ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟರ್ಮಿನೇಟರ್ ಖ್ಯಾತಿಯ ಆರ್ನಾಲ್ಡ್ ಯುಎಸ್ ಅಧ್ಯಕ್ಷ ಆಗ್ಬೇಕಿತ್ತಂತೆ!

By Mahesh
|
Google Oneindia Kannada News

ಕ್ಯಾಲಿಫೋರ್ನಿಯಾ, ಅಕ್ಟೋಬರ್ 25: ಹಾಲಿವುಡ್ಡಿನ ಹಿರಿಯ ನಟ, ಟರ್ಮಿನೇಟರ್ ಸಿನಿಮಾ ಖ್ಯಾತಿಯ ಅರ್ನಾಲ್ಡ್ ಸ್ವಾರ್ಜ್ನೆಗರ್ ಅವರು ಅಮೆರಿಕ ಅಧ್ಯಕ್ಷ ಪಟ್ಟಕ್ಕೇರಲು ಆಸೆ ಪಟ್ಟಿದ್ದರಂತೆ. ಆದರೆ, ತಾಂತ್ರಿಕ ಕಾರಣಗಳಿಂದ ಇದು ಸಾಧ್ಯವಾಗಲಿಲ್ಲ ಎಂದು ಸಮಾರಂಭವೊಂದರಲ್ಲಿ ನೋವು ತೋಡಿಕೊಂಡಿದ್ದಾರೆ.

'ಕಮ್ಯಾಂಡೋ' ಖ್ಯಾತಿಯ ಅರ್ನಾಲ್ಡ್ ಅವರಿಗೆ ರಾಜಕೀಯ ಏನು ಹೊಸತಲ್ಲ. 2011ರ ತನಕ ಕ್ಯಾಲಿಫೋರ್ನಿಯಾ ರಾಜ್ಯಪಾಲರಾಗಿ ಕಾರ್ಯನಿರ್ವಹಿಸಿ, ಜನಮನ್ನಣೆ ಗಳಿಸಿದ್ದರು. ಅರ್ನಾಲ್ಡ್ ಅವರಿಗೆ ಈ ಬಾರಿ ಅಧ್ಯಕ್ಷ ಪಟ್ಟಕ್ಕೇರಲು ಬಯಸಿ, ರಿಪಬ್ಲಿಕ್ ಪಾರ್ಟಿ ಬೆಂಬಲ ಕೂಡಾ ಪಡೆದುಕೊಂಡಿದ್ದರು.

Arnold Schwarzenegger wanted to be president

ಆದರೆ, ಆಸ್ಟ್ರೀಯಾದಲ್ಲಿ ಜನಿಸಿದ ಅರ್ನಾಲ್ಡ್ ಅವರು ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಾಗಲಿಲ್ಲ ಎಂದು ಫೀಮೆಲ್ ಫರ್ಸ್ಟ್ ವರದಿ ಮಾಡಿದೆ.

ಅರ್ನಾಲ್ಡ್ ಮತ ಯಾರಿಗೆ?: ಡೋನಾಲ್ಡ್ ಟ್ರಂಪ್ ಹಾಗೂ ಹಿಲರಿ ಕ್ಲಿಂಟನ್ ನಡುವೆ ಸಮಬಲದ ಹೋರಾಟ ಕಂಡು ಬಂದಿದೆ. ಈ ನಡುವೆ ಸೆಲೆಬ್ರಿಟಿಗಳು ಯಾರಿಗೆ ಮತ ಹಾಕುತ್ತಾರೆ ಎಂಬುದರ ಬಗ್ಗೆ ಬಿಸಿಬಿಸಿ ಚರ್ಚೆ ಆರಂಭವಾಗಿದೆ. ಈ ಬಗ್ಗೆ ಅರ್ನಾಲ್ಡ್ ಅವರನ್ನು ಪ್ರಶ್ನಿಸಿದರೆ, ನಾನಂತೂ ಡೆಮಾಕ್ರಾಟಿಕ್ ಪಕ್ಷದ ಹಿಲರಿ ಅವರಿಗೆ ಮತ ಹಾಕುತ್ತೇನೆ. ಕಮ್ಯಾಂಡರ್ ಇನ್ ಚೀಫ್ ಆಗಲು ಹೊರಟಿರುವ ರಿಪಬ್ಲಿಕ್ ಪಾರ್ಿಯ ಡೋನಾಲ್ಡ್ ಟ್ರಂಪ್ ಗೆ ಮತ ಹಾಕುವುದಿಲ್ಲ ಎಂದಿದ್ದಾರೆ.

ನಾನು ಅಮೆರಿಕದಲ್ಲಿ ಜನಿಸಿದ್ದಾರೆ ನಾನು ಈ ರೇಸಿನಲ್ಲಿ ಸೇರಿಕೊಳ್ಳುತ್ತೇನೆ. ನಾನು ರಾಜಕೀಯವನ್ನು ಪ್ರೀತಿಸುವುದಿಲ್ಲ. ಆದರೆ, ನೀತಿ, ನಿಯಮಗಳನ್ನು ಗೌರವಿಸುತ್ತೇನೆ ಎಂದು 69 ವರ್ಷ ವಯಸ್ಸಿನ ಹಿರಿಯ ತಾರೆ ಅರ್ನಾಲ್ಡ್ ಹೇಳಿದ್ದಾರೆ. (ಪಿಟಿಐ)

English summary
Hollywood star Arnold Schwarzengger wishes he would been able to run for the US presidency this year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X