ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶತ್ರುವಿನ ಶತ್ರು ಮಿತ್ರ: ಅಮೆರಿಕಾ ಕಂಪನಿಗಳಿಂದ ಬದಲಾಗುತ್ತಾ ಭಾರತ?

|
Google Oneindia Kannada News

ನವದೆಹಲಿ, ಮೇ.11: ಇಬ್ಬರ ಜಗಳ ಮೂರನೆಯವರಿಗೆ ಲಾಭ. ವಿಶ್ವದ ಬಲಿಷ್ಠ ರಾಷ್ಟ್ರ ಎನಿಸಿರುವ ಅಮೆರಿಕಾ ಮತ್ತು ಚೀನಾ ನಡುವಿನ ಸಂಬಂಧ ಹಳಸಿದೆ. ವಿಶ್ವಕ್ಕೆ ನೊವೆಲ್ ಕೊರೊನಾ ವೈರಸ್ ಎಂಬ ಹೆಮ್ಮಾರಿಯನ್ನು ಕೊಡುಗೆಯಾಗಿ ನೀಡಿದ್ದೇ ಡ್ರ್ಯಾಗನ್ ರಾಷ್ಟ್ರ ಎಂದು ವಿಶ್ವದ ದೊಡ್ಡಣ್ಣ ದೂಷಿಸುತ್ತಿದ್ದಾನೆ.

Recommended Video

ಕೊರೊನಾ ಅಂತ್ಯಕ್ಕೆ ಶ್ರೀಮನ್ನಾರಾಯಣನೇ ಬರ್ತಾನೆ | Corona | Oneindia kannada

ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ವಿರುದ್ಧ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುಟುರು ಹಾಕುತ್ತಿದ್ದಾರೆ. ಚೀನಾದಲ್ಲಿ ಇರುವ ಅಮೆರಿಕಾ ಮೂಲದ 1,000 ಕಂಪನಿಗಳನ್ನು ಬೇರೊಂದು ದೇಶಕ್ಕೆ ಸ್ಥಳಾಂತರಿಸಲು ತೀರ್ಮಾನಿಸಿದ್ದಾರೆ. ಅಮೆರಿಕಾ ಕಣ್ಣಿಗೆ ಭಾರತವೇ ಇದೀಗ ಸ್ವರ್ಗದಂತೆ ಕಾಣುತ್ತಿದೆ.

ಶತ್ರುವಿನ ಶತ್ರು ಮಿತ್ರ: ಭಾರತದ ಜೊತೆ ಕೈ ಜೋಡಿಸಲು ಅಮೆರಿಕಾ ಮಂತ್ರ!ಶತ್ರುವಿನ ಶತ್ರು ಮಿತ್ರ: ಭಾರತದ ಜೊತೆ ಕೈ ಜೋಡಿಸಲು ಅಮೆರಿಕಾ ಮಂತ್ರ!

ಚೀನಾದಿಂದ 2,982 ಕಿಲೋ ಮೀಟರ್ ದೂರದಲ್ಲಿ ಇರುವ ಭಾರತಕ್ಕೆ ಅಮೆರಿಕಾದ ಉತ್ಪಾದನಾ ಕಾರ್ಖಾನೆಗಳು ಮತ್ತು ಕಂಪನಿಗಳನ್ನು ಶಿಫ್ಟ್ ಮಾಡಲು ಚಿಂತಿಸಲಾಗುತ್ತಿದೆ. ಅಮೆರಿಕಾ ಮೂಲದ ಕಂಪನಿಗಳನ್ನು ಸೆಳೆಯಲು ಭಾರತ ಕೂಡಾ ಅಣಿಯಾಗಿದೆ. ಹಾಗಿದ್ದಲ್ಲಿ ಅಮೆರಿಕಾ ಕಂಪನಿಗಳಿಂದ ಭಾರತಕ್ಕೇನು ಲಾಭ ಎನ್ನುವುದರ ಕುರಿತು ಒಂದು ವರದಿ ಇಲ್ಲಿದೆ ನೋಡಿ.

ಭಾರತದ ಚಿತ್ರಣವನ್ನೂ ಬದಲಿಸಲಿರುವ ಲಾಕ್ ಡೌನ್

ಭಾರತದ ಚಿತ್ರಣವನ್ನೂ ಬದಲಿಸಲಿರುವ ಲಾಕ್ ಡೌನ್

ನೊವೆಲ್ ಕೊರೊನಾ ವೈರಸ್ ನಿಯಂತ್ರಣಕ್ಕೆ ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಲಾಕ್ ಡೌನ್ ತಂತ್ರವನ್ನು ಅನುಸರಿಸುತ್ತಿವೆ. ಇದೇ ನಿಟ್ಟಿನಲ್ಲಿ ಭಾರತದಲ್ಲೂ ಕೂಡಾ ಲಾಕ್ ಡೌನ್ ಘೋಷಿಸಲಾಗಿದೆ. 135 ಕೋಟಿಗೂ ಅಧಿಕ ಜನಸಂಖ್ಯೆಯನ್ನು ಹೊಂದಿರುವ ಭಾರತ ವಿಶ್ವದಲ್ಲೇ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ಎರಡನೇ ದೇಶವಾಗಿದೆ. ಲಾಕ್ ಡೌನ್ ನಿಂದ ಸ್ತಬ್ಧವಾಗಿರುವ ದೇಶದಲ್ಲಿ ಲಾಕ್ ಡೌನ್ ಸಡಿಲಿಕೆ ನಂತರ ಸಾಕಷ್ಟು ಸಮಸ್ಯೆಗಳನ್ನು ಎದುರಿಸುವಂತಾ ಸ್ಥಿತಿ ಎದುರಾಗುತ್ತದೆ.

