ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕ, ನೈಟ್ ಕ್ಲಬ್ ನಲ್ಲಿ ಗನ್ ಮ್ಯಾನಿನ ಮಾರಣಹೋಮ: 50 ಸಾವು

By Balaraj
|
Google Oneindia Kannada News

ಫ್ಲೋರಿಡಾ, ಜೂ 12: ಫ್ಲೋರಿಡಾ ರಾಜ್ಯದ ಓರ್ಲಾಂಡೋ ನಗರದ ಸಲಿಂಗಕಾಮಿಗಳ ಅಡ್ಡವೊಂದರ ನೈಟ್ ಕ್ಲಬ್ ನಲ್ಲಿ ಬಂದೂಕುದಾರಿ ನಡೆಸಿದ ಗುಂಡಿನ ಸುರಿಮಳೆಗೆ ಐವತ್ತು ಜನ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.

ಅಮೆರಿಕ ಕಾಲಮಾನ ಬೆಳಗ್ಗಿನ ಎರಡು ಗಂಟೆಗೆ ಕ್ಲಬ್ ಪ್ರವೇಶಿಸಿದ ಬಂದೂಕುದಾರಿ, ಮನ ಬಂದಂತೆ ಗುಂಡಿನ ದಾಳಿ ನಡೆಸಿದ್ದಾನೆ. ಅಲ್ಲದೇ, ಸುಮಾರು ನಲವತ್ತಕ್ಕೂ ಹೆಚ್ಚು ಜನರನ್ನು ಒತ್ತೆಯಾಗಿರಿಸಿಕೊಂಡಿದ್ದಾನೆ.

ತಾಜಾ ಮಾಹಿತಿಯ ಪ್ರಕಾರ ಪೊಲೀಸರು ಬಂದೂಕುದಾರಿಯನ್ನು ಹೊಡೆದುರುಳಿಸಿದ್ದಾರೆ.

Around 50 dead, 53 injured in Orlando bar attack in US

ಗಾಯಗೊಂಡ ಸುಮಾರು 53 ಜನರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ, ಬಂದೂಕುದಾರಿ ಯಾವ ಕಾರಣಕ್ಕಾಗಿ ಗುಂಡಿನ ದಾಳಿ ನಡೆಸಿದ ಎನ್ನುವ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ ಎಂದು ಎಫ್ ಬಿ ಐ ಅಧಿಕಾರಿ ರೋನ್ ಹಾರ್ಪರ್ ಮಾಧ್ಯಮದವರಿಗೆ ವಿವರಿಸಿದ್ದಾರೆ.

ದಾಳಿ ನಡೆಸಿದ 22 ವರ್ಷದ ವ್ಯಕ್ತಿ ಅಮೆರಿಕ ಪೌರತ್ವ ಹೊಂದಿರುವ ಅಫ್ಘಾನಿಸ್ತಾನ ಮೂಲದ ಓಮರ್ ಸಿದ್ದಿಕಿ ಮತೀನ್ ಎಂದು ಪೊಲೀಸರು ಹೇಳಿಕೆ ನೀಡಿದ್ದಾರೆ. ಘಟನೆಯ ನಂತರ ಓರ್ಲಾಂಡೋ ನಗರದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ.

ಈ ದುಷ್ಕರ್ಮಿ ಮುಸ್ಲಿಂ ಮೂಲಭೂತವಾದಿಯೋ ಎನ್ನುವ ವಿಚಾರ ಖಚಿತವಾಗಿಲ್ಲ. ಸ್ಥಳೀಯ ಮುಸ್ಲಿಂ ಧಾರ್ಮಿಕ ಮುಖಂಡರನ್ನು ಕರೆಸಿ ಮಾಧ್ಯಮವರ ಮುಂದೆ ಹೇಳಿಕೆ ನೀಡಲು ಪೊಲೀಸರು ಸೂಚಿಸಿದ್ದು, ಮುಸ್ಲಿಂ ಸಮುದಾಯದ ಮೇಲೆ ವೃಥಾ ಆರೋಪ ಬರುವುದನ್ನು ತಪ್ಪಿಸಲು ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.

ದಾಳಿ ನಡೆಸಿದ ವ್ಯಕ್ತಿ ಸಂಪೂರ್ಣವಾಗಿ ಸಿದ್ದತೆ ನಡೆಸಿಕೊಂಡು ಬಂದಿದ್ದ, ಅತ್ಯಾಧುನಿಕ ಬಂದೂಕಿನ ಜೊತೆ ಬಂದಿರುವ ಈ ವ್ಯಕ್ತಿ ತನ್ನ ಜೊತೆ ಇತರ ವಸ್ತುಗಳನ್ನೂ ತೆಗೆದುಕೊಂಡು ಬಂದಿದ್ದ, ಈತ ನಡೆಸಿದ ದಾಳಿ 'ಜಿಹಾದಿ' ದಾಳಿಯ ರೀತಿಯಲ್ಲಿತ್ತು ಎಂದು ಪೊಲೀಸರು ಹೇಳಿದ್ದಾರೆ.

ಘಟನೆಯ ಜವಾಬ್ದಾರಿಯನ್ನು ಉಗ್ರ ಸಂಘಟನೆ ISIS ವಹಿಸಿಕೊಂಡಿಲ್ಲವಾದರೂ, ದಾಳಿ ನಡೆಸಿದ ವ್ಯಕ್ತಿಯನ್ನು ಮನಸಾರೆ ಹೊಗಳಿದೆ. (ಚಿತ್ರ: AFP)

English summary
50 people were killed inside the Pulse club and at least 53 people were injured at gay nightclub in Orlando, Florida in US when a heavily-armed gunman opened fire.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X