ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಯೆಟ್ನಾಂನಲ್ಲಿ 9ನೇ ಶತಮಾನದ ವಿಶಿಷ್ಟ ಶಿವಲಿಂಗ ಪತ್ತೆ

|
Google Oneindia Kannada News

ಹನೋಯ್/ ನವದೆಹಲಿ, ಮೇ 28: ವಿಯೆಟ್ನಾಂನಲ್ಲಿ 9ನೇ ಶತಮಾನದ ಶಿವಲಿಂಗ ಪತ್ತೆಯಾಗಿದೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ತಿಳಿಸಿದ್ದಾರೆ. ವಿಯೆಟ್ನಾಂನ ಮೈಸನ್ ಪ್ರದೇಶದಲ್ಲಿ ಉತ್ಖನನ ನಡೆಸುವಾಗ ಈ ವಿಶಿಷ್ಟ ಶಿವಲಿಗವನ್ನು ಭಾರತದ ಪುರಾತತ್ವ ಇಲಾಖೆ(ASI) ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.

Recommended Video

ಕಲಬುರಗಿಯಲ್ಲೊಂದು ಕರುಳು ಕಿವಿಚುವ ದೃಶ್ಯ | Oneindia Kannada

ಮೈಸನ್ ಪ್ರದೇಶದ ಚಾಮ್ ದೇಗುಲಗಳ ಸಮೂಹದಲ್ಲಿ ಉತ್ಖನನ ಕಾರ್ಯ ನಡೆಸಲಾಗುತ್ತಿದೆ. ಇಲ್ಲಿ ಅನೇಕ ಶಿಥಿಲವಾಸ್ಥೆ, ಪೂರ್ಣ ಹಾಳಾದ ದೇಗುಲಗಳ ಅವಶೇಷಗಳಿವೆ. ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿರುವ ಈ ತಾಣವನ್ನು ಕ್ರಿ.ಶ 4ನೇ ಶತಮಾನದಿಂದ 14ನೇ ಶತಮಾನದ ಅವಧಿಯಲ್ಲಿ ಚಂಪಾ ಅರಸರು ಆಳಿದ್ದರು ಎಂದು ತಿಳಿದು ಬಂದಿದೆ.

Asi Unearths 9th Century Shiv Linga During Restoration Of Temple Complex In Vietnam

ಈ ಭಾಗದಲ್ಲಿ ಅನೇಕ ಶಿವಲಿಂಗಗಳಿದ್ದು, ಇಲ್ಲಿ ಶಿವನನ್ನು ಭದ್ರೇಶ್ವರ ಎಂಬ ಹೆಸರಿನಲ್ಲಿ ಆರಾಧಿಸಲಾಗುತ್ತಿತ್ತು. ಚಂಪಾ ಅರಸರಿಂದ ಇಲ್ಲಿ 70ಕ್ಕೂ ಅಧಿಕ ದೇಗುಲಗಳ ನಿರ್ಮಾಣವಾಗಿತ್ತು. ವಿಯೆಟ್ನಾಂ ಯುದ್ಧದ ವೇಳೆ ಅಮೆರಿಕದ ಬಾಂಬ್ ದಾಳಿಯಿಂದ ಅನೇಕ ದೇಗುಲಗಳು ನಾಶವಾಗಿವೆ.

ಭಾರತೀಯ ಪುರಾತತ್ವ ಇಲಾಖೆ ಅಧಿಕಾರಿಗಳು ನಾಲ್ಕು ಋತುಗಳ ಕಾಲ ಇಲ್ಲಿ ಉತ್ಖನನ ನಡೆಸುತ್ತಿದ್ದಾರೆ. ಸದ್ಯ ಜನವರಿಯಿಂದ ಜೂನ್ ಅವಧಿಯ ಕಾರ್ಯ ನಡೆಯುತ್ತಿದ್ದು, ಎಎಸ್ಐ ತಂಡದಲ್ಲಿ ನಾಲ್ವರು ಅಧಿಕಾರಿಗಳಿದ್ದಾರೆ. ಒಟ್ಟು 6 ಶಿವಲಿಂಗಗಳು ಪತ್ತೆಯಾಗಿವೆ. ಸಂಸ್ಕೃತಿ, ಪರಂಪರೆ ಮೌಲ್ಯಯುಕ್ತ ವಸ್ತುಗಳನ್ನು ಸಂರಕ್ಷಿಸಲು ಭಾರತ ಹಾಗೂ ವಿಯೆಟ್ನಾಂ ಮುಂದಾಗಿದ್ದು, ವಿದೇಶಾಂಗ ಸಚಿವಾಲಯವು ಇದಕ್ಕಾಗಿ ಡಿಪಿಎ IV ಎಂಬ ವಿಭಾಗವನ್ನು ಸ್ಥಾಪಿಸಿದೆ.

English summary
A Shiv Linga or representation of the Hindu deity Shiva dating back to the 9th century has been unearthed at Cham temple complex in Vietnam during restoration work by the Archaeological Survey of India (ASI).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X