ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಫ್ಘಾನಿಸ್ತಾನ: ಧಾರ್ಮಿಕ ಕಾರ್ಯಕ್ರಮದಲ್ಲಿ ಬಾಂಬ್ ದಾಳಿಗೆ 14 ಬಲಿ

By Sachhidananda Acharya
|
Google Oneindia Kannada News

ಕಾಬೂಲ್, ಜೂನ್ 4:ಅಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ಸರಣಿ ಬಾಂಬ್ ದಾಳಿಗಳು ನಿಲ್ಲುತ್ತಿಲ್ಲ. ಇಂದು ಮುಸ್ಲಿಂ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಆತ್ಮಾಹುತಿ ಬಾಂಬ್ ಸ್ಪೋಟಿಸಿದ ಪರಿಣಾಮ 14 ಜನರು ಸಾವನ್ನಪ್ಪಿದ್ದಾರೆ.

ಕಾಬೂಲ್ ನ ಪಾಲಿಟೆಕ್ನಿಕ್ ವಿಶ್ವ ವಿದ್ಯಾಲಯದ ಸಮೀಪ ಧಾರ್ಮಿಕ ಕಾರ್ಯಕ್ರಮವೊಂದು ಆಯೋಜನೆಯಾಗಿತ್ತು. ಇದರಲ್ಲಿ ಮುಸ್ಲಿಂ ಧರ್ಮಗುರುಗಳು, ವಿಧ್ವಾಂಸರೆಲ್ಲಾ ಸೇರಿದ್ದರು. ಇದೇ ಕಾರ್ಯಕ್ರಮದಲ್ಲಿ ಬಾಂಬ್ ಸ್ಪೋಟ ಸಂಭವಿಸಿದ್ದು ಅಫ್ಘಾನಿಸ್ತಾನದ ಆಂತರಿಕ ಸಚಿವಾಲಯದ ವಕ್ತಾರ ನಜೀಬ್ ಡ್ಯಾನಿಷ್ ಸೇರಿ ಹಲವರು ಗಾಯಗೊಂಡಿದ್ದಾರೆ.

ಘಟನೆಯಲ್ಲಿ 14 ಜನರು ಅಸು ನೀಗಿದ್ದು ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. 14 ಜನರು ಗಂಭೀರ ಗಾಯಗೊಂಡಿದ್ದು ಅವರಿಗೆ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

At least 14 dead in suicide blast at Kabul

ದೇಶದಲ್ಲಿ ನಿರಂತರವಾಗಿ ನಡೆಯುತ್ತಿರುವ ಆತ್ಮಾಹುತಿ ಬಾಂಬ್ ದಾಳಿ ವಿರುದ್ಧ ಫತ್ವಾ ಹೊರಡಿಸಲು ದೇಶದ ಖ್ಯಾತ ಮುಸ್ಲಿಂ ಧರ್ಮಗುರುಗಳು ಇಂದು ಒಂದೆಡೆ ಸೇರಿದ್ದರು. ಇದೀಗ ಈ ಕಾರ್ಯಕ್ರಮದ ಮೇಲೆಯೇ ಭಯೋತ್ಪಾದಕರು ದಾಳಿ ನಡೆಸಿದ್ದಾರೆ.

English summary
At least 14 people have been killed in a suicide attack targeting Muslim leaders and scholars who had gathered in a tent near the Polytechnic University in Kabul, the capital of Afghanistan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X