ನಿರುದ್ಯೋಗ ಸಮಸ್ಯೆ ಎದುರಿಸಬೇಕಿದೆ ಭಾರತ

ನಿರುದ್ಯೋಗ ಸಮಸ್ಯೆ ಎದುರಿಸಬೇಕಿದೆ ಭಾರತ

ಭಾರತ ಲಾಕ್ ಡೌನ್ ನಂತರ ಕನಿಷ್ಠ 122 ಮಿಲಿಯನ್ ಜನರು ನಿರುದ್ಯೋಗಿಗಳಾಗುತ್ತಾರೆ. ಉತ್ಪಾದನಾ ಪ್ರಮಾಣದಲ್ಲಿ ಭಾರಿ ಇಳಿಕೆ ಕಂಡು ಬರಲಿದೆ. ದೇಶದ ಆರ್ಥಿಕತೆಗೆ ಶಕ್ತಿ ತುಂಬುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಬೇಕಾದ ಅನಿವಾರ್ಯತೆ ಎದುರಾಗುತ್ತದೆ. ವಿದೇಶಿ ಕಂಪನಿಗಳನ್ನು ಸೆಳೆಯುವ ಮೂಲಕ ದೇಶದಲ್ಲಿ ನಿರುದ್ಯೋಗ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು. ದೇಶದ ಪ್ರಮುಖ ನಗರದಲ್ಲಿ ಉದ್ಯೋಗ ಕಳೆದುಕೊಂಡ ಭಾರತೀಯರಿಗೆ ಉದ್ಯೋಗ ಸೃಷ್ಟಿಸುವುದು. 2020ರ ವೇಳೆ ದೇಶದ ಒಟ್ಟು ಉತ್ಪಾದನಾ ಪ್ರಮಾಣವನ್ನು ಶೇ.15ರಿಂದ ಶೇ.25ಕ್ಕೆ ಏರಿಕೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಪ್ಲಾನ್ ಮಾಡಿಕೊಂಡಿದೆ.

ಶತ್ರುವಿನ ಶತ್ರು ಮಿತ್ರ: ಅಮೆರಿಕಾದ ವಿಶ್ವಾಸ ಕಳೆದುಕೊಂಡಿತಾ ಚೀನಾ?ಶತ್ರುವಿನ ಶತ್ರು ಮಿತ್ರ: ಅಮೆರಿಕಾದ ವಿಶ್ವಾಸ ಕಳೆದುಕೊಂಡಿತಾ ಚೀನಾ?

ವಿಶ್ವದ ಸಂಪರ್ಕ ಕೊಂಡಿಯಾಗುವ ಸಾಮರ್ಥ್ಯ ಭಾರತಕ್ಕಿದೆ

ವಿಶ್ವದ ಸಂಪರ್ಕ ಕೊಂಡಿಯಾಗುವ ಸಾಮರ್ಥ್ಯ ಭಾರತಕ್ಕಿದೆ

ಜಾಗತಿಕ ಮಟ್ಟದಲ್ಲಿ ರಾಷ್ಟ್ರಗಳ ನಡುವೆ ಸಂಪರ್ಕ ಕೊಂಡಿಯಾಗಿ ಬೆಳೆಯುವ ಸಾಮರ್ಥ್ಯ ಭಾರತ ದೇಶಕ್ಕಿದೆ ಎಂದು ಚಿಕಾಗೋ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಪೌಲ್ ಸ್ಟ್ಯಾನಿಲ್ಯಾಂಡ್ ಅಭಿಪ್ರಾಯಪಟ್ಟಿದ್ದಾರೆ. ಭಾರತದ ರಾಜಕೀಯ ವ್ಯವಸ್ಥೆ ಮತ್ತು ವಿದೇಶಾಂಗ ನೀತಿಯ ಬಗ್ಗೆ ಬರೆದಿರುವ ಪ್ರಾಧ್ಯಾಪಕರು, ಭಾರತವು ಏಷ್ಯಾದ ದಿಕ್ಷಣ ಮತ್ತು ಆಗ್ನೇಯ ಭಾಗದ ದೇಶಗಳ ಜೊತೆಗೆ ಸ್ಪರ್ಧಿಸಬೇಕಿದೆ ಎಂದು ತಿಳಿಸಿದ್ದಾರೆ.

