• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಾಬೂಲ್ ಮಿಲಿಟರಿ ಆಸ್ಪತ್ರೆ ಬಳಿ ಸ್ಫೋಟ, 15 ಮಂದಿ ದುರ್ಮರಣ

|
Google Oneindia Kannada News

ಕಾಬೂಲ್, ನವೆಂಬರ್ 02: ಅಫ್ಘಾನಿಸ್ತಾನ ರಾಜಧಾನಿ ಕಾಬೂಲ್‌ನ ಮಿಲಿಟರಿ ಆಸ್ಪತ್ರೆ ಬಳಿ ಭಾರಿ ಸ್ಫೋಟ ಸಂಭವಿಸಿದ್ದು, 15 ಮಂದಿ ಮೃತಪಟ್ಟಿರುವದಾಗಿ ವರದಿಯಿಂದ ತಿಳಿದುಬಂದಿದೆ.

ಈ ಘಟನೆಯಲ್ಲಿ 34 ಮಂದಿ ಗಾಯಗೊಂಡಿದ್ದಾರೆ. ಗುಂಡಿನ ದಾಳಿಯನ್ನೂ ಕೂಡ ನಡೆಸಲಾಗಿದೆ. ಅಫ್ಘಾನಿಸ್ತಾನದಲ್ಲಿ ಇಂದು ಭಾರೀ ಸ್ಫೋಟ ಸಂಭವಿಸಿದ್ದು, ಆತಂಕದ ವಾತಾವರಣ ನಿರ್ಮಾಣವಾಗಿದೆ.

ಅಫ್ಘಾನಿಸ್ತಾನ: ಕುಟುಂಬ ನಿರ್ವಹಣೆಗಾಗಿ ಸ್ವಂತ ಮಕ್ಕಳನ್ನೇ ಮಾರಾಟ ಮಾಡುತ್ತಿರುವ ಜನರುಅಫ್ಘಾನಿಸ್ತಾನ: ಕುಟುಂಬ ನಿರ್ವಹಣೆಗಾಗಿ ಸ್ವಂತ ಮಕ್ಕಳನ್ನೇ ಮಾರಾಟ ಮಾಡುತ್ತಿರುವ ಜನರು

ತಾಲಿಬಾನ್ ಸರ್ಕಾರದ ವಕ್ತಾರ ಖಾರಿ ಸಯೀದ್ ಖೋಸ್ಟಿ ನೀಡಿರುವ ಮಾಹಿತಿ ಪ್ರಕಾರ, ಅಫ್ಘಾನಿಸ್ತಾನದ ಅತಿ ದೊಡ್ಡ ಆಸ್ಪತ್ರೆಯಾದ 400 ಬೆಡ್​ಗಳ ವ್ಯವಸ್ಥೆಯಿರುವ ಸರ್ದಾರ್ ಮೊಹಮ್ಮದ್ ದೌದ್​ ಖಾನ್ ಆಸ್ಪತ್ರೆಯ ಪ್ರವೇಶದ್ವಾರದ ಬಳಿ ಒಂದು ಸ್ಫೋಟ ಸಂಭವಿಸಿದೆ. ಈ ಭಾಗದಲ್ಲಿ ಭದ್ರತಾ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ.

ಭಾರೀ ಸ್ಫೋಟದಿಂದ ಅಫ್ಘಾನ್ ಮಿಲಿಟರಿ ಆಸ್ಪತ್ರೆ ಸುತ್ತಲೂ ದಟ್ಟ ಹೊಗೆ ತುಂಬಿಕೊಂಡಿದೆ. ಈ ಸ್ಫೋಟಗಳ ಹೊಣೆಯನ್ನು ಯಾವುದೇ ಸಂಘಟನೆಗಳೂ ಹೊತ್ತುಕೊಂಡಿಲ್ಲ. ಈ ದಾಳಿಯ ಉದ್ದೇಶ ಮತ್ತು ಕೈವಾಡದ ಬಗ್ಗೆ ತನಿಖೆಯ ಬಳಿಕಷ್ಟೇ ತಿಳಿಯಲಿದೆ. ಈ ಸ್ಫೋಟದ ಬೆನ್ನಲ್ಲೇ ಗುಂಡಿನ ದಾಳಿಯೂ ನಡೆದಿದೆ. ಎರಡನೇ ಸ್ಫೋಟವೂ ಇದೇ ಆಸ್ಪತ್ರೆಯ ಸಮೀಪ ಸಂಭವಿಸಿದೆ.

