ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಸ ತಿನ್ನುವ ರೋಬೋಟ್ ಬೆಂಗಳೂರಿಗೆ ಬಂದರೆ ಹೇಗೆ?

|
Google Oneindia Kannada News

ಬ್ಯೂನಸ್ ಐರಿಸ್, ಮಾರ್ಚ್, 04: ಬಳಸಿ ಎಸೆದ ಬಿಡಿ ಭಾಗ, ಕಸ ತಿಂದು ತೇಗುವ ರೋಬೋಟ್ ಬಂದರೆ ಹೇಗಿರುತ್ತದೆ? ಬಂದರೆ ಏನು.. ಈಗಾಗಲೇ ಬಂದಿದೆ. ಕಸ ತಿಂದು ಬದುಕುವ ರೋಬೋಟ್ ಅನ್ನು ಅರ್ಜೆಂಟೀನಾದ ಇಂಜಿನಿಯರ್ ಒಬ್ಬರು ತಯಾರು ಮಾಡಿದ್ದಾರೆ.

ಈ ರೊಬೋಟ್ ಗೆ ಇಟ್ಟಿರುವ ಹೆಸರು ನ್ಯಾನೋ, ಹಸಿವಾದಾಗ ಬಾಯಿ ತೆರೆಯುತ್ತದೆ. ನಿಮ್ಮ ಮನೆಯಲ್ಲಿ ಬೇಡದೆ ಬಿಸಾಕಿರುವ ಅಳಿದುಳಿದ ಇಲೆಕ್ಟ್ರಾನಿಕ್ ವಸ್ತುಗಳು, ವಾಯರ್ ತುಂಡು, ಹಾಳಾದ ಜಾರ್ಜರ್, ಕಿತ್ತು ಹೋಗಿರುವ ಸ್ವಿಚ್ ಬೋರ್ಡ್ ನ್ನು ಇದರ ಬಾಯಿಗೆ ತುರುಕಿದರೆ ಹೊಟ್ಟೆ ತುಂಬಾ ತಿಂದು ಗಡದ್ದಾಗಿ ನಿದ್ದೆ ಮಾಡುತ್ತದೆ. ಹಾಂ..ಇದನ್ನು ತಯಾರು ಮಾಡಿರುವುದು ಇಂಥದ್ದೇ ಬಳಸಿ ಎಸೆದ ವಸ್ತುಗಳಿಂದ.[ಲೈಂಗಿಕ ತೃಪ್ತಿಗೆ ರೋಬೋಟ್ ನೆಚ್ಚಿಕೊಳ್ಳುವ ಕಾಲ ದೂರವಿಲ್ಲ!]

robot

ರೋಬೋಟ್ ಕಂಡುಹಿಡಿದಿರುವ ಇಂಜಿನಿಯರ್ ಪ್ಯಾಬ್ಲೋ ರೋಮಾಸ್ ತಮ್ಮ ಹೊಸ ಮಗುವಿಗೆ 'ನ್ಯಾನೋ' ಎಂದು ನಾಮಕರಣ ಮಾಡಿದ್ದಾರೆ. ಅಳವಡಿಕೆ ಮಾಡಿರುವ ಸೆನ್ಸಾರ್ ರೋಬೋಟ್ ನ್ನು ನಿಯಂತ್ರಣ ಮಾಡುತ್ತದೆ. ಮಕ್ಕಳೊಂದಿಗೆ ಆಟವಾಡಲು ಈ ರೋಬೋಟ್ ಸಾಥ್ ನೀಡುತ್ತದೆ.

ಸಂಪನ್ಮೂಲಗಳ ಮರು ಉಪಯೋಗ ಮಾಡಲು ಇಂಥ ರೋಬೋಟ್ ವೊಂದನ್ನು ಕಂಡುಹಿಡಿದಿದ್ದೇನೆ, ಎಲೆಕ್ಟ್ರಾನಿಕ್ ವಸ್ತುಗಳ ಬಿಡಿ ಭಾಗವನ್ನು ಎಲ್ಲಿ ಎಸೆಯಬೇಕು ಎಂದು ಯೋಚಿಸುವ ಅಗತ್ಯ ಮುಂದೆ ಬರುವುದಿಲ್ಲ. ಈ ರೋಬೋಟ್ ನ ಬಾಯೊಳಗೆ ಎಲ್ಲವನ್ನು ತುಂಬಬಹುದು. ಯಂತ್ರ ಬಳಸಿಕೊಂಡು ಶಾಲೆಗಳಲ್ಲಿ ಸಂಪನ್ಮೂಲ ಪುನರ್ಬಳಕೆ ಜಾಗೃತಿ ಕಾರ್ಯಾಗಾರ ನಡೆಸಲಿದ್ದೇವೆ ಎಂದು ಪ್ಯಾಬ್ಲೋ ರೋಮಾಸ್ ತಿಳಿಸಿದ್ದಾರೆ.[ಭಾರತಕ್ಕೆ ಕಾಲಿರಿಸಿದ ಡ್ಯಾನೀಶ್ ಯೂರ್ನಿವಸಲ್ ರೋಬೋಟ್ಸ್]

ಲಾಸ್ಟ್ ಪಂಚ್: ಅಯ್ಯಪ್ಪಾ... ಈ ಬೆಂಗಳೂರ ಕಸ ಸಮಸ್ಯೆ ಸಾಕಾಗಿ ಹೋಗಿದೆ.. ಸರ್ಕಾರಕ್ಕೆ , ಜನರಿಗೆ , ಆಡಳಿತಕ್ಕೆ ಎಲ್ಲರಿಗೂ ತಲೆನೋವು ವಾಸನೆ ತಂದಿಟ್ಟಿದೆ. ಇಂಥದ್ದೆ ಒಂದು ಕಸ ತಿನ್ನುವ ರೋಬಾಟ್ ಬೆಂಗಳೂರಿಗೆ ಬಂದರೆ ಎಂಥ ಚೆನ್ನ ಅಲ್ಲವೇ?

English summary
An Argentine engineer has used recycled items to create a robot that can find and eat trash, the media reported on Friday. The robot, Nano, has been built with discarded parts of electronic devices, Xinhua news agency reported. One of two prototypes, Nano "will open its mouth only when it detects that the item thrown out belongs to the category that it has to eat", creator Pablo Romanos said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X