• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರ್ಮೇನಿಯಾದಿಂದ ಭಾರತದ ಪಿನಾಕ ರಾಕೆಟ್ ಇತ್ಯಾದಿ ಶಸ್ತ್ರಾಸ್ತ್ರಗಳ ಖರೀದಿ

|
Google Oneindia Kannada News

ನವದೆಹಲಿ, ಸೆ. 30: ಅಜರ್‌ಬೈಜಾನ್ ಜೊತೆ ಘರ್ಷಣೆಯ ಅಪಾಯದಲ್ಲಿರುವ ಆರ್ಮೇನಿಯಾ ದೇಶ ತನ್ನ ಭದ್ರತೆಗಾಗಿ ಭಾರತದಿಂದ ತುರ್ತಾಗಿ ಶಸ್ತ್ರಾಸ್ತ್ರ ಖರೀದಿಸುತ್ತಿದೆ. ಮಾಧ್ಯಮಗಳಲ್ಲಿ ಪ್ರಕಟವಾಗಿರುವ ವರದಿಗಳ ಪ್ರಕಾರ ಭಾರತದ ರಾಕೆಟ್ ಲಾಂಚರ್‌ರಗಳು, ಕ್ಷಿಪಣಿ ಇತ್ಯಾದಿ ಶಸ್ತ್ರಾಸ್ತ್ರಗಳನ್ನು ಖರೀದಿಸಲು ಆರ್ಮೇನಿಯಾ ಒಪ್ಪಂದ ಮಾಡಿಕೊಂಡಿದೆ.

2 ಸಾವಿರ ಕೋಟಿ ರೂ ಮೌಲ್ಯದಷ್ಟು ಶಸ್ತ್ರಾಸ್ತ್ರ ಖರೀದಿಸಲು ಬುಧವಾರ ಒಪ್ಪಂದಕ್ಕೆ ಸಹಿಹಾಕಲಾಗಿದೆ. ಸರಕಾರಗಳ ಮಟ್ಟದಲ್ಲಿ ಮೂರು ವಾರಗಳ ಹಿಂದೆಯೇ ಒಪ್ಪಂದವಾಗಿರುವುದು ಈಗ ಬೆಳಕಿಗೆ ಬಂದಿದೆ. ಇದೀಗ ಆದಷ್ಟೂ ಶೀಘ್ರದಲ್ಲಿ ಆರ್ಮೇನಿಯಾಗೆ ಶಸ್ತ್ರಾಸ್ತ್ರ ಪೂರೈಸಲು ಭಾರತ ಪ್ರಯತ್ನಿಸುತ್ತಿದೆ.

ಬೆಂಗಳೂರಿನಲ್ಲಿ ರಾಕೆಟ್ ತಯಾರಿಕೆ ಕೇಂದ್ರ ಉದ್ಘಾಟಿಸಲಿರುವ ರಾಷ್ಟ್ರಪತಿ ದ್ರೌಪದಿ ಮುರ್ಮುಬೆಂಗಳೂರಿನಲ್ಲಿ ರಾಕೆಟ್ ತಯಾರಿಕೆ ಕೇಂದ್ರ ಉದ್ಘಾಟಿಸಲಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು

ದೇಶೀಯವಾಗಿ ತಯಾರಿಸಲಾಗಿರುವ ಪಿನಾಕ ಮಲ್ಟಿ ಬ್ಯಾರಲ್ ರಾಕೆಟ್ ಲಾಂಚರ್‌ಗಳಾಗಿವೆ. ಪಿನಾಕ ಜೊತೆಗೆ ಆ್ಯಂಟಿ-ಟ್ಯಾಂಕ್ ರಾಕೆಟ್‌ಗಳು, ಬುಲೆಟ್, ಶೆಲ್ ಇತ್ಯಾದಿ ಮದ್ದುಗುಂಡುಗಳನ್ನು ಆರ್ಮೇನಿಯಾ ಖರೀದಿಸುತ್ತಿದೆ.

ಭಾರತದ ಶಸ್ತ್ರಾಸ್ತ್ರಗಳ ಮಾರಾಟ

ಪಿನಾಕಾ ರಾಕೆಟ್ ವ್ಯವಸ್ಥೆಯನ್ನು ಭಾರತ ದೇಶೀಯವಾಗಿ ನಿರ್ಮಿಸಿದೆ. ಇದು ಡಿಆರ್‌ಡಿಒದ ಉತ್ಪನ್ನ. ಚೀನಾ ಮತ್ತು ಪಾಕಿಸ್ತಾನದ ಗಡಿಭಾಗಗಳಲ್ಲಿ ಇವುಗಳನ್ನು ನಿಯೋಜಿಸಲಾಗಿದೆ. ಈ ರಾಕೆಟ್ ಲಾಂಚರ್‌ಗಳ ಖರೀದಿಗೆ ಹಲವು ದೇಶಗಳು ಆಸಕ್ತಿ ತೋರಿರುವುದು ಹೌದು.

ಆರ್ಮೇನಿಯಾ ಭಾರತದಿಂದ ಶಸ್ತ್ರಾಸ್ತ್ರ ಖರೀದಿಸುತ್ತಿರುವುದು ಇದೇ ಮೊದಲಲ್ಲ. 2020ರಲ್ಲಿ ಸ್ವಾತಿ ರಾಡಾರ್‌ಗಳನ್ನು ಖರೀದಿ ಮಾಡಿತ್ತು. ಅಜರ್‌ಬೈಜಾನ್ ಜೊತೆಗಿನ ಸಂಘರ್ಷದ ಹಿನ್ನೆಲೆಯಲ್ಲಿ ಆರ್ಮೇನಿಯಾಗೆ ಇನ್ನಷ್ಟು ಶಸ್ತ್ರಾಸ್ತ್ರಗಳ ಅಗತ್ಯ ಬೀಳಬಹುದು.

