ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಂದು ದಂಡದ ಕಥೆ: ಯೂಟ್ಯೂಬ್‌ನ ಆ 2 ವಿಡಿಯೋಕ್ಕಾಗಿ ಗೂಗಲ್‌ಗೆ 5.15 ಲಕ್ಷ ಡಾಲರ್ ಫೈನ್!

|
Google Oneindia Kannada News

ಸಿಡ್ನಿ, ಜೂನ್ 6: ಸೋಷಿಯಲ್ ಮೀಡಿಯಾವನ್ನು ಬಳಸುವ ಮುನ್ನ ಎಚ್ಚರಿಕೆ ವಹಿಸಬೇಕು. ಸ್ವಲ್ಪ ಯಾಮಾರಿದರೆ ಏನೆಲ್ಲಾ ಆಗಬಹುದು ಎನ್ನುವುದಕ್ಕೆ ಆಸ್ಟ್ರೇಲಿಯಾದಲ್ಲಿ ನಡೆದಿರುವ ಇದೊಂದು ಘಟನೆಯೇ ಸಾಕ್ಷಿಯಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಸ್ವಲ್ಪ ಎಚ್ಚರ ತಪ್ಪಿದ್ದಕ್ಕೆ ಲಕ್ಷಾಂತರ ರೂಪಾಯಿ ದಂಡ ತೆರಬೇಕಾದ ಪರಿಸ್ಥಿತಿಯು ಸ್ವತಃ ಗೂಗಲ್‌ಗೆ ಎದುರಾಗಿದೆ. ಆಸ್ಟ್ರೇಲಿಯಾದ ಶಾಸಕ ಜಾನ್ ಬರಿಲಾರೊಗೆ ವಿರುದ್ಧವಾದ ನಿಂದನೆ ಮಾಡುವಂತಹ ಅಂಶವನ್ನೊಳಗೊಂಡ ವಿಡಿಯೋವನ್ನು ಯೂಟ್ಯೂಬ್‌ನಲ್ಲಿ ಪೋಸ್ಟ್ ಮಾಡಲಾಗಿತ್ತು. ಅದು ಹೆಚ್ಚು ವೈರಲ್ ಆಗಿರುವುದರ ಬೆನ್ನಲ್ಲೇ ಗೂಗಲ್ ಈಗ ದಂಡವನ್ನು ಪಾವತಿಸುವಂತಾಗಿದೆ.

ದಲಿತ ಹೋರಾಟಗಾರ್ತಿ ತೇನ್‌ಮೊಳಿ ಕಾರ್ಯಕ್ರಮ ರದ್ದು; 'ಬ್ರಾಹ್ಮಣ' ಗೂಗಲ್ ಸಿಇಒ ಮೇಲೆ ಆಕ್ರೋಶದಲಿತ ಹೋರಾಟಗಾರ್ತಿ ತೇನ್‌ಮೊಳಿ ಕಾರ್ಯಕ್ರಮ ರದ್ದು; 'ಬ್ರಾಹ್ಮಣ' ಗೂಗಲ್ ಸಿಇಒ ಮೇಲೆ ಆಕ್ರೋಶ

ಯಾವುದೋ ಒಂದು ವಿಷಯ, ವರ್ಗ, ವ್ಯಕ್ತಿ ಮತ್ತು ಸಮುದಾಯವನ್ನು ಉದ್ದೇಶಿಸಿ ವಿಡಿಯೋಗಳನ್ನು ಮಾಡುವುದಕ್ಕೂ ಮೊದಲು ಹೇಗೆ ಎಚ್ಚರಿಕೆ ವಹಿಸಬೇಕು. ಎಚ್ಚರ ತಪ್ಪಿದರೆ ಏನಾಗಬಹುದು ಎಂಬುದನ್ನು ಇದೊಂದು ಪ್ರಕರಣದಿಂದ ನೋಡಿ ಪಾಠ ಕಲಿಯಬೇಕಿದೆ. ರಾಜಕೀಯಕ್ಕೆ ವಿದಾಯ ಹೇಳಿದ ರಾಜಕಾರಣಿಗೆ ಗೂಗಲ್ ದಂಡ ಕಟ್ಟುವಂತೆ ಆಗಿದ್ದು ಹೇಗೆ?, ಇಂಥ ರೋಚಕತೆ ಪ್ರಶ್ನೆಗೆ ಉತ್ತರವೇ 5,15,000 ಡಾಲರ್ ದಂಡದ ಕಥೆ.

