ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಣಿ ಕಂಪನಿ ವಾಹನಗಳ ಮೇಲೆ ಉಗ್ರರ ದಾಳಿ: 37 ಕಾರ್ಮಿಕರ ಹತ್ಯೆ

|
Google Oneindia Kannada News

ಬುರ್ಕಿನಾ ಫಾಸೊ, ನವೆಂಬರ್ 7: ಪಶ್ಚಿಮ ಆಫ್ರಿಕಾದಲ್ಲಿ ಕೆನೆಡಿಯನ್ ಗಣಿ ಕಂಪನಿ ವಾಹನದ ಮೇಲೆ ಉಗ್ರಗಾಮಿಗಳು ದಾಳಿ ನಡೆಸಿದ ಪರಿಣಾಮ 37 ಮಂದಿ ಮೃತಪಟ್ಟಿದ್ದು, 60ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಜಿಹಾದಿ(ಧರ್ಮಯುದ್ಧ) ಉಗ್ರಗಾಮಿಗಳು ಮತ್ತೆ ಅಟ್ಟಹಾಸ ಮೆರೆದಿದ್ದಾರೆ. ಶಸ್ತ್ರಸಜ್ಜಿತ ಬಂಡುಕೋರರು ನಡೆಸಿದ ಭೀಕರ ದಾಳಿಯೊಂದರಲ್ಲಿ 37 ಮಂದಿ ಹತರಾಗಿ, ಅನೇಕರು ಗಾಯಗೊಂಡಿದ್ದಾರೆ.

ಬುರ್ಕಿನಾ ಫಾಸೋದ ಕೆನಡಾ ಗಣಿ ಕಂಪೆನಿಯ ಕಾರ್ಮಿಕರನ್ನು ಹೊತ್ತೊಯ್ಯುತ್ತಿದ್ದ 5 ಬಸ್‍ಗಳ ಮೇಲೆ ಉಗ್ರರು ದಾಳಿ ನಡೆಸಿ 37 ನೌಕರರನ್ನು ಕೊಂದು ಹಾಕಿದ್ದಾರೆ.

Attack On Canadian Mining Company Convoy In Burkina Faso

ಈ ಭೀಕರ ನರಮೇಧದಲ್ಲಿ ಅನೇಕರು ಗಾಯಗೊಂಡಿದ್ದಾರೆ ಎಂದು ಪೂರ್ವ ಪ್ರಾಂತ್ಯದ ಗೌರ್ನರ್ ಸೈಡೌ ಸಂಗು ತಿಳಿಸಿದ್ದಾರೆ. ಐದು ಬಸ್‌ಗಳಿಗೆ ಬೆಂಗಾವಲಿನಲ್ಲಿ ರಕ್ಷಣೆಗೆ ನಿಯೋಜಿತವಾಗಿದ್ದ ಮಿಲಿಟರಿ ವಾಹನ ಸಹ ಸ್ಫೋಟಕದಿಂದ ಹಾನಿಗೀಡಾಗಿದೆ.

ಸ್ಯಾಮಫೋ ಗಣಿ ಸಂಸ್ಥೆಗೆ ಸ್ಥಳೀಯ ಕಾರ್ಮಿಕರು, ಗುತ್ತಿಗೆದಾರರು ಮತ್ತು ಸಾಮಗ್ರಿ ಪೂರೈಕೆದಾರರನ್ನು ಹೊತ್ತು ಐದು ಬಸ್‍ಗಳು ಚಲಿಸುತ್ತಿದ್ದವು. ಮಾರ್ಗ ಮಧ್ಯೆ ನಿರ್ಜನ ಪ್ರದೇಶದ ಮರೆಯಲ್ಲಿ ಅಡಗಿದ್ದ ಉಗ್ರರ ಗುಂಪುಗಳು ರಸ್ತೆಯ ಎರಡೂ ಕಡೆಗಳಿಂದ ಗುಂಡಿನ ಸುರಿಮಳೆಗರೆದರು. ಏನಾಗುತ್ತಿದೆ ಎಂದು ತಿಳಿಯುವುದಕ್ಕೆ ಮುನ್ನವೇ ಹಲವರು ಹತರಾದರು ಎಂದು ಅವರು ಹೇಳಿದ್ದಾರೆ.

English summary
Gunmen in Burkina Faso killed at least 37 people on Wednesday in an attack on a convoy carrying employees,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X