ಅಜರ್‌ಬೈಜಾನ್ ಜೊತೆಗಿನ ಸಂಘರ್ಷ

ಆರ್ಮೇನಿಯಾ ಮತ್ತು ಅಜರ್‌ಬೈಜಾನ್ ದೇಶಗಳ ಮಧ್ಯೆ ನಾಗೊರ್ನೊ ಕರಬಾಖ್ ಪ್ರದೇಶದ ವಿಚಾರವಾಗಿ ವಿವಾದ ಇದೆ. ಈ ಪ್ರದೇಶದಲ್ಲಿ ಆರ್ಮೇನಿಯನ್ನರ ಪ್ರಾಬಲ್ಯ ಇದೆಯಾದರೂ ಸದ್ಯ ಅಜರ್‌ಬೈಜಾನ್ ದೇಶದಲ್ಲಿ ಇದೆ. ಟರ್ಕಿ ದೇಶಕ್ಕೆ ಅನಿಲ ಪೈಪ್‌ಲೈನ್‌ಗೆ ದಾರಿ ಈ ಪ್ರದೇಶದ ಮೂಲಕವೇ ಹೋಗುತ್ತದೆ. ಹೀಗಾಗಿ, ನಾಗೊರ್ನೊ ಕರಬಾಖ್ ಪ್ರದೇಶವನ್ನು ತನ್ನ ಹತೋಟಿಯಲ್ಲೇ ಇಟ್ಟುಕೊಳ್ಳಲು ಅಜರ್‌ಬೈಜಾನ್ ಪ್ರಯತ್ನಿಸುತ್ತಿದೆ.

Armenia Buying Pinaka Rocket and Ammunition From India to Face Azerbaijan

ಅಜರ್‌ಬೈಜಾನ್‌ಗೆ ಪಾಕಿಸ್ತಾನ ಮತ್ತು ಟರ್ಕಿ ದೇಶಗಳ ಬೆಂಬಲ ಇದೆ. ಟರ್ಕಿಯು ಡ್ರೋನ್‌ಗಳನ್ನು ಸರಬರಾಜು ಮಾಡಿದೆ. ಪಾಕಿಸ್ತಾನದಿಂದ ಜೆಎಫ್-17 ಯುದ್ಧವಿಮಾನಗಳು ಸರಬರಾಜಾಗುವ ಸಾಧ್ಯತೆ ಇದೆ.

ಟರ್ಕಿ, ಪಾಕಿಸ್ತಾನ ಮತ್ತು ಅಜರ್‌ಬೈಜಾನ್ ಮಧ್ಯೆ ಭದ್ರತಾ ಸಹಕಾರಕ್ಕೆ ತ್ರಿಪಕ್ಷೀಯ ಒಪ್ಪಂದ ಆಗಿದೆ. ಈ ಹಿನ್ನೆಲೆಯಲ್ಲಿ ಆರ್ಮೇನಿಯಾ ಭಾರತದ ಸಹಾಯ ಯಾಚಿಸುತ್ತಿದೆ.

ಇತ್ತೀಚಿನ ವರ್ಷಗಳಲ್ಲಿ ಭಾರತದ ರಕ್ಷಣಾ ಉತ್ಪನ್ನಗಳ ರಫ್ತು ಪ್ರಮಾಣ ಹೆಚ್ಚಾಗಿದೆ. 2021-22ರ ವರ್ಷದಲ್ಲಿ ರಕ್ಷಣಾ ಉತ್ಪನ್ನಗಳ ರಫ್ತು ಮೊತ್ತ 13 ಸಾವಿರ ಕೋಟಿ ರೂ ಮುಟ್ಟಿದೆ. ಐದು ವರ್ಷಗಳ ಹಿಂದೆ ಇದು ಒಂದು ಸಾವಿರ ಕೋಟಿ ರೂಗಿಂತ ತುಸು ಹೆಚ್ಚಿತ್ತು.

ಪಿನಾಕಾ ರಾಕೆಟ್ ಲಾಂಚರ್ ಜೊತೆಗೆ ಬ್ರಹ್ಮೋಸ್ ಕ್ಷಿಪಣಿಗೆ ವಿಶ್ವಾದ್ಯಂತ ಬೇಡಿಕೆ ಇದೆ. ವೆಪನ್ ಸಿಮುಲೇಟರ್, ಟಿಯರ್ ಗ್ಯಾಸ್ ಲಾಂಚರ್, ಟಾರ್ಪೆಡೋ, ನೈಟ್ ವಿಶನ್ ಮಾನೋಕುಲಾರ್ ಬೈನಾಕುಲರ್, ಶಸ್ತ್ರ ಪತ್ತೆ ಮಾಡುವ ರಾಡಾರ್, ಹೈ ಫ್ರೀಕ್ವೆನ್ಸಿ ರೇಡಿಯೋ ಇತ್ಯಾದಿ ಅನೇಕ ಶಸ್ತ್ರಾಸ್ತ್ರ ಉಪಕರಣಗಳನ್ನು ಭಾರತ ಮಾರಾಟ ಮಾಡುತ್ತದೆ.

(ಒನ್ಇಂಡಿಯಾ ಸುದ್ದಿ)

English summary
Eastern European country Armenia has signed agreement with India to buy Pinaka rockets and other weapons and ammunitions for Rs. 2000 crore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X