ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವರ್ಜೀನಿಯಾದ ಸರ್ಕಾರಿ ಕಟ್ಟಡದೊಳಗೆ ಶೂಟ್‌ಔಟ್‌: 12 ಮಂದಿ ಸಾವು

|
Google Oneindia Kannada News

ವಾಷಿಂಗ್ಟನ್, ಜೂನ್ 1: ಅಮೆರಿಕದ ವರ್ಜೀನಿಯಾ ಬೀಜ್‌ನಲ್ಲಿ ಶುಕ್ರವಾರ ಸಂಜೆ ಶೂಟ್‌ ಔಟ್‌ ನಡೆದಿದ್ದು, 12 ಜನ ಸ್ಥಳದಲ್ಲೇ ಮೃತಪಟ್ಟಿದ್ದರೆ 6 ಮಂದಿ ಗಾಯಗೊಂಡಿದ್ದಾರೆ.

ವರ್ಜೀನಿಯಾ ಬೀಚ್‌ನಲ್ಲಿರುವ ಸರ್ಕಾರಿ ಕಟ್ಟಡಕ್ಕೆ ಆಗಮಿಸಿದ ದುಷ್ಕರ್ಮಿ ಏಕಾಏಕಿ ಸಾರ್ವಜನಿಕರ ಮೇಲೆ ಗುಂಡಿನ ಸುರಿಮಳೆ ಗೈದಿದ್ದಾನೆ. ಈ ದಾಳಿಯಲ್ಲಿ ಸ್ಥಳದಲ್ಲೇ 12 ಮಂದಿ ಮೃತಪಟ್ಟಿದ್ದಾರೆ. ಗಾಯಗೊಂಡವರನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ.

ದಾಳಿಗೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ.ಆದರೆ ಘಟನೆ ಸಿಸಿಟಿವಿಯಲ್ಲಿ ದಾಖಲಾಗಿದೆ. ಘಟನೆ ಕುರಿತಂತೆ ಅಮೆರಿಕದ ತನಿಖಾ ಸಂಸ್ಥೆಗಳು ವಿಚಾರಣೆ ತೀವ್ರಗೊಳಿಸಿದೆ. ಭಯೋತ್ಪಾದನೆ ಸೇರಿ ಎಲ್ಲಾ ಆಯಾಮಗಳನ್ನು ತನಿಖಾ ಸಂಸ್ಥೆಗಳು ನೋಡುತ್ತಿವೆ.

At least 11 dead six wounded after shooting in Virginia
ವಾಷಿಂಗ್ಟನ್ ಬಳಿ ಇರುವ ವರ್ಜೀನಿಯಾ ಬೀಚ್‌ನಲ್ಲಿ ನಡೆದ ಅಮಾನವೀಯ ಘಟನೆಯಾಗಿದೆ.
ವರ್ಷದಲ್ಲೇ 150 ಶೂಟ್‌ಔಟ್: ಅಮೆರಿಕದಲ್ಲಿ ಕಳೆದೊಂದು ವರ್ಷದಲ್ಲಿ 150ಕ್ಕೂ ಅಧಿಕ ಶೂಟ್‌ಔಟ್‌ಗಳು ನಡೆದಿದೆ. 4ಕ್ಕೂ ಹೆಚ್ಚಿನ ಜನ ಸತ್ತಿರುವ ಘಟನೆಗಳೇ 150ಕ್ಕೂ ಹೆಚ್ಚಾಗಿವೆ.

ಇದು ಅಮೆರಿಕ ಸರ್ಕಾರ ಹಾಗೂ ಸ್ಥಳೀಯರ ಚಿಂತೆಗೆ ಕಾರಣವಾಗಿದೆ.ಸಾರ್ವಜನಿಕರು ಸರ್ಕಾರದ ನೀತಿಯನ್ನು ಟೀಕಿಸುತ್ತಿದ್ದಾರೆ. ಡೊನಾಲ್ಡ್ ಟ್ರಂಪ್ ಭರವಸೆಯ ಹೊರತಾಗಿ ಶಸ್ತ್ರಾಸ್ತ್ರ ಖರೀದಿ ನಿಯಮಗಳಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ, ಸಾರ್ವಜನಿಕರಿಗೆ ಬೇಕಾಬಿಟ್ಟಿಯಾಗಿ ಶಸ್ತ್ರಾಸ್ತ್ರಗಳು ಸಿಗುತ್ತಿವೆ ಇದು ಇಂತಹ ಅಪರಾಧಗಳು ಹೆಚ್ಚಳವಾಗಲು ಕಾರಣವಾಗಿವೆ ಎನ್ನಲಾಗುತ್ತಿದೆ.

ಅಮೆರಿಕ ಸರ್ಕಾರ ಕೂಡಲೇ ಸಾರ್ವಜನಿಕರ ಶಸ್ತ್ರಾಸ್ತ್ರ ಖರೀದಿ ಮೇಲೆ ನಿರ್ಬಂಧ ಹೇರುವ ಅಗತ್ಯವಿದೆ. ಆದರೆ ಅಮೆರಿಕದ ಶಸ್ತ್ರಾಸ್ತ್ರ ಲಾಬಿ ಇದಕ್ಕೆ ಅವಕಾಶ ನೀಡುತ್ತಿಲ್ಲ. ಅಮೆರಿಕದಲ್ಲಿ ಮುಂದಿನ ಅಧ್ಯಕ್ಷೀಯ ಚುನಾವಣೆ ಇದೇ ವಿಷಯವನ್ನಾಧರಿಸಿ ನಡೆದರೂ ಆಶ್ಚರ್ಯವಿಲ್ಲ.

English summary
A longtime public utilities employee sprayed gunfire indiscriminately in a government building complex on Friday in Virginia Beach, in the US state of Virginia, killing 11 people and wounding six, police said
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X