ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೆಕ್ಸಿಕೋ ನೈಟ್ ಕ್ಲಬ್ ನಲ್ಲಿ ಶೂಟೌಟ್, ಹದಿನೈದು ಮಂದಿ ಸಾವು

By ಅನಿಲ್ ಆಚಾರ್
|
Google Oneindia Kannada News

ಶನಿವಾರ ನಸುಕಿನಲ್ಲಿ ಮೆಕ್ಸಿಕೋ ಗ್ವಾನಜುಟೋ ರಾಜ್ಯದ ನೈಟ್ ಕ್ಲಬ್ ನಲ್ಲಿ ಗುಂಡು ಹಾರಿಸಿ, ಕನಿಷ್ಠ ಹದಿನೈದು ಮಂದಿಯನ್ನು ಕೊಲ್ಲಲಾಗಿದೆ. ಇತರ ಏಳು ಮಂದಿಗೆ ಗಾಯಗಳಾಗಿವೆ. ಈ ಅಪರಾಧ ಕೃತ್ಯಕ್ಕೆ ಯಾರು ಕಾರಣ ಎಂಬ ಬಗ್ಗೆ ತಕ್ಷಣಕ್ಕೆ ಸ್ಪಷ್ಟತೆ ಸಿಕ್ಕಿಲ್ಲ. ಸೂರ್ಯೋದಯಕ್ಕೂ ಮುನ್ನ ಶಸ್ತ್ರಾಸ್ತ್ರ ಹೊಂದಿದ್ದವರ ಗುಂಪೊಂದು ಮೂರು ವ್ಯಾನ್ ಗಳಲ್ಲಿ ಲಾ ಪ್ಲೇಯ ಪುರುಷರ ಕ್ಲಬ್ ಗೆ ಬಂದಿದೆ.

ಹಾಗೆ ಬಂದ ಕೂಡಲೇ ಮನಸೋ ಇಚ್ಛೆ ಗುಂಡು ಹಾರಿಸಿದೆ. ತೈಲ ಕದಿಯುವ ಗುಂಪು ದೊಡ್ಡ ಪ್ರಮಾಣದಲ್ಲಿ ಸಲಮಂಕದ ಆಯಿಲ್ ರೀಫೈನರಿಯಿಂದ ದೊಡ್ಡ ಪ್ರಮಾಣದಲ್ಲಿ ತೈಲ ಕದ್ದಿದೆ. ಕಳೆದ ವಾರ ಮೆಕ್ಸಿಕೋ ಅಧ್ಯಕ್ಷ ಆಂಡ್ರೆಸ್ ಮ್ಯಾನುಯೆಲ್ ಲೋಪೆಜ್ ಒಬ್ರೆಡರ್ ಅವರು ಸ್ಥಳೀಯ ಗ್ಯಾಂಗ್ ನ ನಾಯಕ ಜೋಸ್ ಅಂಟೋನಿಯೋ ಯೆಪೆಜ್ ನ ಬಂಧನಕ್ಕೆ ಕಾರ್ಯಾಚರಣೆ ಕೈಗೊಳ್ಳಲು ಆದೇಶಿಸಿದ್ದರು.

ಫ್ಲೊರಿಡಾದ ಯೋಗ ಸ್ಟುಡಿಯೋದಲ್ಲಿ ಶೂಟೌಟ್: ಮೂವರು ಬಲಿಫ್ಲೊರಿಡಾದ ಯೋಗ ಸ್ಟುಡಿಯೋದಲ್ಲಿ ಶೂಟೌಟ್: ಮೂವರು ಬಲಿ

ಹದಿಮೂರು ಮಂದಿ ನೈಟ್ ಕ್ಲಬ್ ನಲ್ಲಿ ಸಾವನ್ನಪ್ಪಿದ್ದಾರೆ. ಇನ್ನಿಬ್ಬರು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯ ಮೃತಪಟ್ಟಿದ್ದಾರೆ. ಸದ್ಯಕ್ಕೆ ತನಿಖಾ ಸಂಸ್ಥೆಗಳು ಅಪರಾಧ ಕೃತ್ಯದ ಬಗ್ಗೆ ತನಿಖೆ ನಡೆಸುತ್ತಿವೆ.

At least 15 killed in Mexico night club shooting

ಕಾರು ಉತ್ಪಾದನೆಗೆ ಸಲಮಂಕ ಬಹಳ ಹೆಸರುವಾಸಿ. ಫೋಕ್ಸ್ ವ್ಯಾಗನ್, ಜನರಲ್ ಮೋಟಾರ್ಸ್ ಹಾಗೂ ಟೊಯೋಟಾ ಕಾರು ತಯಾರಿಕೆ ಘಟಕಗಳಿವೆ. ಮೆಕ್ಸಿಕೋ ದೇಶದಲ್ಲೇ ಈ ಭಾಗ ಅತ್ಯಂತ ಹೆಚ್ಚು ಹಿಂಸಾಚಾರ ನಡೆಯುವ ಪ್ರದೇಶ ಎಂಬ ಕುಖ್ಯಾತಿ ಪಡೆದಿದೆ.

ದಶಕಗಳ ನಂತರ ಡ್ರಗ್ ಮಾಫಿಯಾ ವಿರುದ್ಧ ಸೇನಾ ಕಾರ್ಯಾಚರಣೆ ಕೈಗೆತ್ತಿಕೊಳ್ಳಲಾಗಿದೆ. ಇದರಿಂದ ಮೆಕ್ಸಿಕೋದಲ್ಲಿ ರಕ್ತಸಿಕ್ತ ದಾಖಲೆಯ ವರ್ಷ ಇದಾಗಿದೆ. ಸಂಘಟಿತ ಅಪರಾಧವನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ಇದೀಗ ಸರಕಾರದಿಂದ ನಡೆಯುತ್ತಿರುವ ಪ್ರಯತ್ನಕ್ಕೆ ಸವಾಲು ಎದುರಾಗಿದೆ.

ಅಮೆರಿಕದಲ್ಲಿ ಮತ್ತೆ ಶೂಟೌಟ್: ಓರ್ವ ಬಲಿ, ನಾಲ್ವರಿಗೆ ಗಾಯ ಅಮೆರಿಕದಲ್ಲಿ ಮತ್ತೆ ಶೂಟೌಟ್: ಓರ್ವ ಬಲಿ, ನಾಲ್ವರಿಗೆ ಗಾಯ

ಮೆಕ್ಸಿಕೋ ಅಧ್ಯಕ್ಷರಾಗಿ ಆಂಡ್ರೆಸ್ ಮ್ಯಾನುಯೆಲ್ ಲೋಪೆಜ್ ಒಬ್ರೆಡರ್ ಕಳೆದ ವರ್ಷ ಡಿಸೆಂಬರ್ ಒಂದರಂದು ಅಧಿಕಾರ ಸ್ವೀಕರಿಸಿದ್ದು, ಅಪರಾಧಗಳ ವಿರುದ್ಧ ಹೊಸ ಬಗೆಯ ಹೋರಾಟ ಆರಂಭಿಸಿದ್ದಾರೆ.

English summary
At least 15 people were killed and another seven wounded in a shooting at a nightclub early on Saturday in Mexico’s violence-wracked Guanajuato state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X