ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೈವಾನ್‌ನಲ್ಲಿ ಭೀಕರ ರೈಲು ಅಪಘಾತ: ಕನಿಷ್ಠ 36 ಮಂದಿ ದುರ್ಮರಣ

|
Google Oneindia Kannada News

ತೈಪೇ, ಏಪ್ರಿಲ್ 2: ತೈವಾನ್‌ನಲ್ಲಿ ಸಂಭವಿಸಿದ ಭೀಕರ ರೈಲ್ವೆ ಅಪಘಾತದಲ್ಲಿ ಕನಿಷ್ಠ 36 ಮಂದಿ ಮೃತಪಟ್ಟಿರುವ ಕುರಿತು ವರದಿಯಾಗಿದೆ.

ಇದೇ ರೈಲು ಮಾರ್ಗದಲ್ಲೇ 2018ರಲ್ಲೂ ಹಳಿ ತಪ್ಪಿದ ದುರಂತ ಸಂಭವಿಸಿತ್ತು. ಈ ವೇಳೆ 18 ಮಂದಿ ಸಾವನ್ನಪ್ಪಿದ್ದರು. ಅಪಘಾತದ ತೀವ್ರತೆ ದೊಡ್ಡ ಪ್ರಮಾಣದ್ದು ಎಂದು ಹೇಳಲಾಗುತ್ತಿದ್ದು, ಖುದ್ದಾಗಿ ತೈವಾನ್ ಅಧ್ಯಕ್ಷರಾದ ತ್ಸೈ ಇಂಗ್-ವೆನ್ ಅವರು ಹುವಾಲಿಯನ್ ಆಸ್ಪತ್ರೆಗಳಿಗೆ ಬೃಹತ್ ಪ್ರಮಾಣದ ಚಿಕಿತ್ಸೆಗೆ ಸಿದ್ಧರಾಗಿ ಎಂದು ಸೂಚನೆ ನೀಡಿದ್ದಾರೆ.

72ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ, ಅಲ್ಲದೆ ದುರಂತದಲ್ಲಿ ಸಿಲುಕಿರುವವರ ರಕ್ಷಣೆಗೆ ಪ್ರಧಾನ ಒತ್ತು ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಇದು ದುರಂತದ ಕುರಿತು ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ.

At Least 36 Dead In Taiwan Train Crash

ತೈವಾನ್ ನ ಕರಾವಳಿ ನಗರ ಹುವಾಲಿಯನ್ ನ ಪೂರ್ವ ರೈಲ್ವೆ ಮಾರ್ಗದ ಸುರಂಗದಲ್ಲಿ ಈ ದುರಂತ ಸಂಭವಿಸಿದ್ದು, ಘಟನೆಯಲ್ಲಿ ಕನಿಷ್ಟ 36 ಮಂದಿ ಸಾವನ್ನಪ್ಪಿದ್ದಾರೆ ಎಂದು ತೈವಾನ್ ಸರ್ಕಾರ ಮಾಹಿತಿ ನೀಡಿದೆ.

ಸ್ಥಳೀಯ ಕಾಲಮಾನದ ಪ್ರಕಾರ ಬೆಳಗ್ಗೆ 9.30ಕ್ಕೆ ಈ ದುರಂತ ಸಂಭವಿಸಿದ್ದು, ಸ್ಥಳದಲ್ಲೇ ಹತ್ತಾರು ಮಂದಿ ಸಾವನ್ನಪ್ಪಿದ್ದಾರೆ. ರೈಲಿನ ಸುಮಾರು 5ಕ್ಕೂ ಹೆಚ್ಚು ಬೋಗಿಗಳು ಜಖಂ ಆಗಿದ್ದು, ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ.

English summary
At least 36 people have died after a train derailed on Friday in eastern Taiwan, while 72 were injured, the transport ministry said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X