ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆನಡಾ ಸಂಸತ್ ಮೇಲೆ ಉಗ್ರ ದಾಳಿ, ಯೋಧನ ಹತ್ಯೆ

|
Google Oneindia Kannada News

ಒಟ್ಟಾವಾ, ಅ. 23 : ಕೆನಡಾ ಸಂಸತ್‌ ಮೇಲೆ ಬಂದೂಕುಧಾರಿಯೊಬ್ಬ ಗುಂಡಿನ ದಾಳಿ ನಡೆಸಿದ್ದು ಭಧ್ರತಾ ಪಡೆಯ ಯೋಧನೊಬ್ಬ ಹತನಾಗಿದ್ದಾನೆ. ಉಗ್ರನನ್ನು ಭದ್ರತಾ ಪಡೆ ಸೈನಿಕರು ಹತ್ಯೆ ಮಾಡಿದ್ದಾರೆ.

ಬುಧವಾರ ಅಪರಿಚಿತ ಬಂದೂಕುಧಾರಿ ಏಕಾಏಕಿ ಗುಂಡಿನ ದಾಳಿ ನಡೆಸಿದ. ದಾಳಿ ವೇಳೆ ಕೆನಡಾ ಸಂಸತ್‌ನಲ್ಲಿ ಪ್ರಧಾನಿ ಸ್ಟೀಫನ್ ಹಾರ್ಪರ್ ಮಾತನಾಡುತ್ತಿದ್ದರು. ತಕ್ಷಣ ಕಾರ್ಯನಿರತವಾದ ರಕ್ಷಣಾ ಪಡೆ ಗುಂಡು ಹಾರಿಸಿದ ಉಗ್ರನನ್ನು ಹತ್ಯೆ ಮಾಡಿದೆ.[ಭಾರತ ದುರ್ಬಲಗೊಳಿಸಲು ಪಾಕ್ ಬಳಿ ಹೊಸ ಅಸ್ತ್ರ]

canada

ಕಾರಿನಲ್ಲಿ ಆಗಮಿಸಿದ ಉಗ್ರ ಕನಿಷ್ಠ 20 ಬಾರಿ ಗುಂಡು ಹಾರಿಸಿ ನಂತರ ಸಂಸತ್‌ ಪ್ರವೇಶಿಸುವ ಪ್ರಯತ್ನ ಮಾಡಿದ್ದಾನೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ವಿವರಿಸಿದ್ದಾರೆ. ಗುಂಡಿನ ದಾಳಿಗೆ ನಡುಗಿರುವ ಸಂಸತ್ ಕಟ್ಟಡಕ್ಕೆ ಸದ್ಯ ಬೀಗ ಹಾಕಲಾಗಿದ್ದು ಬಿಗಿ ಭದ್ರತೆ ಕಲ್ಪಿಸಲಾಗಿದೆ.

ಕೆನಡಾದಲ್ಲಿ ಕಳೆದ ಮೂರು ದಿನಗಳಲ್ಲಿ ಇದು ಎರಡನೇ ಉಗ್ರ ದಾಳಿಯಾಗಿದೆ. ಭಯೋತ್ಪಾದಕರ ದಾಳಿ ಖಂಡಿಸಿರುವ ಪ್ರಧಾನಿ ಹಾರ್ಪರ್ ನಾವು ಉಗ್ರರ ದಾಳಿಯನ್ನು ಸಹಿಸುವುದಿಲ್ಲ. ಇವರಿಗೆ ತಕ್ಕ ಉತ್ತರ ನೀಡುತ್ತೇವೆ ಎಂದು ಎಚ್ಚರಿಸಿದ್ದಾರೆ. ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ದಾಳಿಯ ಸಮಗ್ರ ಮಾಹಿತಿ ಪಡೆದುಕೊಂಡಿದ್ದಾರೆ.[ವಿದೇಶಿ ಪ್ರವಾಸಿಗರ ಮೇಲೆ ಬಿತ್ತು ಉಗ್ರರ ವಕ್ರದೃಷ್ಟಿ]

ಭದ್ರತಾ ಪಡೆಗಳು ರಕ್ಷಣಾ ಕ್ರಮ ತೆಗೆದುಕೊಳ್ಳಲು ಸೂಚನೆ ನೀಡಿದ್ದು ಜನರು ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಿವೆ.

English summary
A Canadian soldier who was shot and wounded by an unidentified gunman at the National War Memorial in Ottawa, succumbed to his injuries, news agency AFP reported. The Canadian capital was rattled with three confirmed incidents of shooting inside the country's Parliament buildings, War Memorial and a shopping mall.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X