ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಚ್ 1ಬಿ ವೀಸಾ ಕೇಳಿದರೆ, 15 ವರ್ಷಗಳ ಹಿಂದಿನ ಜೀವನ ಜಾಲಾಡ್ತಾರೆ!

|
Google Oneindia Kannada News

ವಾಷಿಂಗ್ಟನ್, ಮೇ 5: ಉದ್ಯೋಗದ ನಿಮಿತ್ತ ಅಮೆರಿಕಕ್ಕೆ ತೆರಳುತ್ತಿದ್ದ ವಿದೇಶಿಗರ ಮೇಲೆ ಅಲ್ಲಿನ ಡೊನಾಲ್ಡ್ ಟ್ರಂಪ್ ಸರ್ಕಾರ ಬಿಗಿ ನಿಲುವು ತಳೆದ ನಂತರ, ಅಮೆರಿಕದ ವೀಸಾ (ಎಚ್ 1 ಬಿ) ಈಗ ದೇವರ ಪ್ರಸಾದ ಎನ್ನುವಂತಾಗಿದೆ.

ಅದರ ಜತೆಗೆ, ಈಗ ವೀಸಾಕ್ಕಾಗಿ ಅರ್ಜಿ ಸಲ್ಲಿಸುವ ಉದ್ಯೋಗಿಗಳಿಗೆ, ಅಮೆರಿಕದ ತನಿಖಾಧಿಕಾರಿಗಳು ವಿಚಾರಣೆಗೊಳಪಡಿಸುವ ಹೊಸ ಪದ್ಧತಿಯೊಂದು ಶೀಘ್ರದಲ್ಲೇ ಆರಂಭವಾಗಲಿದ್ದು ಅರ್ಜಿದಾರರ ಕಳೆದ 15 ವರ್ಷಗಳ ಜೀವನವನ್ನು ಜಾಲಾಡಲಿದ್ದಾರೆಂದು ಮೂಲಗಳು ತಿಳಿಸಿವೆ.[2018ನೇ ವರ್ಷದ ಎಚ್- 1ಬಿ ವೀಸಾಕ್ಕಾಗಿ ಏ. 3ರಿಂದ ಅರ್ಜಿ ಆಹ್ವಾನ]

Applying for H-1B visa? US will demand your Facebook, Twitter, e-mail ids

ಶೀಘ್ರವೇ ಈ ನಿಟ್ಟಿನಲ್ಲಿ ಹೊಸ ನಿಯಮಗಳು ಜಾರಿಗೆ ಬರಲಿವೆ. ಅಷ್ಟೇ ಅಲ್ಲ, ಅರ್ಜಿದಾರರ ಟ್ವಿಟರ್, ಫೇಸ್ ಬುಕ್ ಸೇರಿದಂತೆ ಅನೇಕ ಅರ್ಜಿದಾರರು ಚಟುವಟಿಕೆಯಿಂದ ತೊಡಗಿಕೊಳ್ಳುವ ಯಾವುದೇ ಸಾಮಾಜಿಕ ಜಾಲತಾಣಗಳ ವಿವರಗಳನ್ನು ಪಡೆದುಕೊಳ್ಳಲು ಅಮೆರಿಕದ ಗೃಹ ಸಚಿವಾಲಯ ನಿರ್ಧರಿಸಿದೆ.[ಎಚ್1ಬಿ ವೀಸಾ : ಭಾರತದ ಐಟಿ ಇಂಡಸ್ಟ್ರಿಗೆ ಕೆಟ್ಟ ಸುದ್ದಿ]

ಇದಲ್ಲದೆ, ವೈಯಕ್ತಿಕ ಇ-ಮೇಲ್ ಐಡಿಗಳನ್ನೂ ಪಡೆದು ಅವನ್ನೂ ಪರಿಶೀಲನೆಗೊಳಪಡಿಸಲಾಗುತ್ತದೆ. ಈ ಹೊಸ ಕ್ರಮಗಳ ಔಚಿತ್ಯದ ಬಗ್ಗೆ ಪ್ರತಿಕ್ರಿಯಿಸಿರುವ ಅಮೆರಿಕದ ಗೃಹ ಸಚಿವಾಲಯ, ಅಮೆರಿಕದ ಭದ್ರತೆಗಾಗಿ ಇದೆಲ್ಲವೂ ಅನಿವಾರ್ಯ ಎಂದು ಹೇಳಿದೆ.

English summary
America Government has tightened the rules regarding H1B Visa once again and this time the officials will enquire applicant's last 15 years of life and look into his twitter, facebook, other social media activities and e-mail ids, says sources.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X