ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಹಾಯೊ ವಿವಿಯಲ್ಲಿ ದಾಳಿ, ಹನ್ನೊಂದು ಮಂದಿ ಆಸ್ಪತ್ರೆಗೆ ದಾಖಲು

ಕೊಲಂಬಸ್ ನಲ್ಲಿ ವಾಸವಿರುವ ಸೊಮಾಲಿ ಕುಟುಂಬದ ಅಬ್ದುಲ್ ರಜಾಕ್ ಅಲಿ ಅರ್ಥಾನ್ ಒಹಾಯೊ ವಿವಿಯಲ್ಲಿ ದೊಡ್ಡ ಚಾಕುವಿನಿಂದ ದಾಳಿ ನಡೆಸಿದ್ದಾನೆ. ಹನ್ನೊಂದು ಮಂದಿ ಆಸ್ಪತ್ರೆ ಸೇರಿದ್ದಾರೆ

|
Google Oneindia Kannada News

ಕೊಲಂಬಸ್, ನವೆಂಬರ್ 29: ಅಮೆರಿಕಾದ ಒಹಾಯೊ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಯೊಬ್ಬನು ನಡೆಸಿದ ದಾಳಿಯಿಂದ ಹನ್ನೊಂದು ಮಂದಿ ಆಸ್ಪತ್ರೆಗೆ ಸೇರಿದ್ದಾರೆ. ವಿವಿ ತರಗತಿಗಳು ನಡೆಯುವ ಕಟ್ಟಡದ ಬಳಿ ಸೋಮವಾರ ಕಾರಿನಲ್ಲಿ ಬಂದ ವ್ಯಕ್ತಿ ಜನರ ಮೇಲೆ ದೊಡ್ಡ ಚಾಕುವಿನಿಂದ ದಾಳಿ ನಡೆಸಿದ್ದಾನೆ. ಇದೊಂದು ಯೋಜಿತ ಕೃತ್ಯ ಎಂದು ಅಧಿಕಾರಿಗಳು ಹೇಳಿದ್ದಾರೆ.

ಅಬ್ದುಲ್ ರಜಾಕ್ ಅಲಿ ಅರ್ಥಾನ್ ದಾಳಿ ನಡೆಸಿದ ವ್ಯಕ್ತಿ. ಈತ ಕೊಲಂಬಸ್ ನಲ್ಲಿ ವಾಸವಿರುವ ಸೊಮಾಲಿಯನ್ ಕುಟುಂಬಕ್ಕೆ ಸೇರಿದವನು ಎಂದು ಗುರುತಿಸಲಾಗಿದೆ. ಆತನ ದಾಳಿಯ ಹಿಂದಿನ ಉದ್ದೇಶ ಗೊತ್ತಾಗಿಲ್ಲ. ಆದರೆ ಭಯೋತ್ಪಾದನಾ ಕೃತ್ಯ ಇದಾಗಿರಬಹುದು ಎಂದು ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.[ಅಮೆರಿಕಾಗಿಂತ ಭಾರತ ಉತ್ತಮ: ಉಗ್ರನ ಬಾಯಿಂದ ಎಂತಾ ಮಾತು?]

Ohio attacker

ದಾಳಿ ವೇಳೆ ತಕ್ಷಣ ಎಚ್ಚೆತ್ತ ಸ್ಥಳೀಯ ಪೊಲೀಸರು ದಾಳಿಕೋರ ಅರ್ಥಾನ್ ನನ್ನು ಕೆಲ ನಿಮಿಷಗಳಲ್ಲೇ ಹೊಡೆದುರುಳಿಸಿದ್ದಾರೆ. ಇಪ್ಪತ್ತು ವರ್ಷದ ಅರ್ಥಾನ್ 2014ರಲ್ಲಿ ಈ ವಿವಿ ಸೇರಿದ್ದ. ಈ ಹಿಂದೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಅವನು, ಇಷ್ಟು ದೊಡ್ಡ ಒಹಾಯೊ ರಾಜ್ಯದಲ್ಲಿ ಮುಸ್ಲಿಮರಿಗೆ ಪ್ರಾರ್ಥನೆ ಮಾಡಲು ಸ್ಥಳವಿಲ್ಲ ಎಂದು ಹೇಳಿದ್ದ.[ಕಾಬೂಲ್ : ಅಮೆರಿಕದ ವಿವಿ ಮೇಲೆ ದಾಳಿ, 12 ಜನ ಸಾವು]

ದಾಳಿ ವೇಳೆ ಕಾರಿನಲ್ಲಿ ಅರ್ಥಾನ್ ಒಬ್ಬನೇ ಇದ್ದ. ಈ ದಾಳಿಯ ಹಿಂದಿನ ಉದ್ದೇಶ ಏನು, ಅದರ ಹಿಂದೆ ಯಾರಿದ್ದಾರೆ ಎಂಬ ವಿಷಯ ಇನ್ನೂ ಗೊತ್ತಾಗಬೇಕಿದೆ ಎಂದು ಒಹಾಯೊ ರಾಜ್ಯ ವಿವಿ ಪೊಲೀಸ್ ಮುಖ್ಯಸ್ಥ ಕ್ರೆಗ್ ಸ್ಟೋನ್ ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ ಅರ್ಥಾನ್ ಯಾರ ತಂಟೆಗೂ ಹೋಗದ, ನಿತ್ಯ ಮಸೀದಿಗೆ ಪ್ರಾರ್ಥನೆಗೆ ತೆರಳುತ್ತಿದ್ದ ಸಭ್ಯ ಹುಡುಗನಾಗಿದ್ದ ಎಂದು ಆತನ ನೆರೆಮನೆಯವರು ತಿಳಿಸಿದ್ದಾರೆ.

English summary
An Ohio State student drove a car into a crowd outside a classroom building Monday morning, then got out and slashed at people with a butcher knife, sending 11 people to the hospital in what authorities said was a planned assault.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X