ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭೀಕರ ಯುದ್ಧದ ನಂತರ ಪ್ರಧಾನಿ ರಾಜೀನಾಮೆಗೆ ಪಟ್ಟು

|
Google Oneindia Kannada News

ನಗೊರ್ನೊ ಹಾಗೂ ಕರಬಾಖ್ ಪ್ರದೇಶಕ್ಕಾಗಿ ಬಡಿದಾಡಿಕೊಂಡಿದ್ದ ಅರ್ಮೇನಿಯ ಮತ್ತು ಅಜೆರ್ಬೈಜಾನ್‌ ಜನರಿಗೆ ಇನ್ನೂ ನೆಮ್ಮದಿ ಸಿಕ್ಕಿಲ್ಲ. ಯುದ್ಧದಲ್ಲಿ ಮಡಿದ ಸಾವಿರಾರು ಸೈನಿಕರು ಹಾಗೂ ನಾಗರಿಕರಿಗೆ ಗೌರವ ಸಲ್ಲಿಸಲು ಅರ್ಮೇನಿಯ 3 ದಿನಗಳ ಶೋಕಾಚರಣೆ ಘೊಷಿಸಿದೆ. ಆದರೆ ಈ ಶೋಕಾಚರಣೆಯಲ್ಲೇ ಜನಗಳು ಪ್ರಧಾನಿ ವಿರುದ್ಧ ತಿರುಗಿಬಿದ್ದಿದ್ದಾರೆ.

ಯುದ್ಧ ನಿಲ್ಲಿಸುವುದಕ್ಕಾಗಿ ಅರ್ಮೇನಿಯ ಪ್ರಧಾನಿ ನಿಕೋಲ್ ಪಶಿನ್ಯಾನ್ ಮಾಡಿಕೊಂಡ ಕದನ ವಿರಾಮ ಒಪ್ಪಂದ ಅವರ ಖುರ್ಚಿಗೆ ಕುತ್ತು ತಂದಿದೆ. ಕದನ ವಿರಾಮ ಒಪ್ಪಂದ ಅನ್ವಯ ಅಜೆರ್ಬೈಜಾನ್‌ಗೆ ನಗೊರ್ನೊ ಹಾಗೂ ಕರಬಾಖ್ ಪ್ರದೇಶವನ್ನು ಅರ್ಮೇನಿಯ ಬಿಟ್ಟುಕೊಟ್ಟಿದೆ. ಪರಿಣಾಮ ನಗೊರ್ನೊ-ಕರಬಾಖ್ ಪ್ರದೇಶದಲ್ಲಿ ವಾಸಿಸುತ್ತಿದ್ದ ಲಕ್ಷಾಂತರ ಅರ್ಮೇನಿಯನ್ನರು ನಿರಾಶ್ರಿತರಾಗಿದ್ದಾರೆ.

ತಮ್ಮ ಮನೆಗೆ ಬೆಂಕಿ ಹಚ್ಚುತ್ತಿರುವ ಜನ, ಕಾರಣ ಮಾತ್ರ ಕರುಣಾಜನಕತಮ್ಮ ಮನೆಗೆ ಬೆಂಕಿ ಹಚ್ಚುತ್ತಿರುವ ಜನ, ಕಾರಣ ಮಾತ್ರ ಕರುಣಾಜನಕ