ಆಸ್ಟ್ರೇಲಿಯಾದ ನ್ಯಾಯಾಲಯದಿಂದ ಭಾರೀ ದಂಡ

ಆಸ್ಟ್ರೇಲಿಯಾದ ನ್ಯಾಯಾಲಯದಿಂದ ಭಾರೀ ದಂಡ

ಜನಾಂಗೀಯ ನಿಂದನೆ, ಮಾನಹಾನಿ ಮಾಡುವಂತಾ ವಿಡಿಯೋಗಳನ್ನು ಪೋಸ್ಟ್ ಮಾಡುವ ಮೂಲಕ ರಾಜಕೀಯದಿಂದ ಹೊರ ದೂಡಲ್ಪಟ್ಟ ಆಸ್ಟ್ರೇಲಿಯಾದ ರಾಜಕಾರಣಿಗೆ ಗೂಗಲ್ ಭಾರೀ ದಂಡ ಪಾವತಿಸಿದೆ. ನಿರಂತರ ಜನಾಂಗೀಯ ನಿಂದನೆ, ಮಾನಹಾನಿಕರ ಪ್ರಚಾರಕ್ಕೆ ಸಂಬಂಧಿಸಿದಂತೆ ಶಾಸಕ ಜಾನ್ ಬರಿಲಾರೊ ಮಾನಹಾನಿ ಪ್ರಕರಣ ದಾಖಲಿಸಿದ್ದು, ಈ ಪ್ರಕರಣದ ವಿಚಾರಣೆ ನಡೆಸಿದ ಆಸ್ಟ್ರೇಲಿಯಾದ ಕೋರ್ಟ್ 515,000 ಡಾಲರ್ ದಂಡ ಪಾವತಿಸುವಂತೆ ಸೋಮವಾರ ಆದೇಶ ಹೊರಡಿಸಿದೆ.

8,00,000 ಜನರಿಂದ ವಿಡಿಯೋ ವೀಕ್ಷಣೆ

8,00,000 ಜನರಿಂದ ವಿಡಿಯೋ ವೀಕ್ಷಣೆ

ಆಸ್ಟ್ರೇಲಿಯಾದ ಹೆಚ್ಚು ಜನಸಂಖ್ಯೆ ಹೊಂದಿರುವ ಸ್ಟೇಟ್ ನ್ಯೂ ಸೌತ್ ವೇಲ್ಸ್‌ನ ಡೆಪ್ಯುಟಿ ಪ್ರೀಮಿಯರ್ ವಿರುದ್ಧ ಮಾಡಲಾಗಿರುವ ಎರಡು ವಿಡಿಯೋಗಳು ಯೂಟ್ಯೂಬ್‌ನಲ್ಲಿ ಸಖತ್ ವೈರಲ್ ಆಗಿದ್ದವು. ಕಳೆದ 2020ರ ಅಂತ್ಯದಲ್ಲಿ ಪೋಸ್ಟ್ ಮಾಡಿದ ಈ ವಿಡಿಯೋಗಳನ್ನು 8,00,000ಕ್ಕಿಂತ ಹೆಚ್ಚು ಜನರು ನೋಡಿದ್ದರು. ಈ ಅಂಶವನ್ನು ಕೋರ್ಟ್ ತನ್ನ ಆದೇಶದಲ್ಲಿ ಉಲ್ಲೇಖಿಸಿತ್ತು.