''ನಾನು ಆಸ್ಪತ್ರೆಯ ಒಳಗಿದ್ದೆ, ಮೊದಲ ಚೆಕ್ಪಾಯಿಂಟ್‌ನಿಂದ ದೊಡ್ಡ ಸ್ಫೋಟದ ಸದ್ದೊಂದು ಕೇಳಿಸಿತು. ಸುರಕ್ಷಿತ ಕೊಠಡಿಗಳಿಗೆ ತೆರಳುವಂತೆ ನಮಗೆ ಸೂಚಿಸಿದರು. ಬಂದೂಕುಧಾರಿಗಳು ಗುಂಡು ಹಾರಿಸುತ್ತಿದ್ದುದನ್ನು ಕೂಡ ಕೇಳಿಸಿಕೊಂಡೆ'' ಎಂದು ಕಾಬೂಲ್‌ನ ಸರ್ದಾರ್ ಮೊಹಮ್ಮದ್ ದಾವುದ್ ಖಾನ್ ಆಸ್ಪತ್ರೆಯ ವೈದ್ಯರೊಬ್ಬರು ತಿಳಿಸಿದ್ದಾರೆ.

ಸೇನಾ ಆಸ್ಪತ್ರೆಯ ಪ್ರವೇಶ ದ್ವಾರದ ಬಳಿ ಮೊದಲ ಸ್ಫೋಟ ಸಂಭವಿಸಿದೆ. ಎರಡನೆಯದು ಆಸ್ಪತ್ರೆಯ ಬಳಿ ಉಂಟಾಗಿದೆ. ಇದಿಷ್ಟು ಪ್ರಾಥಮಿಕ ಮಾಹಿತಿಯಾಗಿದ್ದು, ಹೆಚ್ಚಿನ ಮಾಹಿತಿಯನ್ನು ನಂತರದಲ್ಲಿ ನೀಡುತ್ತೇನೆ ಎಂದು ತಿಳಿಸಿದ್ದಾರೆ.

ತಾಲಿಬಾನ್ ವಿಶೇಷ ಪಡೆಗಳು ಸ್ಥಳಕ್ಕೆ ತಲುಪಿವೆ. ಸ್ಫೋಟದಿಂದ ಸಾವು-ನೋವು ಸಂಭವಿಸಿದೆ. ಹೆಚ್ಚಿನ ವಿವರಗಳನ್ನು ಬಳಿಕ ನೀಡಲಾಗುವುದು ಎಂದು ಆಂತರಿಕ ಸಚಿವಾಲಯದ ವಕ್ತಾರ ಕ್ವಾರಿ ಸಯೀದ್ ಹೇಳಿದ್ದಾರೆ.

ಕೆಲವು ನಿಮಿಷಗಳ ನಂತರ ಸ್ಥಳದಲ್ಲಿ ಎಎಫ್‌ಸಿ ಪತ್ರಕರ್ತರಿಗೆ ಎರಡೂ ಸ್ಫೋಟದ ಸದ್ದೊಂದು ಕೇಳಿಸಿತು. ಎರಡೂ ಸ್ಫೋಟಗಳನ್ನು ತಾಲಿಬಾನ್ ಮಾಧ್ಯಮ ವಕ್ತಾರರೊಬ್ಬರು ಖಚಿತಪಡಿಸಿದ್ದಾರೆ.