ಈ ಹಿನ್ನೆಲೆಯಲ್ಲಿ ಅರ್ಮೇನಿಯನ್ನರು ತಮ್ಮ ಪ್ರಧಾನಿ ವಿರುದ್ಧ ರೊಚ್ಚಿಗೆದ್ದು, ನಿಕೋಲ್ ಪಶಿನ್ಯಾನ್ ರಾಜೀನಾಮೆ ನೀಡುವಂತೆ ಆಗ್ರಹಿಸಿ ಬೃಹತ್ ಹೋರಾಟ ಆರಂಭಿಸಿದ್ದಾರೆ. ಹೀಗಾಗಿ ಇಷ್ಟುದಿನ ಅಜೆರ್ಬೈಜಾನ್‌ ಜೊತೆಗೆ ಕದಾಡಿದ್ದ ಅರ್ಮೇನಿಯ ಪಡೆಗಳಿಗೆ, ಆಂತರಿಕ ಯುದ್ಧದ ಆತಂಕವೂ ಎದುರಾಗಿದೆ. ನಿಕೋಲ್ ಪಶಿನ್ಯಾನ್ ಮಾತ್ರ ಹೋರಾಟದ ಬಗ್ಗೆ ತಲೆಕೆಡಿಸಿಕೊಳ್ಳದೆ ಹಾಯಾಗಿದ್ದಾರೆ. ಇದು ಜನರನ್ನು ಮತ್ತಷ್ಟು ರೊಚ್ಚಿಗೆಬ್ಬಿಸಿದೆ.

ಯಾರಿಗೆ ಲಾಭ..? ಯಾರಿಗೆ ನಷ್ಟ..?

ಯಾರಿಗೆ ಲಾಭ..? ಯಾರಿಗೆ ನಷ್ಟ..?

ಕೈಯಲ್ಲಿ ಗನ್, ರೈಫಲ್ಸ್, ಬಾಂಬ್ ಹಿಡಿದು ಬಡಿದಾಡಿದ್ದು ಅರ್ಮೇನಿಯ ಹಾಗೂ ಅಜೆರ್ಬೈಜಾನ್‌. ಆದರೆ ಇದರ ಲಾಭ ಪಡೆದಿದ್ದು ಮಾತ್ರ ವಿಶ್ವದ ಬಲಿಷ್ಠ ರಾಷ್ಟ್ರಗಳು. ಸಂಧಾನದ ನೆಪದಲ್ಲಿ ಅರ್ಮೇನಿಯ ಹಾಗೂ ಅಜೆರ್ಬೈಜಾನ್‌ ಮೇಲೆ ನಿಯಂತ್ರಣ ಸಾಧಿಸಲು ಬಲಿಷ್ಠ ರಾಷ್ಟ್ರಗಳು ಪ್ರಯತ್ನಿಸುತ್ತಿವೆ ಎಂಬ ಆರೋಪವಿದೆ. ಇದರ ಹೊರತಾಗಿಯೂ ಅರ್ಮೇನಿಯ ಹಾಗೂ ಅಜೆರ್ಬೈಜಾನ್‌ ದೇಶಗಳ ಸಾವಿರಾರು ಜನರು ಯುದ್ಧದ ಪರಿಣಾಮ ಮೃತಪಟ್ಟಿದ್ದಾರೆ. ಲಕ್ಷ ಲಕ್ಷ ಜನರಿಗೆ ಸೂರು ಇಲ್ಲ, ತಿನ್ನಲು ತುತ್ತು ಅನ್ನವೂ ಸಿಗುತ್ತಿಲ್ಲ.

ಯುದ್ಧ ನಿಂತರೂ ಹೊತ್ತಿ ಉರಿಯುತ್ತಿದೆ ಅರ್ಮೇನಿಯ ರಾಜಧಾನಿಯುದ್ಧ ನಿಂತರೂ ಹೊತ್ತಿ ಉರಿಯುತ್ತಿದೆ ಅರ್ಮೇನಿಯ ರಾಜಧಾನಿ

ಅರ್ಮೇನಿಯ ಒಳನುಗ್ಗಿದ ರಷ್ಯಾ ಸೇನೆ..!

ಅರ್ಮೇನಿಯ ಒಳನುಗ್ಗಿದ ರಷ್ಯಾ ಸೇನೆ..!

