ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂಡೋನೇಷ್ಯಾದಲ್ಲಿ ಪ್ರಬಲ ಭೂಕಂಪ: 40ಕ್ಕೂ ಹೆಚ್ಚು ಜನರು ಸಾವು

|
Google Oneindia Kannada News

ಜಕಾರ್ತ, ಜನವರಿ 16: ಇಂಡೋನೇಷ್ಯಾದ ಸುಲವೇಸಿ ದ್ವೀಪದಲ್ಲಿ ಭೀಕರ ಭೂಕಂಪ ಸಂಭವಿಸಿದೆ. ಭೂಕಂಪದ ತೀವ್ರತೆ 40ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, ನೂರಾರು ಜನರು ಗಾಯಗೊಂಡಿದ್ದಾರೆ.

ಭೂಕಂಪದ ತೀವ್ರತೆಯನ್ನು ರಿಕ್ಟರ್ ಮಾಪಕದಲ್ಲಿ 6.2 ಎಂದು ದಾಖಲಾಗಿದೆ. ಭೂಕಂಪದ ಕೇಂದ್ರಬಿಂದು ಮಜಾನೆ ನಗರದ ಈಶಾನ್ಯಕ್ಕೆ 6 ಕಿಲೋಮೀಟರ್ ದೂರದಲ್ಲಿದ್ದು, ಸುದ್ದಿ ಸಂಸ್ಥೆ ರಾಯಿಟರ್ಸ್ ಪ್ರಕಾರ, ಭೂಕಂಪದ ಕೇಂದ್ರಬಿಂದು ಭೂಮಿಯಿಂದ 10 ಕಿಲೋಮೀಟರ್ ಕೆಳಗೆ ವರದಿಯಾಗಿದೆ. ಭೂಕಂಪನ ಸುಮಾರು 10 ಸೆಕೆಂಡುಗಳ ಕಾಲ ಅನುಭವಿಸಿತು.

ಭೂಕಂಪದಿಂದ ಆಸ್ಪತ್ರೆ ಕಟ್ಟಡ ಕುಸಿದು ಬಿದ್ದಿದ್ದರಿಂದ ರೋಗಿಗಳು, ವೈದ್ಯರುಗಳು ಕೂಡ ಅವಶೇಷಗಳಡಿ ಸಿಲುಕಿದ್ದು ರಕ್ಷಣಾ ಕಾರ್ಯ ಭರದಿಂದ ಸಾಗಿದೆ. ಭೂಕಂಪದ ಸಂಬಂಧ ಫೋಟೊಗಳು, ವಿಡಿಯೋಗಳು ಹರಿದಾಡುತ್ತಿದ್ದು, ಕಟ್ಟಡಗಳು ನೆಲಸಮವಾಗಿರುವುದು ಮನ ಕಲಕುವಂತಿದೆ.

At Least 40 Killed As Earthquake Rocks Indonesia

ಇದಕ್ಕೂ ಮುನ್ನ 2004 ಮತ್ತು 2018 ರಲ್ಲಿ ಇಂಡೋನೇಷ್ಯಾದಲ್ಲಿ ಬಲವಾದ ಭೂಕಂಪನ ಸಂಭವಿಸಿದೆ. 2018 ರಲ್ಲಿ ಸಂಭವಿಸಿದ ಭೀಕರ ಭೂಕಂಪದಲ್ಲಿ ಸುಮಾರು 4,300 ಜನರು ಸಾವನ್ನಪ್ಪಿದ್ದಾರೆ. 2018 ರ ಭೂಕಂಪವು ರಿಕ್ಟರ್ ಮಾಪಕದಲ್ಲಿ 7.5 ರಷ್ಟು ತೀವ್ರತೆ ದಾಖಲಾಗಿತ್ತು.

At Least 40 Killed As Earthquake Rocks Indonesia

ಇನ್ನು 2004ರಲ್ಲಿ ನಡೆದ ಭೂಕಂಪನದಲ್ಲೂ ಇಂಡೋನೇಷ್ಯಾ ಭಾರೀ ಪ್ರಮಾಣದಲ್ಲಿ ನಲುಗಿತ್ತು. ಬರೋಬ್ಬರಿ ಎರಡೂವರೆ ಲಕ್ಷ ಜನರು ಸಾವನ್ನಪ್ಪಿದರು. ಇಂದಿನವರೆಗೂ ಆ ಭೂಕಂಪದ ಭಯವನ್ನು ಮರೆಯಲಾಗಿಲ್ಲ. 2004 ರಲ್ಲಿ ಸಂಭವಿಸಿದ ಭೂಕಂಪದ ತೀವ್ರತೆಯನ್ನು 9.1 ಎಂದು ಅಳೆಯಲಾಯಿತು.

English summary
A powerful earthquake hit the Indonesian island of Sulawesi early on Friday, killing at least 40 people, injuring hundreds and severely damaging buildings.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X