ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಟಲ್ ಬಿಹಾರಿ ವಾಜಪೇಯಿಗೆ ಬಾಂಗ್ಲಾದೇಶದಿಂದ ಸನ್ಮಾನ

By Mahesh
|
Google Oneindia Kannada News

ಢಾಕಾ, ಜೂ.1: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಸನ್ಮಾನಿಸಲು ಬಾಂಗ್ಲಾ ದೇಶ ಸರ್ಕಾರ ಮುಂದಾಗಿದೆ. 1971ರಲ್ಲಿ ಲೋಕಸಭಾ ಸದಸ್ಯರಾಗಿದ್ದ ವಾಜಪೇಯಿ ಅವರು ಪಾಕಿಸ್ತಾನದಿಂದ ಬಾಂಗ್ಲಾದೇಶಕ್ಕೆ ಸ್ವಾತಂತ್ರ್ಯ ಸಿಗಬೇಕು ಎಂದು ಬಲವಾಗಿ ಪ್ರತಿಪ್ರಾದಿಸಿದ್ದರು.

ವಾಜಪೇಯಿ ಅವರು ಅನಾರೋಗ್ಯ ಪೀಡಿತರಾಗಿರುವುದರಿಂದ ಅವರ ಪರವಾಗಿ ನರೇಂದ್ರ ಮೋದಿ ಅವರು ಪ್ರಶಸ್ತಿ ಪಡೆಯಲಿದ್ದಾರೆ. ಜೂ.6ರಂದು ಬಾಂಗ್ಲಾದೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ತೆರಳುತ್ತಿದ್ದಾರೆ. ವಾಜಪೇಯಿ ಅವರ ಪರವಾಗಿ 'ಫ್ರೆಂಡ್ ಆಫ್ ಬಾಂಗ್ಲಾದೇಶ್ ಲಿಬರೇಷನ್ ವಾರ್ ಅವಾರ್ಡ್' ಪಡೆದುಕೊಳ್ಳಲಿದ್ದಾರೆ ಎಂದು ಎಂದು ವಿದೇಶಾಂಗ ಸಚಿವಾಲಯದ ವಕ್ತಾರರು ಹೇಳಿದ್ದಾರೆ.

1971ರ ಬಾಂಗ್ಲಾ-ಪಾಕ್ ವಿಭಜನೆ ವೇಳೆ ಆಗ ಜನಸಂಘದ ಅಧ್ಯಕ್ಷರು ಹಾಗೂ ಸಂಸದರೂ ಆಗಿದ್ದ ವಾಜಪೇಯಿ ದೃಢವಾದ ನಿರ್ಧಾರ ತಳೆದು, ಆ ಪ್ರಸ್ತಾವನೆಯನ್ನು ಬಲವಾಗಿ ಬೆಂಬಲಿಸಿದ್ದರು ಎಂದು ವಕ್ತಾರರು ಸ್ಮರಿಸಿದ್ದಾರೆ.

Atal Bihari Vajpayee to be honoured by Bangladesh

ಇದರ ಜೊತೆಗೆ ಬಾಂಗ್ಲಾ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ ಭಾರತೀಯ ಯೋಧರ ಪಡೆ ಹಾಗೂ ಹುತಾತ್ಮರ ಕುಟುಂಬದ ಬೆಂಬಲವನ್ನು ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರು ಸ್ಮರಿಸಿದ್ದು, ಯೋಧರ ಕುಟುಂಬಕ್ಕೂ ಸನ್ಮಾನ ಪತ್ರ ಸಿಗಲಿದೆ.

2008ರಿಂದ ವಿದೇಶಿ ಗೆಳೆಯರನ್ನು ಅವಾಮಿ ಲೀಗ್ ಸರ್ಕಾರ ಆದರದಿಂದ ಕಾಣುತ್ತಿದೆ. ಈ ಮುಂಚೆ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರಿಗೆ ಗೆಳೆತನ ದ್ಯೋತಕವಾಗಿ ಪ್ರಶಸ್ತಿ ನೀಡಲಾಗಿತ್ತು. ಇಂದಿರಾಗಾಂಧಿ ಅವರ ಸೊಸೆ ಸೋನಿಯಾ ಗಾಂಧಿ ಅವರು ಪ್ರಶಸ್ತಿ ಪಡೆದುಕೊಂಡಿದ್ದರು. (ಪಿಟಿಐ)

English summary
Bangladesh is set to honour former premier Atal Bihari Vajpayee for his outstanding support for the country's independence from Pakistan in 1971 when he was a Lok Sabha member.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X