ಅಫ್ಘಾನಿಸ್ತಾನದ ಮಸೀದಿ ಸ್ಫೋಟದಲ್ಲಿ 100ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದರು: ಅಫ್ಘಾನಿಸ್ತಾನದ ಕುಂಡುಜ್ ನಗರದ ಮಸೀದಿಯಲ್ಲಿ ಶುಕ್ರವಾರ ಸಂಭವಿಸಿದ ಸ್ಫೋಟದಲ್ಲಿ ಕನಿಷ್ಠ 100 ಜನರು ಸಾವನ್ನದ್ದರು . "ಇಲ್ಲಿಯವರೆಗೆ ನಮ್ಮ ಆಸ್ಪತ್ರೆಯಲ್ಲಿ 35 ಮೃತ ದೇಹಗಳು ಮತ್ತು 50 ಕ್ಕೂ ಹೆಚ್ಚು ಗಾಯಗೊಂಡ ಜನರನ್ನು ನಾವು ಸ್ವೀಕರಿಸಿದ್ದೇವೆ" ಎಂದು ವೈದ್ಯರು ಹೇಳಿದ್ದರು.. ಡಾಕ್ಟರ್ಸ್ ವಿಥೌಟ್ ಬಾರ್ಡರ್ಸ್ (MSF) ನಡೆಸುತ್ತಿರುವ ಇನ್ನೊಂದು ಆಸ್ಪತ್ರೆ ಕನಿಷ್ಠ 15 ಜನರ ಮೃತದೇಹಗಳನ್ನು ಸ್ವೀಕರಿಸಿದೆ ಎಂದು ಮೂಲಗಳು ತಿಳಿಸಿತ್ತು.

ದಾಳಿಯ ಹೊಣೆಗಾರಿಕೆಯನ್ನು ತಕ್ಷಣವೇ ಹೇಳಿಕೊಳ್ಳಲಾಗಿಲ್ಲ, ಆದರೆ ತಾಲಿಬಾನ್‌ನ ಕಡು ಪ್ರತಿಸ್ಪರ್ಧಿಗಳಾದ ಇಸ್ಲಾಮಿಕ್ ಸ್ಟೇಟ್ ಗುಂಪು ಇದೇ ರೀತಿಯ ದಾಳಿಯ ಹೊಣೆ ಹೊತ್ತುಕೊಂಡಿತ್ತು.

ಕುಂಡುಜ್‌ನ ನಿವಾಸಿಗಳು ಶುಕ್ರವಾರದ ಪ್ರಾರ್ಥನೆಯ ಸಮಯದಲ್ಲಿ ಶಿಯಾ ಮಸೀದಿಯಲ್ಲಿ ಸ್ಫೋಟ ಸಂಭವಿಸಿದೆ ಎಂದು ಹೇಳಿರುವುದಾಗಿ ಎಎಫ್‌ಪಿ ವರದಿ ಮಾಡಿತ್ತು.
ಸ್ಫೋಟ ಸಂಭವಿಸಿದ ಮಸೀದಿ ಪಕ್ಕ ಹಲವಾರು ರಕ್ತಸಿಕ್ತ ದೇಹಗಳು ನೆಲದ ಮೇಲೆ ಬಿದ್ದಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್ ಆಗಿತ್ತು.

ಇನ್ನೊಂದು ವೀಡಿಯೋದಲ್ಲಿ ಪುರುಷರು ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಜನರನ್ನು ಸ್ಥಳದಿಂದ ದೂರ ಹೋಗುವಂತೆ ನಿರ್ದೇಶಿಸುತ್ತಿರುವುದು ಕಾಣಿಸುತ್ತಿತ್ತು.. ಗಾಬರಿಗೊಂಡ ಜನಸಮೂಹ ಬೀದಿಗಳಲ್ಲಿ ನೆರೆದಿತ್ತು. ಕುಂಡುಜ್ ತಜಕಿಸ್ತಾನದೊಂದಿಗಿನ ಆರ್ಥಿಕ ಮತ್ತು ವ್ಯಾಪಾರ ವಿನಿಮಯದ ಪ್ರಮುಖ ಸಾರಿಗೆ ಕೇಂದ್ರವಾಗಿದೆ.

English summary
At least 15 people were killed and 34 wounded when two explosions followed by gunfire hit Afghanistan's biggest military hospital in Kabul, a Taliban security official said on Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X