ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Just in: ಸಲ್ಮಾನ್ ರಶ್ದಿ ಹಲ್ಲೆ; ಯಾರೊಂದಿಗೂ ಮಾತನಾಡದ ಆರೋಪಿಯ ತಂದೆ

|
Google Oneindia Kannada News

ನ್ಯೂಯಾರ್ಕ್, ಆಗಸ್ಟ್ 15: ಖ್ಯಾತ ಲೇಖಕ ಸಲ್ಮಾನ್ ರಶ್ದಿ ಅವರನ್ನು ಕೊಲೆ ಮಾಡಲು ಯತ್ನಿಸಿದ ಆರೋಪ ಹೊತ್ತಿರುವ ಆರೋಪಿಯ ತಂದೆ ಹಸನ್ ಮಾತರ್ ದಕ್ಷಿಣ ಲೆಬನಾನ್‌ನಲ್ಲಿರುವ ತನ್ನ ಮನೆಯೊಳಗೆ ಲಾಕ್ ಮಾಡಿಕೊಂಡಿದ್ದಾರೆ. ಯಾರ ಜೊತೆಗೂ ಮಾತನಾಡಲು ಒಪ್ಪುತ್ತಿಲ್ಲ ಎಂದು ಪಟ್ಟಣದ ಮೇಯರ್ ಅಲಿ ತೆಹ್ಫೆ ಹೇಳಿದ್ದಾರೆ.

ನ್ಯೂಯಾರ್ಕ್ ರಾಜ್ಯದಲ್ಲಿ ಶುಕ್ರವಾರ ನಡೆದ ದಾಳಿಯ ಶಂಕಿತ ಆರೋಪಿಯನ್ನು ನ್ಯೂಜೆರ್ಸಿಯ 24 ವರ್ಷದ ಹಾದಿ ಮಾತರ್ ಎಂದು ಪೊಲೀಸರು ಗುರುತಿಸಿದ್ದಾರೆ. ಆರೋಪಿ ತಾನು ನಿರಪರಾಧಿ ಎಂದು ವಾದಿಸುತ್ತಿದ್ದಾರೆ. ರಶ್ದಿ ಮೇಲಿನ ದಾಳಿಯ ಬಗ್ಗೆ ಯಾವುದೇ ಹೆಚ್ಚುವರಿ ಮಾಹಿತಿಯನ್ನು ಸಿಕ್ಕಿಲ್ಲ.

ಆರೋಪಿ ಹಾದಿ ಮಾತರ್ ಮೂಲತಃ ಲೆಬನಾನಿನವರು. ಅವರ ಕುಟುಂಬವು ದಕ್ಷಿಣ ಲೆಬನಾನ್ ಪಟ್ಟಣವಾದ ಯಾರೌನ್‌ನವರು. ಆತನ ಪೋಷಕರು ಯುನೈಟೆಡ್ ಸ್ಟೇಟ್ಸ್‌ಗೆ ವಲಸೆ ಹೋಗಿದ್ದರು. ಬಳಿಕ ಅವರ ತಂದೆ ಹಲವಾರು ವರ್ಷಗಳ ಹಿಂದೆ ಲೆಬನಾನ್‌ಗೆ ಮರಳಿದರು ಎಂದು ಟೆಹ್ಫೆ ಹೇಳಿದ್ದಾರೆ.

Attack on Salman Rushdie: Accused Father refuses to speak, locks himself

"ಅವರ ತಂದೆ ಹಸನ್ ಈಗ ಈ ದೇಶದಲ್ಲಿದ್ದಾರೆ. ಆದರೆ ಅವರು ಮನೆಯೊಳಗೆ ಲಾಕ್ ಆಗಿದ್ದಾರೆ. ಮತ್ತು ಯಾರಿಗೂ ಯಾವುದೇ ರೀತಿಯ ಹೇಳಿಕೆ ನೀಡಲು ಒಪ್ಪುತ್ತಿಲ್ಲ, ನಾವು ಅವರೊಂದಿಗೆ ಮಾತನಾಡಲು ಪ್ರಯತ್ನಿಸಿದ್ದೇವೆ, ಜನರನ್ನು ಕಳುಹಿಸಿದ್ದೇವೆ, ನಾವು ಹೋಗಿ ಬಾಗಿಲು ತಟ್ಟಿದ್ದೇವೆ ಆದರೆ ಅವರು ಮಾತನಾಡಲು ಒಪ್ಪುತ್ತಿಲ್ಲ" ಎಂದಿದ್ದಾರೆ.

