ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮ್ಯಾಡ್ರಿಡ್ ಕಟ್ಟಡ ಸ್ಫೋಟ: ಇಬ್ಬರು ಸಾವು, ಹಲವರಿಗೆ ಗಾಯ

|
Google Oneindia Kannada News

ಮ್ಯಾಡ್ರಿಡ್, ಜನವರಿ 20: ಮ್ಯಾಡ್ರಿಡ್ ಕಟ್ಟಡವೊಂದರಲ್ಲಿ ಭಾರಿ ಸ್ಫೋಟ ಸಂಭವಿಸಿದ್ದು, ಇಬ್ಬರು ಮೃತಪಟ್ಟಿದ್ದು, ಅನೇಕರಿಗೆ ಗಾಯಗಳಾಗಿವೆ. ಅನಿಲ ಸೋರಿಕೆಯಿಂದ ಕಟ್ಟಡದಲ್ಲಿ ಸ್ಫೋಟವಾಗಿರುವ ಶಂಕೆ ವ್ಯಕ್ತವಾಗಿದೆ.

ಘಟನಾ ಸ್ಥಳಕ್ಕೆ 5 ತಂಡ ದ ಅಗ್ನಿಶಾಮಕದಳ ಸಿಬ್ಬಂದಿ, 5 ಆಂಬ್ಯುಲೆನ್ಸ್ ಧಾವಿಸಿ ಬಂದಿದ್ದು, ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಘಟನಾ ಸ್ಥಳದಲ್ಲಿ ಎರಡು ಶವ ಪತ್ತೆಯಾಗಿದ್ದು, ಒಬ್ಬರಿಗೆ ತೀವ್ರ ಗಾಯವಾಗಿದ್ದು, ಒಟ್ಟು 6 ಮಂದಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗಿದೆ ಎಂದು ತಿಳಿದು ಬಂದಿದೆ.

 At Least 2 Dead, Several Injured In Madrid Building Explosion: Mayor

ವೃದ್ಧರ ಆರೈಕೆ ಕೇಂದ್ರದ ಪಕ್ಕದ ಕಟ್ಟಡ ಇದಾಗಿದ್ದು, ವೃದ್ಧರೆಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಲಾ ಪಲೋಮಾ ನಿವಾಸದವರು ಹೇಳಿದ್ದಾರೆ. ಈ ರೀತಿ ದೊಡ್ಡ ಮಟ್ಟದ ಸ್ಫೋಟ, ಸದ್ದು ನಾನು ಇಲ್ಲಿ ತನಕ ಕೇಳಿರಲಿಲ್ಲ ಎಂದು ಸಮೀಪದ ನಿವಾಸಿ ಲೊರೆಂಟೋ ಫಾಮೆಂಟೋ ಪ್ರತಿಕ್ರಿಯಿಸಿದ್ದಾರೆ.

ಕ್ಯಾಲೆ ಟೊಲೆಡೋದ ನಾಲ್ಕು ಮಹಡಿ ಕಟ್ಟಡದ ಗೋಡೆಗಳು ಸಂಪೂರ್ಣ ಕುಸಿದು ನೆಲಕ್ಕುರುಳಿದ ದೃಶ್ಯಗಳು ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿವೆ. ಈ ಪ್ರದೇಶದಲ್ಲಿ ದಟ್ಟ ಹೊಗೆ, ಧೂಳು ಆವರಿಸಿಕೊಂಡಿದೆ. ರಕ್ಷಣಾ ಕಾರ್ಯ ಭರದಿಂದ ಸಾಗಿದೆ.

English summary
At least two people were killed on Wednesday when a huge explosion ripped through a building in Madrid, in what appeared to be caused by a gas leak, officials said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X