ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ಯಾರಿಸ್‌ನ ವಾರ ಪತ್ರಿಕೆ ಮೇಲೆ ದಾಳಿ : ಓರ್ವ ಉಗ್ರ ಶರಣು

By Kiran B Hegde
|
Google Oneindia Kannada News

ಪ್ಯಾರಿಸ್‌, ಜ. 8: ಫ್ರಾನ್ಸ್‌ನ ವಿಡಂಬನಾ ವಾರಪತ್ರಿಕೆ ಚಾರ್ಲಿ ಹೆಬ್ಡೊ ಕಚೇರಿಯಲ್ಲಿ ಬುಧವಾರ ನಡೆದ ಹತ್ಯಾಕಾಂಡದ ಹಿನ್ನೆಲೆಯಲ್ಲಿ ಕಚೇರಿ ಸುತ್ತ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಓರ್ವ ಉಗ್ರ ಶರಣಾಗಿದ್ದು, ಇನ್ನಿಬ್ಬರ ಫೋಟೊಗಳನ್ನು ಪೊಲೀಸರು ಮಾಧ್ಯಮಕ್ಕೆ ಬಿಡುಗಡೆ ಮಾಡಿದ್ದಾರೆ.

ಇಬ್ಬರು ಶಂಕಿತ ಉಗ್ರರು ಸಹೋದರರು ಎಂದು ಪೊಲೀಸರು ತಿಳಿಸಿದ್ದಾರೆ. ಅವರ ಹೆಸರು ಸೈಯದ್ ಕೌಚಿ ಮತ್ತು ಚೆರಿಫ್ ಕೌಚಿ, ಇಬ್ಬರೂ 30ರಿಂದ 35 ವರ್ಷ ವಯಸ್ಸಿನವರು ಎಂದು ಹೇಳಿದ್ದಾರೆ. ಪ್ಯಾರಿಸ್‌ನಲ್ಲಿಯೇ ಹುಟ್ಟಿ ಬೆಳೆದ ಮುಸ್ಲಿಂ ಮೂಲಭೂತವಾದಿಗಳು ಈ ಹತ್ಯಾಕಾಂಡ ನಡೆಸಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. [ವ್ಯಂಗ್ಯಚಿತ್ರ ಪತ್ರಿಕೆ ಕಚೇರಿಯಲ್ಲಿ ಹತ್ಯಾಕಾಂಡ]

terror

ಮೂರನೇ ಶಂಕಿತನ ಹೆಸರು ಹಮಿದ್ ಮೌರಾದ್ (18). ಈತ ಪೊಲೀಸರಿಗೆ ಶರಣಾಗಿದ್ದಾನೆ. ತಾನಾಗಿಯೇ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದು, ಆತನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. [ಕೋಸ್ಟ್ ಗಾರ್ಡ್ ಕಣ್ಣಿಗೆ ಪಾಕ್ ದೋಣಿ ಬಿದ್ದಿದ್ದು ಹೇಗೆ]

ಚಾರ್ಲಿ ಹೆಬ್ಡೊ ವ್ಯಂಗ್ಯಚಿತ್ರ ವಾರಪತ್ರಿಕೆಯ ಮೇಲೆ ಬುಧವಾರ ಮುಸುಕುಧಾರಿ ಉಗ್ರರು ಇಸ್ಲಾಂ ಪರ ಘೋಷಣೆ ಕೂಗುತ್ತ ದಾಳಿ ನಡೆಸಿದ್ದರು. ಪತ್ರಿಕೆಯ ಪ್ರಧಾನ ಸಂಪಾದಕ ಸೇರಿ 12 ಜನ ಪತ್ರಕರ್ತರು ಹಾಗೂ ವ್ಯಂಗ್ಯಚಿತ್ರಕಾರರು ಮೃತಪಟ್ಟಿದ್ದರು. ಪ್ರವಾದಿ ಮೊಹಮ್ಮದ್ ಕುರಿತು ಪದೇ ಪದೆ ಈ ವಾರಪತ್ರಿಕೆ ವ್ಯಂಗ್ಯಚಿತ್ರ ಪ್ರಕಟಿಸುತ್ತಿತ್ತು. ಈಚೆಗೆ ಫ್ರಾನ್ಸ್ ಶೀಘ್ರ ಮುಸ್ಲಿಂ ಆಡಳಿತಕ್ಕೆ ಒಳಪಡುತ್ತದೆ ಎಂಬ ಕಾಲ್ಪನಿಕ ಚಿತ್ರಲೇಖನ ಪ್ರಕಟಿಸಿತ್ತು.

English summary
A suspected terror Hamyd Mourad has surrendered in attack on French newspaper Charlie Hebdo. Police have released photos of 2 suspected terror brothers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X