ಗ್ವಾಟೆಮಾಲಾದಲ್ಲಿ ಘೋರ ದುರಂತ: 22 ಯುವತಿರ ಸಜೀವ ದಹನ

Posted By:
Subscribe to Oneindia Kannada

ಸ್ಯಾನ್ ಒಸೆ ಪಿನುಲಾ, ಮಾರ್ಚ್ 09: ಮಧ್ಯ ಅಮೆರಿಕದ ದೇಶ ಗ್ವಾಟೆಮಾಲಾದ ರಾಜಧಾನಿಯಲ್ಲಿ ಘೋರ ದುರಂತ ಸಂಭವಿಸಿದೆ. ಮಹಿಳಾ ಮತ್ತು ಮಕ್ಕಳ ನಿರಾಶ್ರಿತರ ಶಿಬಿರದಲ್ಲಿ 22 ಮಂದಿ ಸಜೀವ ದಹನವಾಗಿದ್ದಾರೆ.

ಮಹಿಳಾ ವಿಭಾಗದಲ್ಲಿ ಕಾಣಿಸಿಕೊಂಡ ಭೀಕರ ಬೆಂಕಿ ದುರಂತದಲ್ಲಿ 22 ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲಾಗಿದೆ.

ನಿರಾಶ್ರಿತರ ಶಿಬಿರದಲ್ಲಿ ಮೂಲ ಸೌಕರ್ಯಗಳ ಕೊರತೆ ಇರುವುದನ್ನು ಪ್ರಶ್ನಿಸಿದ ನಿರ್ವಹಣಾ ಸಿಬ್ಬಂದಿ ವಿರುದ್ಧ ನಿವಾಸಿಗಳು ಪ್ರತಿಭಟನೆ ಕೈಗೊಂಡಿದ್ದಾರೆ. ಹಲವರು ಸಾಮೂಹಿಕವಾಗಿ ಕೇಂದ್ರದಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ.

At least 22 dead as fire ravages youth shelter in Guatemala

ಈ ಸಂದರ್ಭದಲ್ಲಿ ಉದ್ರಿಕ್ತರ ಗುಂಪೊಂದು ಬೆಂಕಿ ಹಚ್ಚಿದೆ. ಬೆಡ್, ಮರದ ವಸ್ತುಗಳಿಗೆ ಬೆಂಕಿ ತಗುಲಿ ಎತ್ತರದ ಜ್ವಾಲೆ ಹೊತ್ತಿ ಉರಿದಿದೆ. ನಿವಾಸ ಕೇಂದ್ರದ ಒಳಗೆ ಉಳಿದಿದ್ದ ಹಲವಾರು ಮಂದಿಹೊರ ಬರಲಾರದೇ ಬೆಂಕಿಗೆ ಆಹುತಿಯಾಗಿದ್ದಾರೆ. ಮೃತರಲ್ಲಿ ಎಲ್ಲರೂ ಯುವತಿಯರು ಎಂದು ತಿಳಿದು ಬಂದಿದೆ. ಗಾಯಾಳುಗಳ ಪೈಕಿ ಹಲವರ ಸ್ಥಿತಿ ಗಂಭೀರವಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. (ಪಿಟಿಐ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
At least 22 dead as fire ravages youth shelter in Guatemala.The trouble started with a mass escape. Dozens of teens held in an overcrowded state-run shelter on the outskirts of Guatemala’s capital flooded through the gates Tuesday evening, most only to be caught and locked down in their dorms.
Please Wait while comments are loading...