ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಲಸಿಕೆ: ಹೆಚ್ಚುವರಿ ಪ್ರಯೋಗಕ್ಕೆ ಮುಂದಾದ ಆಸ್ಟ್ರಾಜೆನಿಕಾ

|
Google Oneindia Kannada News

ಲಂಡನ್, ನವೆಂಬರ್ 27: ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಮತ್ತು ಔಷಧ ಉತ್ಪಾದಕ ದಿಗ್ಗಜ ಆಸ್ಟ್ರಾಜೆನಿಕಾ ಸಂಸ್ಥೆಗಳು ಸೇರಿ ಅಭಿವೃದ್ಧಿ ಪಡಿಸಿರುವ ಕೊರೊನಾ ವೈರಸ್ ಲಸಿಕೆಯನ್ನು ಹೆಚ್ಚುವರಿ ಜಾಗತಿಕ ಪ್ರಯೋಗಕ್ಕೆ ಒಳಪಡಿಸುವ ಸಾಧ್ಯತೆ ಇದೆ ಎಂದು ಕಂಪೆನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ತಿಳಿಸಿದ್ದಾರೆ. ಆಸ್ಟ್ರಾಜೆನಿಕಾದ ಲಸಿಕೆಯ ಪ್ರಯೋಗದ ವರದಿಯು ಅದರ ದಕ್ಷತೆಯ ಮಟ್ಟದ ಬಗ್ಗೆ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿತ್ತು. ಈ ಹಿನ್ನೆಲೆಯಲ್ಲಿ ಹೊಸದಾಗಿ ಮತ್ತೊಂದು ಸುತ್ತಿನ ಪ್ರಯೋಗ ನಡೆಸಲು ಅದು ಮುಂದಾಗಿದೆ.

ಆಸ್ಟ್ರಾಜೆನಿಕಾದ ಉತ್ಪಾದನಾ ಸಂದರ್ಭದ ವೇಳೆ ಉಂಟಾದ ಲೋಪದಿಂದ ಕೆಲವು ಲಸಿಕೆ ಬಾಟಲಿಗಳಲ್ಲಿ ಕಡಿಮೆ ಪ್ರಮಾಣದ ಡೋಸ್ ಸಂಗ್ರಹವಾಗಿತ್ತು. ಆದರೆ ಈ ಕಡಿಮೆ ಡೋಸ್ ಪಡೆದುಕೊಂಡ ಸ್ವಯಂ ಸೇವಕರಲ್ಲಿ, ಎರಡು ಡೋಸ್ ಲಸಿಕೆ ಪಡೆದುಕೊಂಡವರಿಗಿಂತಲೂ ಅಧಿಕ ಪ್ರತಿರಕ್ಷಣಾ ಸಾಮರ್ಥ್ಯ ಕಂಡುಬಂದಿರುವುದು ಅಚ್ಚರಿ ಮೂಡಿಸಿತ್ತು. ಜತೆಗೆ ಲಸಿಕೆಯ ದಕ್ಷತೆಯ ಬಗ್ಗೆ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿತ್ತು.

ಆಕ್ಸ್‌ಫರ್ಡ್ ಲಸಿಕೆಯ ದಾಖಲೆಯಲ್ಲಿ 'ಪ್ರಮಾದ': ತಪ್ಪೊಪ್ಪಿಕೊಂಡ ಕಂಪೆನಿಆಕ್ಸ್‌ಫರ್ಡ್ ಲಸಿಕೆಯ ದಾಖಲೆಯಲ್ಲಿ 'ಪ್ರಮಾದ': ತಪ್ಪೊಪ್ಪಿಕೊಂಡ ಕಂಪೆನಿ

'ನಾವೀಗ ಯಾವುದು ಹೆಚ್ಚು ಉತ್ತಮ ದಕ್ಷತೆ ಹೊಂದಿದೆ ಎಂಬುದನ್ನು ತಿಳಿದುಕೊಂಡಿದ್ದೇವೆ. ಅದನ್ನೇ ನಾವು ಸೂಕ್ತವಾಗಿ ಅನುಸರಿಸಬೇಕಿದೆ. ಇದಕ್ಕಾಗಿ ನಾವು ಹೆಚ್ಚುವರಿ ಅಧ್ಯಯನ ಮಾಡಬೇಕು' ಎಂದು ಆಸ್ಟ್ರಾಜೆನಿಕಾದ ಸಿಇಒ ಪಾಸ್ಕಲ್ ಸೋರಿಯಟ್ ಹೇಳಿದ್ದಾರೆ.

