ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಗ್ರ ಪೀಡಿತ ಪ್ರದೇಶಗಳಲ್ಲಿ ಆರ್ಟ್ ಆಫ್ ಲಿವಿಂಗ್ ತತ್ವ

By ಅನುಷಾ ರವಿ
|
Google Oneindia Kannada News

ಇರಾಕ್, ನವೆಂಬರ್, 18: ಇರಾಕ್ ನ ಐಸ್ ಉಗ್ರ ಪೀಡಿತ ಪ್ರದೇಶಗಳಲ್ಲಿರುವ ಜನರಿಗೆ ಆಧ್ಯಾತ್ಮಿಕ, ಮತ್ತು ಆರ್ಥಿಕ ಶಕ್ತಿ ತುಂಬ ಬೇಕಾದ ಅವಶ್ಯಕತೆ ಇದೆ. ಎಲ್ಲದಕ್ಕಿಂತ ಮುಖ್ಯವಾಗಿ ಶಾಂತಿ ನೆಲೆಸಬೇಕಾದ ಅವಶ್ಯಕತೆ ಇದೆ.

ಉಗ್ರ ಸಂಘಟನೆಗಳ ಉಪಟಳದಿಂದಾಗಿ 3.7ಮಿಲಿಯನ್ ಜನರ ಜೀವನ ಅಸ್ತವ್ಯಸ್ತಗೊಂಡಿದೆ. 5ಲಕ್ಷಕ್ಕೂ ಅಧಿಕ ಮಂದಿ ನಿರಾಶ್ರಿತರಾಗಿದ್ದಾರೆ.

Art of living's spiritual touch to ISIS struck Iraq

ಈ ನಿರಾಶ್ರಿತರ ಜೀವನಕ್ಕಾಗಿ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಆಧ್ಯಾತ್ಮಿಕ ತತ್ವಗಳ ಮೂಲಕ ಅನೇಕ ಕಾರ್ಯಕ್ರಮಗಳನ್ನು ಇಲ್ಲಿ ಹಮ್ಮಿಕೊಳ್ಳಲಾಗಿದೆ.

"ಐಸ್ ಉಗ್ರ ಸಂಘಟನೆಗಳ ಮೇಲೆ ಶಾಂತಿ ಮೇಲುಗೈ ಸಾಧಿಸಬೇಕಾದ ಅವಶ್ಯಕತೆ ಇದೆ" ಎಂದು ಆರ್ಟ್ ಆಫ್ ಲಿಂವಿಂಗ್ ನ ಕಾರ್ಯಕ್ರಮ ನಿರ್ದೇಶಕ ಮವಾಹಿಬ್-ಅಲ್- ಶೈಬಾನಿ ಹೇಳುತ್ತಾರೆ.

ಯುದ್ಧಪೀಡಿತ ಪ್ರದೇಶವಾದ ಯಾಜಿದಿ ಜನಾಂಗವಿರುವ ಶಿಂಜಾರ್ ಪ್ರದೇಶದಲ್ಲಿ ಶೈಬಾನಿ ಅವರು ಹಲವು ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ.

Art of living's spiritual touch to ISIS struck Iraq

ಇರಾಕ್ ಯುದ್ಧ ಪೀಡಿತ ಪ್ರದೇಶಗಳಲ್ಲಿ ಪರಿಹಾರ ಕಾರ್ಯಕ್ರಮಗಳನ್ನು ನಿರ್ವಹಿಸುತ್ತಿದ್ದ ಶೈಬಾನಿ ಹಿಂದೊಮ್ಮೆ ಭಾರತಕ್ಕೆ ಭೇಟಿ ನೀಡಿದ್ದಾಗ ಅವರೊಂದಿಗೆ 27 ಮಂದಿ ಇರಾಕ್ ಜನರೊಂದಿಗೆ ಶಾಂತಿ ಸ್ಥಾಪನೆಯ ಕಲೆಯನ್ನು ಕಲೆತು ಇರಾಕ್ ನಲ್ಲಿ ಅದನ್ನು ಆಚರಣೆಗೆ ತರುವ ಪ್ರಯತ್ನ ಮಾಡುತ್ತಿದ್ದಾರೆ.