ಜಾನ್ ಬರಿಲಾರೊ ಸಮಗ್ರತೆ ಪ್ರಶ್ನಿಸಿದ ರಾಜಕೀಯ ನಿರೂಪಕ

ಜಾನ್ ಬರಿಲಾರೊ ಸಮಗ್ರತೆ ಪ್ರಶ್ನಿಸಿದ ರಾಜಕೀಯ ನಿರೂಪಕ

ಶಾಸಕ ಜಾನ್ ಬರಿಲಾರೊ ಸಮಗ್ರತೆಯನ್ನು ರಾಜಕೀಯ ನಿರೂಪಕ ಜೋರ್ಡಾನ್ ಶಾಂಕ್ಸ್ ಅವರ ವಿಡಿಯೋಗಳಲ್ಲಿ ಪ್ರಶ್ನೆ ಮಾಡಲಾಗಿತ್ತು. ಯಾವುದೇ ಪುರಾವೆಗಳಿಲ್ಲದೇ ಅವರಿಗೆ "ಭ್ರಷ್ಟ" ಎಂಬ ಹಣೆಪಟ್ಟಿಯನ್ನು ಕಟ್ಟಲಾಗಿದೆ. ಅಲ್ಲದೇ ಜನಾಂಗೀಯ ಹೆಸರುಗಳನ್ನು ಉಲ್ಲೇಖಿಸುವುದು "ದ್ವೇಷ ಭಾಷಣಕ್ಕಿಂತ ಕಡಿಮೆಯಿಲ್ಲ," ಎಂದು ನ್ಯಾಯಾಧೀಶ ಸ್ಟೀವ್ ರೇರೆಸ್ ತಿಳಿಸಿದ್ದಾರೆ.

2021ರಲ್ಲೇ ಬರಿಲಾರೊ ರಾಜಕೀಯ ವಿದಾಯ

2021ರಲ್ಲೇ ಬರಿಲಾರೊ ರಾಜಕೀಯ ವಿದಾಯ

ಕಳೆದ 2021ರ ಅಕ್ಟೋಬರ್ ತಿಂಗಳಿನಲ್ಲಿ ಜಾನ್ ಬರಿಲಾರೊ ತಮ್ಮ ರಾಜಕೀಯ ಜೀವನಕ್ಕೆ ವಿದಾಯ ಹೇಳಿದರು. ಏಕೆಂದರೆ "ಗೂಗಲ್ ಮತ್ತು ಜೋರ್ಡಾನ್ ಶಾಂಕ್ಸ್ ನಡೆಸಿದ ಈ ಅಭಿಯಾನಗಳೇ ಬರಿಲಾರೊಗೆ ಶಾಕ್ ನೀಡಿದರು. ಅಂತಿಮವಾಗಿ ಅವಧಿಗೂ ಪೂರ್ವದಲ್ಲಿಯೇ ರಾಜಕೀಯದಿಂದ ಹೊರ ನಡೆಯುವುದಕ್ಕೆ ಅದು ಕಾರಣವಾಯಿತು. "ಈ ಪ್ರಕ್ರಿಯೆಯಲ್ಲಿ ಗೂಗಲ್‌ನ ನಡವಳಿಕೆಯು ಅಸಮರ್ಪಕ ಮತ್ತು ಅಸಮರ್ಥನೀಯವಾಗಿದೆ ಎಂಬುದನ್ನು ನಾವು ಕಂಡುಕೊಂಡಿದ್ದೇನೆ," ಎಂದು ಕೋರ್ಟ್ ಹೇಳಿತು. ಕಳೆದ ವರ್ಷ ಜೋರ್ಡಾನ್ ಶಾಂಕ್ಸ್ ಮತ್ತು ಬರಿಲಾರೊ ಇತ್ಯರ್ಥಕ್ಕೆ ಬರುವವರೆಗೂ ಅವರು ಗೂಗಲ್‌ನೊಂದಿಗೆ ಸಹ-ಪ್ರತಿವಾದಿಯಾಗಿದ್ದವರು, ಆದರೆ ಪ್ರತಿಕ್ರಿಯೆಗಾಗಿ ಲಭ್ಯವಿರಲಿಲ್ಲ.

Recommended Video

ಚಲಿಸುವ ರೈಲಿನಲ್ಲಿ ಯುವಕನ ಹುಚ್ಚು ಸ್ಟಂಟ್ಸ್ | OneIndia Kannada

English summary
Australian court orders Google to pay former legislator John Barilaro $515,000 for defamatory videos posted on YouTube. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X