ಈ ಹಿಂದೆಯೇ ರಷ್ಯಾ ಸೇನೆ ಕಾರ್ಯಾಚರಣೆ ಬಗ್ಗೆ ಹಿಂಟ್ ಸಿಕ್ಕಿತ್ತು. ತನ್ನ ಮಾತನ್ನು ಕೇಳದ ಅರ್ಮೇನಿಯ ಮತ್ತು ಅಜೆರ್ಬೈಜಾನ್‌ಗೆ ಪಾಠ ಕಲಿಸಲು ರಷ್ಯಾ ಪ್ಲಾನ್ ಮಾಡಿತ್ತು. ಈ ಪ್ಲಾನ್ ಪ್ರಕಾರ ರಷ್ಯಾ ಸೇನೆ ಇದೀಗ ಅರ್ಮೇನಿಯ ಒಳಗೆ ನುಗ್ಗಿದೆ. ಅರ್ಮೇನಿಯ ಪರಿಸ್ಥಿತಿ ಹತೋಟಿಗೆ ತರುವ ನೆಪದಲ್ಲಿ ಅರ್ಮೇನಿಯದ ಮೇಲೆ ನಿಯಂತ್ರಣ ಸಾಧಿಸಲು ಮುಂದಾಗಿದೆ.


ಅಷ್ಟಕ್ಕೂ 3 ದಶಕಗಳ ಹಿಂದೆ ಅರ್ಮೇನಿಯ ಹಾಗೂ ಅಜೆರ್ಬೈಜಾನ್‌ ರಷ್ಯಾ ಭಾಗವಾಗಿದ್ದ ದೇಶಗಳು. ಸೋವಿಯತ್ ಒಕ್ಕೂಟದ ಪ್ರಾಂತ್ಯಗಳಾಗಿದ್ದ ಅರ್ಮೇನಿಯ-ಅಜೆರ್ಬೈಜಾನ್‌ ಸೋವಿಯತ್ ವಿಭಜನೆ ಬಳಿಕ ಬೇರೆ ಬೇರೆ ದೇಶಗಳಾದವು. ಹೀಗಾಗಿ ರಷ್ಯಾ ಈ ಎರಡೂ ರಾಷ್ಟ್ರಗಳ ಮೇಲೆ ಹಿಡಿತ ಸಾಧಿಸಲು ಬಯಸುತ್ತಿದೆ ಎಂಬುದು ವಿರೋಧಿಗಳ ಆರೋಪವಾಗಿದೆ.

ಕೋಳಿ ಜಗಳದಿಂದ ಅನಾಹುತ..!

ಕೋಳಿ ಜಗಳದಿಂದ ಅನಾಹುತ..!

ಅರ್ಮೇನಿಯ ಹಾಗೂ ಅಜೆರ್ಬೈಜಾನ್ ಯುದ್ಧದಲ್ಲಿ ಅಜೆರ್ಬೈಜಾನ್ ಸೇನೆಯ ಸುಮಾರು 3000 ಸಾವಿರ ಸೈನಿಕರು ಮೃತಪಟ್ಟಿದ್ದಾರೆ. ಈ ಕುರಿತು ಅಜೆರ್ಬೈಜಾನ್ ಅಧಿಕೃತವಾಗಿ ಮಾಹಿತಿ ನೀಡಿದೆ. 2800 ಸೈನಿಕರ ದೇಹಗಳು ಈವರೆಗೂ ಸಿಕ್ಕಿದ್ದರೆ, 100ಕ್ಕೂ ಹೆಚ್ಚು ಅಜೆರ್ಬೈಜಾನ್ ಸೈನಿಕರು ನಾಪತ್ತೆಯಾಗಿ ತಿಂಗಳುಗಳೇ ಕಳೆದಿವೆ.


ಈ ಪೈಕಿ ಬಹುಪಾಲು ಜನರು ಯುದ್ಧದಲ್ಲಿ ಮೃತಪಟ್ಟಿರಬಹುದು ಎನ್ನಲಾಗುತ್ತಿದೆ. ಇದು ಕೇವಲ ಅಜೆರ್ಬೈಜಾನ್ ಕಳೆದುಕೊಂಡಿರುವ ಸೈನಿಕರ ಲೆಕ್ಕ. ಆದರೆ ಅರ್ಮೇನಿಯ ಕಥೆ ಕೂಡ ಇದಕ್ಕಿಂತ ಘೋರ ಹಾಗೂ ಭೀಕರವಾಗಿದೆ. ಎರಡೂ ರಾಷ್ಟ್ರಗಳ ಮಧ್ಯೆ ಕೋಳಿ ಜಗಳದಂತೆ ಆರಂಭವಾದ ಯುದ್ಧ, ಬರೋಬ್ಬರಿ 2 ತಿಂಗಳ ಕಾಲ ನಡೆಯಿತು. ಈ ಯುದ್ಧದಲ್ಲಿ ಸೈನಿಕರು ಸೇರಿದಂತೆ ಹತ್ತಾರು ಸಾವಿರ ಜನರು ಜೀವವನ್ನೇ ಬಿಡಬೇಕಾಯಿತು. ಹೀಗೆ ಕೋಳಿ ಜಗಳ ಇಂತಹ ದೊಡ್ಡ ಅನಾಹುತ ಸೃಷ್ಟಿಮಾಡಿದೆ.

