ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುನಾಮಿ ಅಬ್ಬರಕ್ಕೆ ತತ್ತರಿಸಿದ ಸುಂದಾ ಜಲಸಂಧಿ, 168 ಮಂದಿ ಸಾವು

|
Google Oneindia Kannada News

ಜಕಾರ್ತ (ಇಂಡೋನೇಷ್ಯಾ), ಡಿಸೆಂಬರ್ 23: ಸುನಾಮಿಯಿಂದ 168 ಮಂದಿ ಮೃತಪಟ್ಟು, 600 ಮಂದಿ ಗಾಯಗೊಂಡಿದ್ದಾರೆ ಎಂದು ಇಂಡೋನೇಷ್ಯಾ ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ. ಸುಂದಾ ಜಲಸಂಧಿಯಲ್ಲಿ 40 ಮಂದಿ ಮೃತಪಟ್ಟು, 584 ಮಂದಿ ಗಾಯಗೊಂಡಿದ್ದಾರೆ. ಇಬ್ಬರು ನಾಪತ್ತೆಯಾಗಿದ್ದಾರೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣೆ ವಕ್ತಾರರು ಮಾಹಿತಿ ನೀಡಿದ್ದಾರೆ.

ಇತರ ಮೂವರು ಸೆರಾಂಗ್ ಬಳಿ ಮೃತಪಟ್ಟಿದ್ದಾರೆ ಎಂದು ತಿಳಿಸಲಾಗಿದೆ. ಹತ್ತಾರು ಕಟ್ಟಡಗಳಿಗೆ ಹಾನಿಯಾಗಿವೆ. ಯಾವುದೇ ಸೂಚನೆಯಿಲ್ಲದೆ ದಕ್ಷಿಣ ಸುಮಾತ್ರ ಹಾಗೂ ಪಶ್ಚಿಮ ತುದಿಯ ಜಾವಾವನ್ನು ಸುನಾಮಿ ಅಪ್ಪಳಿಸಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಇಂಡೋನೇಷ್ಯಾದ ಲಾಂಬೋಕ್ ನಲ್ಲಿ ಭೂಕಂಪ: 5.5 ತೀವ್ರತೆ ದಾಖಲುಇಂಡೋನೇಷ್ಯಾದ ಲಾಂಬೋಕ್ ನಲ್ಲಿ ಭೂಕಂಪ: 5.5 ತೀವ್ರತೆ ದಾಖಲು

ಹುಣ್ಣಿಮೆ ಇದ್ದುದರಿಂದ ಕಾಣಿಸಿಕೊಂಡ ಅಲೆಗಳಲ್ಲಿನ ಅಸಾಮಾನ್ಯ ಏರಿಕೆ, ನೀರಿನ ಆಳದಲ್ಲಿನ ಭೂ ಕುಸಿತ ಹಾಗೂ ಅನಕ್ ಕ್ರಾಕಟೋವಾದಲ್ಲಿನ ಜ್ವಾಲಾಮುಖಿ ಇವೆಲ್ಲವೂ ಸೇರಿ ಜಾವಾ ಹಾಗೂ ಸುಮಾತ್ರಾ ಮಧ್ಯೆ ಇರುವ ಸುಂದಾ ಜಲಸಂಧಿಯಲ್ಲಿ ಸುನಾಮಿ ಸೃಷ್ಟಿಸಿದೆ ಎನ್ನಲಾಗಿದೆ.

Tsunami

ಎಲ್ಲವೂ ಸೇರಿಕೊಂಡು ದಿಢೀರ್ ಎಂದು ಸುನಾಮಿ ಸೃಷ್ಟಿಯಾಗಿ, ಕಡಲ ತೀರವನ್ನು ಅಪ್ಪಳಿಸಿದೆ. ಆದರೆ ಈ ಬಗ್ಗೆ ನಿಖರ ಕಾರಣವನ್ನು ತಿಳಿದುಕೊಳ್ಳುವ ಸಲುವಾಗಿ ಇಂಡೋನೇಷ್ಯಾದ ಭೂಗರ್ಭ ಇಲಾಖೆ ಪ್ರಯತ್ನಿಸುತ್ತಿದೆ. ಸಾವಿನ ಸಂಖ್ಯೆ ಇನ್ನಷ್ಟು ಏರಿಕೆ ಆಗುವ ಸಾಧ್ಯತೆ ಇದೆ.

English summary
At least 43 people have been killed and nearly 600 injured in a tsunami in Indonesia, officials said Sunday. “In the Sunda Strait 40 people have died, 584 people were injured and two people are missing,” national disaster agency spokesman Sutopo Purwo Nugroho said in a statement.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X