• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚೀನಾದಲ್ಲಿ ಪ್ರವಾಹ : ಮೆಟ್ರೋ ಸುರಂಗಕ್ಕೆ ನೀರು ನುಗ್ಗಿ 12 ಮಂದಿ ಸಾವು

|
Google Oneindia Kannada News

ಬೀಜಿಂಗ್, ಜುಲೈ 21: ಚೀನಾದಲ್ಲಿ ಕಳೆದ ಒಂದು ದಿನದಿಂದ ಭಾರಿ ಮಳೆ ಸುರಿಯುತ್ತಿದ್ದು, ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ. ಮೆಟ್ರೋ ಸುರಂಗಕ್ಕೆ ನೀರು ನುಗ್ಗಿ 12 ಮಂದಿ ಮೃತಪಟ್ಟಿರುವ ಘಟನೆ ವರದಿಯಾಗಿದೆ.

ರೈಲಿನಲ್ಲಿದ್ದ ಪ್ರಯಾಣಿಕರು ರಕ್ಷಿಸುವಂತೆ ಕೂಗಾಡುತ್ತಿರುವ ವಿಡಿಯೋ, ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಏಕಾಏಕಿ ಮಳೆ ಸುರಿದಿರುವ ಕಾರಣ ಮೆಟ್ರೋ ಸುರಂಗದಲ್ಲಿ ನೀರು ನುಗ್ಗಿದೆ. ಇದರಿಂದ 5 ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ರವಾನಿಸಲಾಗಿದೆ.

 ರಾಜ್ಯದ ಕರಾವಳಿ, ಉತ್ತರ ಒಳನಾಡಿನಲ್ಲಿ 2 ದಿನ ಭಾರಿ ಮಳೆ ಸಾಧ್ಯತೆ ರಾಜ್ಯದ ಕರಾವಳಿ, ಉತ್ತರ ಒಳನಾಡಿನಲ್ಲಿ 2 ದಿನ ಭಾರಿ ಮಳೆ ಸಾಧ್ಯತೆ

ಬೀಜಿಂಗ್ ಹಾಗೂ ಹೆನಾನ್ ಪ್ರಾಂತ್ಯದಲ್ಲಿ ಕೆಲ ದಿನಗಳಿಂದ ದಾಖಲೆ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಇದುವರೆಗೆ 1 ಕೋಟಿಗೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ. ಜತೆಗೆ ಪ್ರವಾಹ ಪೀಡಿದ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆಗೆ ಮುಂದಾಗಿದೆ.

ಮಳೆಯಿಂದಾಗಿ ನದಿಗಳು ತುಂಬಿ ಹರಿಯುತ್ತಿವೆ. ಪ್ರವಾಹದಿಂದಾಗಿ ಅಪಾರ ಪ್ರಮಾಣದ ಬೆಳೆ, ಆಸ್ತಿಪಾಸ್ತಿ ನಷ್ಟವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸಾಕಷ್ಟು ಮಂದಿ ಶಾಲೆಗಳು, ಮೆಟ್ರೋದಲ್ಲಿ ಸಿಲುಕಿಕೊಂಡಿದ್ದಾರೆ, ವಾಹನಗಳು ತೇಲಿ ಹೋಗಿವೆ. 4 ರಿಂದ 5 ಗಂಟೆಯವರೆಗೆ 20 ಸೆಂ.ಮೀ ಮಳೆ ಸುರಿದಿದೆ. ಹಾಗೆಯೇ ಜೆನ್‌ಜೌನಲ್ಲಿರುವ ಶಾವೊಲಿನ್ ಬೌದ್ಧ ದೇವಾಲಯಕ್ಕೂ ಹಾನಿಯುಂಟಾಗಿದೆ.

At Least 12 Killed In Central China Flooding After Being Trapped In Subway, Cars

ಮುಂದಿನ ಕೆಲವೇ ಗಂಟೆಗಳಲ್ಲಿ ಈ ಪ್ರದೇಶದಲ್ಲಿ ಮಳೆ ಹೆಚ್ಚಾಗಲಿರುವ ಭೀತಿ ಎದುರಾಗಿದ್ದು, ಎಚ್ಚರಿಕೆ ವಹಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

   Deepak Chahar ಪಂದ್ಯ ಶ್ರೇಷ್ಠ ಗೆದ್ದ ನಂತರ ಹೇಳಿದ್ದೇನು | Oneindia Kannada
   English summary
   At least 12 people died in severe flooding Tuesday in a Chinese provincial capital that trapped people in subways and schools, washed away vehicles and stranded people in their workplaces overnight.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X