ಹೃದಯ ಸಮಸ್ಯೆ, ಕ್ಯಾನ್ಸರ್ ಶೀಘ್ರ ಗುರುತಿಸುವ ಇದು ಡಾಕ್ಟರ್ ಅಲ್ಲ!

Posted By:
Subscribe to Oneindia Kannada

ಲಂಡನ್, ಜನವರಿ 3 : ಯುನೈಟೆಡ್ ಕಿಂಗ್ ಡಮ್ ನ ಸಂಶೋಧಕರು ಆರ್ಟಿಫಿಷಿಯಲ್ ಇಂಟಲಿಜೆನ್ಸ್ (ಕೃತಕ ಬುದ್ಧಿಮತ್ತೆ) ಅಭಿವೃದ್ಧಿ ಪಡಿಸಿದ್ದು, ಅದರ ಮೂಲಕ ಹೃದಯ ಕಾಯಿಲೆ ಹಾಗೂ ಶ್ವಾಸಕೋಶ ಕ್ಯಾನ್ಸರ್ ಅನ್ನು ಆರಂಭಿಕ ಹಂತದಲ್ಲಿ ಹಾಗೂ ನಿಖರವಾಗಿ ಪತ್ತೆ ಹಚ್ಚಬಹುದು.

ಸದ್ಯಕ್ಕೆ ಹೃದಯ ತಜ್ಞರು ಸಮಸ್ಯೆ ಏನಾದರೂ ಕಂಡಬಂದಲ್ಲಿ ಸ್ಕ್ಯಾನ್ ಮೂಲಕ ಹೃದಯದ ಬಡಿತವನ್ನು ಪರಿಶೀಲಿಸುತ್ತಾರೆ. ಈ ರೀತಿಯ ಪರಿಶೀಲನೆ ಮಾಡಿದಾಗ ಅತ್ಯುತ್ತಮ ವೈದ್ಯರು ಎನಿಸಿಕೊಂಡವರು ಸಹ ಪ್ರತಿ ಐದು ಪ್ರಕರಣದಲ್ಲಿ ಒಂದರಲ್ಲಿ ತಪ್ಪಾದ ನಿರ್ಣಯ ಕೈಗೊಳ್ಳುವುದಿದೆ. ಏನೂ ತೊಂದರೆ ಇಲ್ಲ ಎಂದು ಮನೆಗೆ ವಾಪಸ್ ಕಳುಹಿಸಿ, ಆ ರೋಗಿಗೆ ಹೃದಯಾಘಾತ ಆದ ಸಂದರ್ಭವಿದೆ.

ನಿರೋಧಕ ಲಸಿಕೆಗಳ ಬಗ್ಗೆ 43% ವಯಸ್ಕರಿಗೆ ಅರಿವಿಲ್ಲ : ಸಮೀಕ್ಷೆ

ಇನ್ನು ಅಗತ್ಯ ಇಲ್ಲದಿದ್ದರೂ ಆಪರೇಷನ್ ಮಾಡಿದಂಥ ಉದಾಹರಣೆಗಳು ಸಹ ಇವೆ. ಇದೀಗ ಜಾನ್ ರಾಡ್ ಕ್ಲಿಪ್ ಆಸ್ಪತ್ರೆಯಲ್ಲಿ ಅಭಿವೃದ್ಧಿ ಪಡಿಸಿದ ಕೃತಕ ಬುದ್ಧಿ ಮತ್ತೆ ಸಹಾಯದಿಂದ ವೈದ್ಯರು ಕೂಡ ನಿಖರವಾಗಿ ತಿಳಿಸಲಾಗದ ಅಂಶಗಳನ್ನು ಕೂಡ ಪತ್ತೆ ಹಚ್ಚಬಹುದು.

Artificial intelligence can diagnose heart disease, cancer early

ಇದರ ಜತೆಗೆ ರೋಗಿಗೆ ಹೃದಯಾಘಾತದ ಸಂಭವ ಇರುವ ಬಗ್ಗೆ ಕೂಡ ತಿಳಿಸುತ್ತದೆ. ಇದನ್ನು ಪ್ರಾಯೋಗಿಕವಾಗಿ ಆರು ಹೃದಯ ಪರೀಕ್ಷೆ ಪ್ರಯೋಗಾಲಯಗಳಲ್ಲಿ ಬಳಸಲಾಗಿದೆ. ಈ ಕೃತಕ ಬುದ್ಧಿಮತ್ತೆಯನ್ನು ಸಂಶೋಧನೆ ಮಾಡಿದ ಪೌಲ್ ಲೀಸನ್ ಪ್ರಕಾರ, ಇದು ಕೊಡುವ ಮಾಹಿತಿ ಇತರ ಹೃದಯ ತಜ್ಞರಿಗಿಂತ ಹೆಚ್ಚು ಪರಿಣಾಮಕಾರಿಯಾಗಿದೆ ಎಂದು ಬಿಬಿಸಿ ವರದಿ ಮಾಡಿದೆ.

ಅಲ್ಟ್ರೋಮಿಕ್ಸ್ ಎಂಬುದು ಇದರ ಹೆಸರು. ಸಾವಿರ ರೋಗಿಗಳ ಸ್ಕ್ಯಾನ್ ನ ಫಲಿತಾಂಶ ನೋಡಿ, ಸಮಸ್ಯೆಯನ್ನು ಮುಂಚೆಯೇ ಪತ್ತೆ ಹಚ್ಚುವಂತೆ ಇದನ್ನು ತರಬೇತುಗೊಳಿಸಲಾಗಿದೆ. ಯುಕೆನ ಮತ್ತೊಂದು ಸ್ಟಾರ್ಟ್ ಅಪ್ ಅಭಿವೃದ್ಧಿ ಪಡಿಸಿರುವ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ನಿಂದ ಶ್ವಾಸಕೋಶ ಕ್ಯಾನ್ಸರ್ ನ ಲಕ್ಷಣಗಳನ್ನು ಪತ್ತೆ ಹಚ್ಚಬಹುದು.

ದೇಹದಲ್ಲಿನ ಕೆಲ ಕಣಗಳು ಕ್ಯಾನ್ಸರ್ ಗೆ ತಿರುಗಬಹುದೇ ಎಂದು ವೈದ್ಯರು ಸಹ ಹೇಳಲಾಗದ್ದನ್ನು ಇದು ಪತ್ತೆ ಹಚ್ಚುತ್ತದೆ. ಪ್ರಾಯೋಗಿಕವಾಗಿ ಇದನ್ನು ಬಳಸುವಾಗ ತೊಂದರೆ ಇಲ್ಲದ ಪ್ರಕರಣವನ್ನು ಗುರುತಿಸುವಲ್ಲಿ ಹಾಗೂ ಶ್ವಾಸಕೋಶ ಕ್ಯಾನ್ಸರ್ ಅನ್ನು ಆರಂಭಿಕ ಹಂತದಲ್ಲಿಯೇ ಪತ್ತೆ ಹಚ್ಚುವಲ್ಲಿ ಇದು ಯಶಸ್ವಿಯಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Researchers in the UK have developed new artificial intelligence (AI) systems which can help diagnose heart disease and lung cancer much more accurately and early.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