ಇತ್ತ ಇರಾನ್ ಬೆಂಬಲಿತ ಲೆಬನಾನಿನ ಸಶಸ್ತ್ರ ಗುಂಪಿನ ಹಿಜ್ಬುಲ್ಲಾದ ಅಧಿಕಾರಿಯೊಬ್ಬರು ಸಲ್ಮಾನ್ ರಶ್ದಿ ಮೇಲಿನ ದಾಳಿಯ ಬಗ್ಗೆ ನಾವು ಯಾವುದೇ ಮಾಹಿತಿಯನ್ನು ಹೊಂದಿಲ್ಲ ಎಂದಿದ್ದಾರೆ.

ಹಿಜ್ಬುಲ್ಲಾ ಸಶಸ್ತ್ರ ಗುಂಪಾಗಿದ್ದು, ಇರಾನ್‌ನಿಂದ ಬೆಂಬಲಿತವಾಗಿದೆ, ಹಿಜ್ಬುಲ್ಲಾ ಹಿಂದಿನ ಸರ್ವೋಚ್ಚ ನಾಯಕ ಅಯತೊಲ್ಲಾ ರುಹೊಲ್ಲಾ ಖೊಮೇನಿ 1989 ರಲ್ಲಿ ಧರ್ಮನಿಂದೆಯಿದ್ದಕ್ಕಾಗಿ ಸಲ್ಮಾನ್ ರಶ್ದಿಯನ್ನು ಕೊಲ್ಲುವಂತೆ ಮುಸ್ಲಿಮರಿಗೆ ಕರೆ ನೀಡಿ ಫತ್ವಾ ಅಥವಾ ಧಾರ್ಮಿಕ ಶಾಸನವನ್ನು ಘೋಷಿಸಿದ್ದರು.

ಆರೋಪಿ ಮಾತರ್ ಅಥವಾ ಅವರ ಪೋಷಕರು ಹಿಜ್ಬುಲ್ಲಾ ಜೊತೆಗೆ ಸಂಬಂಧ ಹೊಂದಿದ್ದಾರೆಯೇ ಅಥವಾ ಬೆಂಬಲಿಸುತ್ತಾರೆಯೇ ಎಂಬುದು ಇನ್ನು ತಿಳಿದಿಲ್ಲ.

ನ್ಯೂಯಾರ್ಕ್‌ನ ಬಫಲೋ ಬಳಿಯ ಚೌಟಕ್ವಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾರತೀಯ ಮೂಲದ ಕಾದಂಬರಿಕಾರ ಮತ್ತು ಖ್ಯಾತ ಲೇಖಕ ಸಲ್ಮಾನ್ ರಶ್ದಿ ಮೇಲೆ 10-15 ಬಾರಿ ಚಾಕುವಿನಿಂದ ಇರಿದು ಹಲ್ಲೆ ಮಾಡಲಾಗಿತ್ತು. ಸಲ್ಮಾನ್ ರಶ್ದಿ ಕುತ್ತಿಗೆ ಭಾಗಕ್ಕೆ ತೀವ್ರ ಗಾಯಗಳಾಗಿದ್ದು ಹಲವು ಗಂಟೆಗಳ ಶಸ್ತ್ರಚಿಕಿತ್ಸೆಯ ನಂತರ ವೆಂಟಿಲೇಟರ್‌ನಲ್ಲಿ ಇರಿಸಲಾಗಿತ್ತು.

English summary
Attack on Author Salman Rushdie: accused Hadi Matar's Father refuses to speak, locks himself. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X