ನಗೊರ್ನೊ-ಕರಬಾಖ್ ಅಜೆರ್ಬೈಜಾನ್ ವಶಕ್ಕೆ

ನಗೊರ್ನೊ-ಕರಬಾಖ್ ಅಜೆರ್ಬೈಜಾನ್ ವಶಕ್ಕೆ

ರಷ್ಯಾ ಜೊತೆ ಅರ್ಮೇನಿಯ ಹಾಗೂ ಅಜೆರ್ಬೈಜಾನ್ ಮಾಡಿಕೊಂಡಿರುವ ಒಪ್ಪಂದದ ಪ್ರಕಾರ ನಗೊರ್ನೊ-ಕರಬಾಖ್ ಪ್ರದೇಶವನ್ನು ಅರ್ಮೇನಿಯ ಪಡೆಗಳು ಅಜೆರ್ಬೈಜಾನ್ ವಶಕ್ಕೆ ನೀಡಿವೆ. ನಗೊರ್ನೊ-ಕರಬಾಖ್ ಪ್ರದೇಶದಲ್ಲಿ ಶತಮಾನಗಳಿಂದ ವಾಸವಿದ್ದ ಅರ್ಮೇನಿಯನ್ನರು ಈಗಾಗಲೇ ಜಾಗ ಖಾಲಿ ಮಾಡಿದ್ದಾರೆ.


ಇನ್ನು ಈ ಪ್ರದೇಶದಲ್ಲಿ ಅಜೆರ್ಬೈಜಾನ್ ಪಡೆಗಳು ಸಂಪೂರ್ಣ ಹಿಡಿತ ಸಾಧಿಸಿದ್ದು, ರಷ್ಯಾ ಸೇನೆ ಕೂಡ ಇದಕ್ಕಾಗಿ ಸಾಥ್ ನೀಡಿತ್ತು. ನಗೊರ್ನೊ-ಕರಬಾಖ್ ಪ್ರದೇಶದಿಂದ ಮನೆ ತೊರೆಯುವ ಮುನ್ನ ಅರ್ಮೇನಿಯನ್ನರು, ಬೆಂಕಿ ಹಚ್ಚಿದ್ದರು. ನಾವು ವಾಸವಿದ್ದ ಮನೆ ಬೇರೆಯವರ ಪಾಲಾಗುವುದು ಬೇಡ ಎಂಬ ಕಾರಣಕ್ಕೆ ಈ ರೀತಿ ಅವರು ತಮ್ಮ ಕನಸಿನ ಮನೆಗಳಿಗೆ ಬೆಂಕಿ ಹಚ್ಚಿ ಊರುಬಿಟ್ಟಿದ್ದರು. ಇಂತಹ ಕರುಣಾಜನಕ ದೃಶ್ಯಗಳ ಬೆನ್ನಲ್ಲೇ ಇಡೀ ನಗೊರ್ನೊ-ಕರಬಾಖ್ ಪ್ರದೇಶ ಅಜೆರ್ಬೈಜಾನ್ ಪಡೆಗಳ ವಶವಾಗಿದೆ.

ಯುದ್ಧಕ್ಕೆ ಕಾರಣ ಏನು..?

ಯುದ್ಧಕ್ಕೆ ಕಾರಣ ಏನು..?