 AstraZeneca Likely To Conduct Additional Global Covid-19 Vaccine Trials

'ಇದು ಬಹುಶಃ ಮತ್ತೊಂದು ಅಂತಾರಾಷ್ಟ್ರೀಯ ಮಟ್ಟದ ಅಧ್ಯಯನವಾಗಲಿದೆ. ಆದರೆ ಲಸಿಕೆಯ ದಕ್ಷತೆಯು ಅತ್ಯಧಿಕವಾಗಿರುವುದರಿಂದ ನಮಗೆ ಸಣ್ಣ ಪ್ರಮಾಣದ ರೋಗಿಗಳ ಮೇಲಿನ ಪ್ರಯೋಗ ಸಾಕು. ಹೀಗಾಗಿ ಇದು ಬೇಗನೆ ಮುಗಿದುಹೋಗಲಿದೆ' ಎಂದು ಅವರು ತಿಳಿಸಿದ್ದಾರೆ.

ಕೊರೊನಾ ಲಸಿಕೆ: ಔಷಧ ತಯಾರಕ ಸಂಸ್ಥೆಗಳಿಗೆ ಮೋದಿ ಭೇಟಿ ಸಾಧ್ಯತೆಕೊರೊನಾ ಲಸಿಕೆ: ಔಷಧ ತಯಾರಕ ಸಂಸ್ಥೆಗಳಿಗೆ ಮೋದಿ ಭೇಟಿ ಸಾಧ್ಯತೆ

ಅಮೆರಿಕ ಮತ್ತು ಯುರೋಪಿಯನ್ ಒಕ್ಕೂಟಗಳಲ್ಲಿ ಹೆಚ್ಚುವರಿ ಪ್ರಯೋಗಕ್ಕೆ ಔಷಧ ನಿಯಂತ್ರಕಗಳ ಅನುಮೋದನೆ ಸಿಗುವುದು ಹೆಚ್ಚು ಕಷ್ಟವಾಗಲಾರದು. ಆದರೆ ಅಮೆರಿಕದ ಎಫ್‌ಡಿಎ ಅನುಮತಿ ಸಿಗಲು ಹೆಚ್ಚು ಸಮಯ ಬೇಕಾಗುತ್ತದೆ. ಏಕೆಂದರೆ ಬೇರೆಲ್ಲೋ ನಡೆಸಿದ ಲಸಿಕೆ ಅಧ್ಯಯನಗಳ ವಿವರಗಳನ್ನು ಅದು ಅನುಮೋದಿಸುವುದಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

Recommended Video

Narendra Modi-ಬ್ರಿಟನ್ ಪ್ರಧಾನಿ Boris Johnson ಮಹತ್ವದ ಮಾತುಕತೆ | Oneindia Kannada

ಆಸ್ಟ್ರಾಜೆನಿಕಾ ಮತ್ತು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯಗಳು ಭಾರತದಲ್ಲಿಯೂ ಸೆರಮ್ ಇನ್‌ಸ್ಟಿಟ್ಯೂಟ್ ಮೂಲಕ ಲಸಿಕೆಯನ್ನು ಅಭಿವೃದ್ಧಿಪಡಿಸಿ ಪ್ರಯೋಗ ನಡೆಸುತ್ತಿವೆ. ಇದಕ್ಕೆ ಕೋವಿಶೀಲ್ಡ್ ಎಂಬ ಹೆಸರು ಇಡಲಾಗಿದೆ. ಭಾರತದಲ್ಲಿ ಈ ಲಸಿಕೆಯೇ ಮೊದಲ ಬಾರಿ ಬಳಕೆಗೆ ಬರುವ ನಿರೀಕ್ಷೆಯಿದೆ.

English summary
AstraZeneca is likely to conduct an additional global trail to know the efficacy of its Covid-19 vaccine.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X