಿರುವ ಭಾರತೀಯರು ಮೋದಿಗೆ ವಿಶೇಷ ಅಭಿನಂದನಾ ಸಮಾರಂಭವನ್ನು ಹಮ್ಮಿಕೊಂಡಿದ್ದಾರೆ.[ಆಸ್ಟ್ರೇಲಿಯಾ ಸಂಸತ್ತಿನಲ್ಲಿ ಮೋದಿ ಭಾಷಣ]

ಮೋದಿ ತಮ್ಮ ನಾಲ್ಕು ದಿನದ ಪ್ರವಾಸದಲ್ಲಿ ಆಸ್ಟ್ರೇಲಿಯಾದ ಪ್ರಮುಖ ನಾಲ್ಕು ನಗರಗಳಿಗೆ ಭೇಟಿ ನೀಡಲಿದ್ದಾರೆ. 1986ರಲ್ಲಿ ರಾಜೀವ್ ಗಾಂಧಿ ಭೇಟಿ ನೀಡಿದ್ದ ನಂತರ ಆಸ್ಟ್ರೇಲಿಯಾಕ್ಕೆ ಇದೇ ಮೊದಲ ಭಾರಿಗೆ ಭಾರತದ ಪ್ರಧಾನಿಯೊಬ್ಬರು ಭೇಟಿ ನೀಡುತ್ತಿದ್ದಾರೆ.[ಯೋಗಕ್ಕೆ ಮೋದಿ ಮಣೆ : ಸಿಕ್ಕಿತು ಜಾಗತಿಕ ಮನ್ನಣೆ]

ಮಯನ್ಮಾರ್ ಪ್ರವಾಸ ಮುಗಿಸಿ ಮೋದಿ ನೇರವಾಗಿ ಆಸ್ಟ್ರೇಲಿಯಾ ತಲುಪಲಿದ್ದಾರೆ. ಜಿ 20 ಶೃಂಗಸಭೆಯಲ್ಲಿ ಮೋದಿ ಬ್ರಿಟನ್ ಪ್ರಧಾನಿ ಡೇವಿಡ್ ಕೆಲಮರೂನ್, ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ, ಚೀನಾ ಅಧ್ಯಕ್ಷ ಜಿನ್ ಪಿಂಗ್ ಅವರನ್ನು ಭೇಟಿ ಮಾಡಲಿದ್ದಾರೆ.

English summary
Among the things being planned is a special train, the ‘Modi Express’, which will run from Melbourne to Sydney, a grand reception by the Indian community in Sydney’s Allphones Arena, a state banquet at Melbourne Cricket Ground and a joint parliamentary session in Canberra.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X