ನಗೊರ್ನೊ-ಕರಬಾಖ್ ಸಾಕಷ್ಟು ಆದಾಯ ತಂದುಕೊಡಬಲ್ಲ ಪ್ರದೇಶಗಳು. 4,400 ಚ.ಕಿ.ಮೀ ವಿಸ್ತೀರ್ಣದ ಭೂಮಿಗೆ ಭಾರಿ ಬೇಡಿಕೆ ಇದೆ. ಹೀಗಾಗಿ ಈ ಪ್ರದೇಶಗಳ ಮೇಲೆ ನಿಯಂತ್ರಣ ಸಾಧಿಸಲು ಎರಡೂ ದೇಶಗಳು ಕಚ್ಚಾಡುತ್ತಿವೆ.


ಈ ಹಿಂದೆ ಅಂದರೆ 1994ರಲ್ಲೂ ಇದೇ ವಿಚಾರಕ್ಕೆ ಅರ್ಮೇನಿಯ ಹಾಗೂ ಅಜೆರ್ಬೈಜಾನ್‌ ಬಡಿದಾಡಿಕೊಂಡಿದ್ದವು. ನಂತರ ನಡೆದ ಸಂಧಾನದಲ್ಲಿ ತಕ್ಷಣಕ್ಕೆ ಯುದ್ಧ ನಿಂತಿದ್ದರೂ ದಶಕಗಳ ಕಾಲ ಬೂದಿ ಮುಚ್ಚಿದ ಕೆಂಡದಂತೆ ಇತ್ತು ಪರಿಸ್ಥಿತಿ. 2020ರಲ್ಲಿ ಆ ಕೆಂಡ ಮತ್ತೆ ಬೆಂಕಿಯಾಗಿ, ಜ್ವಾಲೆಯ ರೂಪ ಪಡೆದಿತ್ತು. ಎರಡೂ ದೇಶಗಳ ನಾಯಕರ ದುರಾಸೆಗೆ ಹತ್ತಾರು ಸಾವಿರ ಜೀವಗಳು ಬಲಿಯಾಗಿವೆ.

ಸಾವಿರಾರು ಅಮಾಯಕರನ್ನು ಕೊಂದು ಹಾಕಿದ ಸರ್ವಾಧಿಕಾರಿಗಳುಸಾವಿರಾರು ಅಮಾಯಕರನ್ನು ಕೊಂದು ಹಾಕಿದ ಸರ್ವಾಧಿಕಾರಿಗಳು

1994ರಲ್ಲಿ 30 ಸಾವಿರ ಜನರ ಸಾವು

1994ರಲ್ಲಿ 30 ಸಾವಿರ ಜನರ ಸಾವು

ಸದ್ಯದಮಟ್ಟಿಗೆ ಹೇಳುವುದಾದರೆ ಈಗಿನ ಸಾವು-ನೋವುಗಳು 1990ರ ದಶಕಕ್ಕೆ ಹೋಲಿಕೆ ಮಾಡಿದರೆ ತೀರಾ ಕಡಿಮೆ. ಏಕೆಂದರೆ 1994ರ ಆಸುಪಾಸಿನಲ್ಲಿ ಅರ್ಮೇನಿಯ ಹಾಗೂ ಅಜೆರ್ಬೈಜಾನ್ ನಡುವೆ ಹೀಗೆ ಮೆಲ್ಲಗೆ ಯುದ್ಧ ಆರಂಭವಾಗಿ ಸುಮಾರು 30 ಸಾವಿರ ಜನರನ್ನು ಬಲಿಪಡೆದಿತ್ತು.


