ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೋಮಾಲಿಯಾದ ಹೋಟೆಲ್‌ ಮೇಲೆ ಉಗ್ರರ ದಾಳಿ; 10 ಸಾವು

|
Google Oneindia Kannada News

ಮೊಗದಿಶು, ಆಗಸ್ಟ್ 17 : ಸೋಮಾಲಿಯಾದ ಕಡಲ ತೀರದ ಹೋಟೆಲ್‌ ಮೇಲೆ ಉಗ್ರರು ದಾಳಿ ನಡೆಸಿದ್ದಾರೆ. ಇದುವರೆಗೂ 10 ಜನರು ಮೃತಪಟ್ಟಿದ್ದು, 12ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. ಉಗ್ರರು ಹೋಟೆಲ್‌ನಲ್ಲಿ ಜನರನ್ನು ಒತ್ತೆಯಾಳಾಗಿ ಇಟ್ಟುಕೊಂಡಿದ್ದಾರೆ ಎಂದು ಶಂಕಿಸಲಾಗಿದೆ.

ರಾಜಧಾನಿ ಮೊಗದಿಶುವಿನಲ್ಲಿನ ಸಮುದ್ರ ತೀರದ ಹೋಟೆಲ್ ಮೇಲೆ ಉಗ್ರರು ದಾಳಿ ನಡೆಸಿದ್ದಾರೆ. ಇದುವರೆಗೂ ಇಬ್ಬರು ಉಗ್ರರನ್ನು ಕೊಂದು ಹಾಕಲಾಗಿದೆ ಎಂದು ಭದ್ರತಾ ಪಡೆಗಳು ಹೇಳಿವೆ. ಎಷ್ಟು ಉಗ್ರರು ಹೋಟೆಲ್‌ನಲ್ಲಿ ಅಡಗಿದ್ದಾರೆ? ಎಂಬ ಮಾಹಿತಿ ಸಿಕ್ಕಿಲ್ಲ.

ನೌಗಾಮ್‌ನಲ್ಲಿ ಉಗ್ರರ ದಾಳಿ: ಇಬ್ಬರು ಪೊಲೀಸರು ಹುತಾತ್ಮ ನೌಗಾಮ್‌ನಲ್ಲಿ ಉಗ್ರರ ದಾಳಿ: ಇಬ್ಬರು ಪೊಲೀಸರು ಹುತಾತ್ಮ

ಭದ್ರತಾಪಡೆಗಳ ವಾಹನಗಳು ಹೋಟೆಲ್ ಸುತ್ತುವರೆದಿವೆ. ರಾತ್ರಿಯಾದ ಕಾರಣ ಮತ್ತು ಹೋಟೆಲ್‌ನಲ್ಲಿ ಜನರನ್ನು ಒತ್ತೆಯಾಳಾಗಿ ಇಟ್ಟುಕೊಂಡಿರುವ ಕಾರಣ ಕಾರ್ಯಾಚರಣೆ ತಡವಾಗುತ್ತಿದೆ. ಸೋಮಾಲಿಯಾದ ಇಸ್ಲಾಮಿಕ್ ಉಗ್ರ ಸಂಘಟನೆ ಅಲ್-ಶಬಾಬ್ ಈ ದಾಳಿಯ ಹೊಣೆ ಹೊತ್ತುಕೊಂಡಿದೆ.

ಬೋಧ್ ಗಯಾ, ಬುರ್ದ್ವಾನ್ ಸ್ಫೋಟಕ್ಕೆ ಕಾರಣನಾದ ಉಗ್ರ ಸೆರೆಬೋಧ್ ಗಯಾ, ಬುರ್ದ್ವಾನ್ ಸ್ಫೋಟಕ್ಕೆ ಕಾರಣನಾದ ಉಗ್ರ ಸೆರೆ

Attack On Somalia Hotel 10 Killed

ಕ್ಯಾಪ್ಟನ್ ಮೊಹಮ್ಮದ್ ಹುಸೈನ್ ಮಾಧ್ಯಮಗಳ ಜೊತೆ ಮಾತನಾಡಿದ್ದು ಮೊದಲು ಸ್ಫೋಟಕ ತುಂಬಿದ್ದ ಕಾರನ್ನು ತಂದು ಹೋಟೆಲ್‌ ಮುಖ್ಯ ಗೇಟ್‌ಗೆ ಡಿಕ್ಕಿ ಹೊಡೆಸಲಾಗಿದೆ. ಬಳಿಕ ಶಸ್ತ್ರ ಸಜ್ಜಿತ ಉಗ್ರರು ಹೋಟೆಲ್‌ಗೆ ನುಗ್ಗಿದ್ದಾರೆ ಎಂದು ಹೇಳಿದ್ದಾರೆ.

ಉಗ್ರ ರಿಯಾಜ್ ಎನ್ಕೌಂಟರ್: ಹಿಜ್ಬುಲ್ ಉಗ್ರರು ಬೆಚ್ಚಿಬೀಳುವ ವಿಷಯ ಇನ್ನೊಂದಿದೆ! ಉಗ್ರ ರಿಯಾಜ್ ಎನ್ಕೌಂಟರ್: ಹಿಜ್ಬುಲ್ ಉಗ್ರರು ಬೆಚ್ಚಿಬೀಳುವ ವಿಷಯ ಇನ್ನೊಂದಿದೆ!

ಇದುವರೆಗೂ 10 ಜನರನ್ನು ಭದ್ರತಾ ಪಡೆಗಳು ರಕ್ಷಣೆ ಮಾಡಿವೆ. ಹೋಟೆಲ್ ಮೇಲ್ಭಾಗದಿಂದ ಒಳಗೆ ಹೋಗಲು ಪ್ರಯತ್ನ ನಡೆದಿದೆ. ಇಬ್ಬರು ಉಗ್ರರನ್ನು ಭದ್ರತಾಪಡೆಗಳು ಹತ್ಯೆ ಮಾಡಿವೆ.

English summary
10 people killed and more than 12 injured in ongoing siege at a beach side hotel at Somalia's Mogadishu. Police killed two attackers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X