7 ಸಾವಿರಕ್ಕೂ ಅಧಿಕ ಬಾಲಕಿಯರು ಮತ್ತು ಮಹಿಳೆಯರನ್ನು ಅಪಹರಿಸಿರುವ ಐಸ್ ಉಗ್ರರು ಅವರನ್ನು ಲೈಂಗಿಕ ದಾಸಿಯರನ್ನಾಗಿ ಮಾಡಿಕೊಂಡಿದ್ದಾರೆ.

ಇನ್ನೂ ದಾರುಣವೆಂಬತೆ ಮಹಿಳೆಗೆ ಬೆಲೆಯೇ ಇಲ್ಲ ಎಂಬಂತೆ ಕೇವಲ 10 ಡಾಲರ್ ಗೆ ಮಹಿಳೆಯೊಬ್ಬರನ್ನು ಮಾರಾಟ ಮಾಡಲಾಗಿದೆ. ಎಂದು ಅವರು ದುಃಖ ವ್ಯಕ್ತಪಡಿಸಿದ್ದಾರೆ. ನಮ್ಮ ಸಂಸ್ಥೆ ಮೂಲಕ ಅವರನ್ನು ರಕ್ಷಿಸುವ ಕಾರ್ಯ ಮಾಡುತ್ತಿದ್ದೇವೆ ಅವರು ಹೇಳಿದ್ದಾರೆ.

ಶೈಬಾನಿ ಅವರು ಇರಾಕ್ ನಾದ್ಯಂತ ಸಂಚರಿಸಿ 120ಕ್ಕೂ ಹೆಚ್ಚು ಟನ್ ಗಳಷ್ಟು ಪರಿಹಾರ ಸಾಮಾಗ್ರಿ ಒದಗಿಸಿದ್ದಾರೆ. ಯುವಕರಿಗೆ ಆಪ್ತಸಮಾಲೋಚನೆ ಮೂಲಕ ಆಧ್ಯಾತ್ಮಿಕ ಸಲಹೆ ನೀಡುತ್ತಿದ್ದಾರೆ.

Art of living's spiritual touch to ISIS struck Iraq

ಹಲವರಿಗೆ ವಿದ್ಯಾಭ್ಯಾಸ ಕಲ್ಪಿಸಿಕೊಡುತ್ತಿದ್ದಾರೆ. ಅಷ್ಟೇ ಅಲ್ಲದೆ ಇವರ ಸಂಘಟನೆಯಿಂದ ರಕ್ಷಿಸಲ್ಪಟ್ಟ ಯುವತಿಯೊಬ್ಬಳು ಈಗ ಬ್ಯಾಂಕ್ ವೊಂದರಲ್ಲಿ ಕೆಲಸ ನಿರ್ವಹಿಸುತ್ತಾ ಜೀವನ ಕಟ್ಟಿಕೊಂಡಿದ್ದಾಳೆ.

ಜನಜೀವನಕ್ಕೆ ಸೂಕ್ತ ಭದ್ರತೆ ಒದಗಿಸುವುದೇ ದೊಡ್ಡ ಸಮಸ್ಯೆಯಾಗಿಬಿಟ್ಟಿದೆ. ಯಾವ ಕ್ಷಣದಲ್ಲಿ ಎಲ್ಲಿ ಬಾಂಬ್ ಸ್ಫೋಟಗೊಳ್ಳುತ್ತೋ ಗೊತ್ತಿಲ್ಲ. ಅಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ನಮ್ಮ ಸಂಘಟನೆ ಸದಸ್ಯರು ಕೆಲಸ ನಿರ್ವಹಿಸಿದ್ದಾರೆ ಎಂದು ಅವರು ಹೇಳುತ್ತಾರೆ.

English summary
"Iraq needs spirituality, ecnomic stability and over everything else, peace. Over 3.7million people have been displaced and half a million have turned refugees.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X