ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಸ್ಟ್ರೇಲಿಯಾದಲ್ಲಿ 2 ಹೊಸ ಸ್ವರೂಪದ ಕೊರೊನಾ ಸೋಂಕಿತ ಪ್ರಕರಣ ಪತ್ತೆ

|
Google Oneindia Kannada News

ಸಿಡ್ನಿ, ಡಿಸೆಂಬರ್ 21: ಬ್ರಿಟನ್‌ನಲ್ಲಿ ಕಂಡುಬಂದಿರುವ ಹೊಸ ಸ್ವರೂಪದ ಕೊರೊನಾ ಸೋಂಕು ಇದೀಗ ಆಸ್ಟ್ರೇಲಿಯಾದಲ್ಲೂ ಪತ್ತೆಯಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಆಸ್ಟ್ರೇಲಿಯಾದಲ್ಲಿ ಎರಡು ಪ್ರಕರಣಗಳು ಪತ್ತೆಯಾಗಿವೆ. ಕ್ರಿಸ್‌ಮಸ್ ಹಬ್ಬ ಆಚರಣೆ ಸಂದರ್ಭದಲ್ಲಿ ಮತ್ತಷ್ಟು ಮಂದಿಯಲ್ಲಿ ಸೋಂಕು ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಯುಕೆಯಿಂದ ದಂಪತಿ ಆಸ್ಟ್ರೇಲಿಯಾಗೆ ಬಂದಿದ್ದರು, ಅವರಿಬ್ಬರಿಗೆ ಸೋಂಕು ತಗುಲಿದೆ ಎಂದು ಹೇಳಲಾಗಿದ್ದು, ಮತ್ಯಾರಿಗೂ ಸೋಂಕಿನ ಲಕ್ಷಣ ಕಂಡುಬಂದಿಲ್ಲ.ಆಸ್ಟ್ರೇಲಿಯಾವು ಮಾರ್ಚ್‌ವರೆಗೆ ಗಡಿಯನ್ನು ಬಂದ್ ಮಾಡಿತ್ತು, ಆ ದೇಶದವರನ್ನು ಬಿಟ್ಟು ಬೇರೆ ದೇಶದವರಿಗೆ ದೇಶವನ್ನು ಪ್ರವೇಶಿಸಲು ಅನುಮತಿ ನೀಡಿರಲಿಲ್ಲ.

ಡಿ.31ರವರೆಗೂ ಬ್ರಿಟನ್‌-ಭಾರತ ವಿಮಾನಗಳ ರದ್ದುಡಿ.31ರವರೆಗೂ ಬ್ರಿಟನ್‌-ಭಾರತ ವಿಮಾನಗಳ ರದ್ದು

ಯುಕೆಯಿಂದ ಬಂದವರಿಗೆ 14 ದಿನಗಳ ಕಾಲ ಕ್ವಾರಂಟೈನ್‌ನಲ್ಲಿರಿಸಲಾಗುತ್ತದೆ. ಬ್ರಿಟನ್ ನಲ್ಲಿ ಕಂಡುಬಂದಿರುವ ಹೊಸ ಸ್ವರೂಪದ ಕೊರೊನಾ ವೈರಸ್ ಹರಡುವಿಕೆಯ ಪ್ರಮಾಣವೂ ಶೇ 70ರಷ್ಟು ವೇಗವಾಗಿದೆ ಎನ್ನಲಾಗಿದೆ.

 Australia Confirms Two Cases Of New Coronavirus Strain That Has Plagued UK

ಬ್ರಿಟನ್ ನಿಂದ ಬೇರೆಡೆ ಪ್ರಯಾಣ ಬೆಳೆಸಿರುವ ಪ್ರಯಾಣಿಕರಲ್ಲಿಯೂ ಈ ಹೊಸ ಸ್ವರೂಪದ ವೈರಸ್ ಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಯುರೋಪಿನ ದೇಶಗಳು ಬ್ರಿಟನ್ ಗೆ ವಿಮಾನ ಹಾರಾಟವನ್ನು ರದ್ದುಗೊಳಿಸಿತ್ತು. ಅಲ್ಲದೆ, ಬ್ರಿಟನ್ ನಿಂದ ಬರುವ ವಿಮಾನಗಳಿಗೂ ನಿಷೇಧ ಹೇರಿತ್ತು.

ಕೋವಿಡ್ ಉಂಟುಮಾಡುವ ವೈರಸ್ ನಿಂದಲೇ ಈ ಹೊಸ ಸ್ವರೂಪದ ವೈರಸ್ ಹುಟ್ಟಿಕೊಂಡಿದೆ ಎನ್ನಲಾಗಿದೆ. ಹೊಸ ವೈರಸ್ ನ್ನು H69/V70 ಕೊರೊನಾ ವೈರಸ್ ಎಂದ ಕರೆಯಲಾಗಿದೆ. ಆದರೆ ಈ ಹೊಸ ವೈರಸ್ ನಲ್ಲಿ ಅನೇಕ ರೀತಿಯ ಬದಲಾವಣೆಗಳನ್ನು ವಿಜ್ಞಾನಿಗಳು ಕಂಡು ಹಿಡಿದಿದ್ದಾರೆ.

ಈಗಾಗಲೇ ಕಂಡುಹಿಡಿದಿರುವ ಲಸಿಕೆಗಳು ಈ ಹೊಸ ವೈರಸ್ ಮೇಲೆಯೂ ಪರಿಣಾಮ ಬೀರಲಿದೆಯೇ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಇದು ಸಂಶೋಧನೆಯ ನಂತರವೇ ತಿಳಿಯಲಿದೆ. ಆದರೆ ಲಸಿಕೆಗಳು ಹೊಸ ವೈರಸ್ ಮೇಲೆಯೂ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ವಿಜ್ಙಾನಿಗಳು ಆಶಾಭಾವನೆ ವ್ಯಕ್ತಪಡಿಸಿದ್ದಾರೆ.

English summary
Australia confirmed on Monday it has detected two cases of a fast-spreading new coronavirus strain that has forced Britain to reverse plans to ease curbs over Christmas, the first confirmed cases of the strain in the Asia-Pacific region.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X