ಕಾರ್ಮಿಕ ಮತ್ತು ದೇಶದ ತೆರಿಗೆ ನೀತಿ ಬಗ್ಗೆ ಮಾಹಿತಿ

ಕಾರ್ಮಿಕ ಮತ್ತು ದೇಶದ ತೆರಿಗೆ ನೀತಿ ಬಗ್ಗೆ ಮಾಹಿತಿ

ಭಾರತದಲ್ಲಿನ ತೆರಿಗೆ ನೀತಿ ಹಾಗೂ ಕಾರ್ಮಿಕರ ನೀತಿಯ ಬಗ್ಗೆ ಅಮೆರಿಕಾದ ಕಂಪನಿಗಳು ಮಾಹಿತಿ ಕೋರಿವೆ. ಕಂಪನಿಗೆ ಅನುಕೂಲವಾಗುವ ರೀತಿಯಲ್ಲಿ ತೆರಿಗೆ ಹಾಗೂ ಕಾರ್ಮಿಕ ನೀತಿಯಲ್ಲಿ ತಿದ್ದುಪಡಿ ತರುವ ಬಗ್ಗೆ ಮನವಿ ಮಾಡಿಕೊಂಡಿವೆ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರಗಳ ಜೊತೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಚರ್ಚೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.

ಚೀನಾ ನಂತರದ ಸ್ಥಾನದಲ್ಲಿ ಭಾರತಕ್ಕೆ ಅವಕಾಶ

ಚೀನಾ ನಂತರದ ಸ್ಥಾನದಲ್ಲಿ ಭಾರತಕ್ಕೆ ಅವಕಾಶ

ಅಮೆರಿಕಾದ ಕಂಪನಿಗಳಿಗೆ ಚೀನಾದಿಂದ ಸ್ಥಳಾಂತರವಾಗುವುದೇ ಆದಲ್ಲಿ ಭಾರತವೇ ಸೂಕ್ತ ಸ್ಥಳವಾಗಿದೆ. ವಿಯೆಟ್ನಾಂ ಹಾಗೂ ಕಾಂಬೋಡಿಯಾ ರಾಷ್ಟ್ರಗಳಿಗೆ ಹೋಲಿಸಿ ನೋಡಿದರೆ ಭಾರತದಲ್ಲಿ ದೊಡ್ಡ ಮಾರುಕಟ್ಟೆಯಿದೆ ಎಂದು ಫೆಡರಲ್ ಆಫ್ ಇಂಡಿಯನ್ ಎಕ್ಸ್ ಪರ್ಟರ್ಸ್ ಡೈರೆಕ್ಟರ್ ಜನರಲ್ ಅಜಯ್ ಸಹಾಯ್ ತಿಳಿಸಿದ್ದಾರೆ. ಆದರೆ ಭಾರತದಲ್ಲಿ ಕಂಪನಿಗಳಿಗೆ ಅಗತ್ಯವಾಗಿರುವ ಭೂಮಿ, ನೀರು, ವಿದ್ಯುತ್ ಹಾಗೂ ಒಳಚರಂಡಿ ವ್ಯವಸ್ಥೆ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಸರ್ಕಾರವು ಭರವಸೆಯನ್ನು ನೀಡಬೇಕಿದೆ. ಇದೆಲ್ಲಕ್ಕಿಂತ ಮುಖ್ಯವಾಗಿ ಹಿಂದಿನ ತೆರಿಗೆ ನೀತಿಯಲ್ಲಿ ಬದಲಾವಣೆ ಮಾಡಬೇಕಿದೆ ಎಂದು ಹೇಳಿದ್ದಾರೆ.

ಉತ್ತರ ಮತ್ತು ದಕ್ಷಿಣದಲ್ಲಿ ರಿಯಾಯಿತಿ ನಿರೀಕ್ಷೆ

ಉತ್ತರ ಮತ್ತು ದಕ್ಷಿಣದಲ್ಲಿ ರಿಯಾಯಿತಿ ನಿರೀಕ್ಷೆ

ಮಹಾರಾಷ್ಟ್ರದ ವಾಣಿಜ್ಯ ನಗರಿ ಮುಂಬೈನಲ್ಲಿ ಅಮೆರಿಕನ್ ಕಂಪನಿಗಳಿಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳ ಜೊತೆಗೆ ಕೆಲವು ರಿಯಾಯತಿ ನೀಡುವ ಬಗ್ಗೆ ಸರ್ಕಾರವು ಸಿದ್ಧವಾಗಿದೆ. ಆದರೆ ಉತ್ತರ ಭಾಗದಲ್ಲಿ ಉತ್ತರ ಪ್ರದೇಶ ಮತ್ತು ದಕ್ಷಿಣ ಭಾಗದಲ್ಲಿ ತಮಿಳುನಾಡು ಸರ್ಕಾರಗಳಿಂದ ಕಂಪನಿಗಳ ಸ್ಥಳಾಂತರಿಸಲು ಕೆಲವು ರಿಯಾಯತಿ ನೀಡಬೇಕು ಎಂದು ನಿರೀಕ್ಷಿಸಲಾಗುತ್ತಿದೆ.

English summary
Are American companies looking to alleviate the unemployment problem in India?.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X