2020ರಲ್ಲೂ ಆ ಹಿಂಸಾಚಾರ ಮತ್ತೆ ಮರುಕಳಿಸಬಹುದು ಎಂಬ ಆತಂಕಕ್ಕೆ ರಷ್ಯಾ ಬ್ರೇಕ್ ಹಾಕಿದೆ. ಅದೆಷ್ಟು ಹೇಳಿದರೂ ಮಾತು ಕೇಳದ ಎರಡೂ ದೇಶಗಳಿಗೆ ರಷ್ಯಾ ಅಧ್ಯಕ್ಷ ಪುಟಿನ್ ಕಠಿಣ ಸಂದೇಶ ರವಾನಿಸಿದ್ದರು. ಪುಟಿನ್ ಆದೇಶಕ್ಕೆ ಬೆಚ್ಚಿಬಿದ್ದು ಯುದ್ಧ ನಿಲ್ಲಿಸುವ ನಿರ್ಧಾರಕ್ಕೆ ಅರ್ಮೇನಿಯ ಹಾಗೂ ಅಜೆರ್ಬೈಜಾನ್ ಒಪ್ಪಿದ್ದವು.

ರಷ್ಯಾ ಮಾತಿಗೆ ಒಪ್ಪಿದ್ದೇ ಆಶ್ಚರ್ಯ..!

ರಷ್ಯಾ ಮಾತಿಗೆ ಒಪ್ಪಿದ್ದೇ ಆಶ್ಚರ್ಯ..!

ಅರ್ಮೇನಿಯ ಹಾಗೂ ಅಜೆರ್ಬೈಜಾನ್ ಮಧ್ಯೆ ಯುದ್ಧ ಆರಂಭವಾದ ದಿನದಿಂದಲೇ ವಿಶ್ವದ ಹಲವು ದೇಶಗಳ ನಾಯಕರು ಶಾಂತಿ ಮಾತುಕತೆಗೆ ಸಾಕಷ್ಟು ಪ್ರಯತ್ನಪಟ್ಟಿದ್ದಾರೆ. ಆದರೆ ಯಾವುದೇ ಪ್ರಯೋಜನ ಆಗಿರಲಿಲ್ಲ. ಈಗ ರಷ್ಯಾ ಜೊತೆ ನಡೆದ ಮಾತುಕತೆಗೆ ಬೆಲೆ ಕೊಟ್ಟು ಯುದ್ಧ ನಿಲ್ಲಿಸುತ್ತಿದ್ದೇವೆ ಎಂದು ಎರಡೂ ರಾಷ್ಟ್ರಗಳು ಹೇಳಿರಬಹುದು.

ಆದರೆ ತಿಂಗಳ ಹಿಂದೆಯೂ ಇದೇ ರೀತಿ ಶಾಂತಿ ಒಪ್ಪಂದ ನಡೆದಿತ್ತು. ಖದ್ದು ರಷ್ಯಾ ಅಧ್ಯಕ್ಷ ಪುಟಿನ್ ಆದೇಶದ ಹಿನ್ನೆಲೆಯಲ್ಲಿ ರಷ್ಯಾದಲ್ಲಿ ಉನ್ನತ ಮಟ್ಟದ ಸಭೆ ನಡೆದು ಯುದ್ಧ ನಿಲ್ಲಿಸಲು ಒಪ್ಪಿಸಿದ್ದರು. ಆದರೆ ಹೀಗೆ ಶಾಂತಿ ಮಾತುಕತೆ ನಡೆದು 1 ದಿನ ಕಳೆಯುವ ಒಳಗೆ ಎರಡೂ ರಾಷ್ಟ್ರಗಳು ಮತ್ತೆ ಕಿತ್ತಾಡಿದ್ದವು. ಭೀಕರವಾದ ದಾಳಿ, ಪ್ರತಿದಾಳಿಯೂ ನಡೆದಿತ್ತು. ಈಗ ಮತ್ತೆ ರಷ್ಯಾ ನೇತೃತ್ವದಲ್ಲೇ ಅರ್ಮೇನಿಯ ಹಾಗೂ ಅಜೆರ್ಬೈಜಾನ್ ನಾಯಕರು ಕದನ ವಿರಾಮಕ್ಕೆ ಒಪ್ಪಿದ್ದು, ದಿಢೀರ್ ಯುದ್ಧ ಸ್ಫೋಟಿಸುವ ಸಾಧ್ಯತೆ ಇದೆ.

English summary
The Armenian protesters demanding for prime minister Nikol Pashinyan resignation. Thousands of protesters rallied near Yerablur military memorial cemetery.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X