ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಕ್ರೇನ್‌ನಲ್ಲಿ ಯುದ್ಧ ಮತ್ತು ಮಾನವೀಯ ಬಿಕ್ಕಟ್ಟು ನಿರ್ವಹಣೆಗೆ ಗೂಗಲ್ ನೆರವು

|
Google Oneindia Kannada News

ಕೀವ್, ಮಾರ್ಚ್ 1: ಉಕ್ರೇನ್ ಮೇಲೆ ರಷ್ಯಾ ನಡೆಸುತ್ತಿರುವ ಯುದ್ಧವು ಆರನೇ ದಿನಕ್ಕೆ ಕಾಲಿಟ್ಟಿದೆ. ಇದರ ಮಧ್ಯೆ ಉಕ್ರೇನ್‌ನಲ್ಲಿ ಯುದ್ಧ ಮತ್ತು ಮಾನವೀಯ ಬಿಕ್ಕಟ್ಟು ಉಲ್ಬಣಗೊಳ್ಳುತ್ತಿದ್ದಂತೆ, ಸಹಾಯ ಮಾಡಲು ಗೂಗಲ್ ಹೆಚ್ಚಿನ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಗೂಗಲ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಣಾ ಅಧಿಕಾರಿ(ಸಿಇಓ) ಸುಂದರ್ ಪಿಚೈ ಟ್ವೀಟ್ ಮಾಡಿದ್ದಾರೆ.

Russia-Ukraine War Live Updates: ಮಾ.2ರಂದು ಉಕ್ರೇನ್‌-ರಷ್ಯಾ ಎರಡನೇ ಸುತ್ತಿನ ಶಾಂತಿ ಮಾತುಕತೆRussia-Ukraine War Live Updates: ಮಾ.2ರಂದು ಉಕ್ರೇನ್‌-ರಷ್ಯಾ ಎರಡನೇ ಸುತ್ತಿನ ಶಾಂತಿ ಮಾತುಕತೆ

ರಷ್ಯಾ ನಡೆಸುತ್ತಿರುವ ಯುದ್ಧದ ನಡುವೆ ಉಕ್ರೇನ್ ನೆಲದಲ್ಲಿ ಸೈಬರ್ ದಾಳಿಯಿಂದ ಬಳಕೆದಾರರನ್ನು ರಕ್ಷಿಸುವುದು, SOS ಎಚ್ಚರಿಕೆಗಳು, ತಪ್ಪು ಮಾಹಿತಿಯ ಅಭಿಯಾನಗಳನ್ನು ತಡೆಯುವುದು ಸೇರಿದಂತೆ ಇನ್ನಷ್ಟು ದುರುಪಯೋಗಗಳಿಗೆ ಅಡ್ಡಿಪಡಿಸಲು ಸೂಕ್ತ ಕ್ರಮ ತೆಗೆದುಕೊಳ್ಳಲಾಗುತ್ತದೆ. ಇದರ ಜೊತೆಗೆ ಉಕ್ರೇನಿಯನ್ ಜನರ ಬೆಂಬಲ ಮತ್ತು ಪರಿಹಾರವಾಗಿ ನಾವು 15 ಮಿಲಿಯನ್ ಡಾಲರ್ ಹಣವನ್ನು ನೀಡಲಾಗುವುದು ಎಂದು ಗೂಗಲ್ ಸಂಸ್ಥೆಯ ಸಿಇಓ ಸುಂದರ್ ಪಿಚೈ ಟ್ವೀಟ್ ಮಾಡಿದ್ದಾರೆ.

ಪೋಟಸ್ ಜೊತೆ ಝೆಲೆನ್ಸ್ಕಿ ಚರ್ಚೆ:

"@POTUS ಜೊತೆಗೆ ಸಂವಾದ ನಡೆಸಿದೆ. ಅಮೆರಿಕದ ನಾಯಕತ್ವದಲ್ಲಿ ರಷ್ಯಾ ವಿರೋಧಿ ನಿರ್ಬಂಧಗಳು ಮತ್ತು ಉಕ್ರೇನ್‌ಗೆ ರಕ್ಷಣಾ ನೆರವು ಕುರಿತು ಚರ್ಚಿಸಲಾಯಿತು. ನಾವು ಆದಷ್ಟು ಬೇಗ ಆಕ್ರಮಣಕಾರರನ್ನು ನಿಲ್ಲಿಸಬೇಕಿದ್ದು, ನಿಮ್ಮ ಸಹಕಾರಕ್ಕೆ ಧನ್ಯವಾದಗಳು," ಎಂದು ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಟ್ವೀಟ್ ಮಾಡಿದ್ದಾರೆ.

As the war and humanitarian crisis in Ukraine escalates, Google taking more actions to help: Sundar Pichai

ಕೀವ್‌ನಲ್ಲಿರುವ ಟಿವಿ ಟವರ್‌ ಮೇಲೆ ರಷ್ಯಾ ಬಾಂಬ್ ದಾಳಿ:

ಉಕ್ರೇನ್ ಮತ್ತು ರಷ್ಯಾ ನಡುವಿನ ಆರನೇ ದಿನ ಯುದ್ಧದ ನಡುವೆ ಉಕ್ರೇನ್ ರಾಜಧಾನಿ ಕೀವ್‌ನಲ್ಲಿರುವ ಟಿವಿ ಟವರ್‌ ಮೇಲೆ ರಷ್ಯಾ ಬಾಂಬ್ ದಾಳಿ ನಡೆಸಿದೆ. ಇದರಿಂದ ಉಕ್ರೇನಿಯಿನ್ ಯಾವುದೇ ಸುದ್ದಿ ವಾಹಿನಿಗಳು ಪ್ರಸಾರವಾಗುವುದಿಲ್ಲ ಎಂದು ತಿಳಿದು ಬಂದಿದೆ. ಈ ಹಿಂದೆ ರಷ್ಯಾವು ಕೀವ್‌ನ ಭದ್ರತಾ ಸೇವೆಯ ಹೆಚ್‌ಕ್ಯುಗೆ 'ಹೆಚ್ಚಿನ-ನಿಖರ ಶಸ್ತ್ರಾಸ್ತ್ರ'ಗಳೊಂದಿಗೆ ದಾಳಿ ಮಾಡುವುದಾಗಿ ಎಚ್ಚರಿಕೆ ನೀಡಿತ್ತು. ಈ ಹಿನ್ನೆಲೆ ಸಮೀಪದಲ್ಲಿ ವಾಸಿಸುವ ನಿವಾಸಿಗಳನ್ನು ಸ್ಥಳಾಂತರಿಸಲು ಸೂಚಿಸಲಾಗಿತ್ತು.

Recommended Video

ಥೂ ಇಂಥಾ ಕೀಳು ಮಟ್ಟಕ್ಕಿಳೀತಾ ರಷ್ಯಾ | Oneindia Kannada

English summary
As the war and humanitarian crisis in Ukraine escalates, Google taking more actions to help: Sundar Pichai Tweet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X