• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಐಫೋನ್ 6 ಹಿಡಿಸಿರುವ ಹುಚ್ಚು ಅಂತಿಂಥದಲ್ಲ!

By Prasad
|

ಬೆಂಗಳೂರು, ಸೆ. 20 : ಇಡೀ ಜಗತ್ತೇ ನಿರೀಕ್ಷಿಸುತ್ತಿದ್ದ ಆಪಲ್ ಕಂಪನಿಯ ಐಫೋನ್ 6 ಬಿಡುಗಡೆಯಾಗಿ ಭರ್ಜರಿಯಾಗಿ ಬಿಕರಿಯಾಗುತ್ತಿದೆ. ಭಾರತದಲ್ಲಿ ನರ್ಸರಿ ಮಕ್ಕಳ ಶಾಲೆ ಅಡ್ಮಿಷನ್‌ಗಾಗಿ ಪಾಲಕರು ಕ್ಯೂ ನಿಲ್ಲುವಂತೆ, ಕ್ರಿಕೆಟ್ ಟಿಕೆಟ್ ಗಾಗಿ ಕ್ರೀಡಾಪ್ರೇಮಿಗಳು ಸರತಿ ಸಾಲಿನಲ್ಲಿ ನಿಲ್ಲುವಂತೆ, ಸೀಮೆಎಣ್ಣೆಗಾಗಿ ಬಿಪಿಎಲ್ ಕಾರ್ಡುದಾರರು ನಿಲ್ಲುವಂತೆ ದೇಶವಿದೇಶಗಳಲ್ಲೆಲ್ಲ ಜನರು ಮುಗಿಬಿದ್ದು ಕೊಳ್ಳುತ್ತಿದ್ದಾರೆ.

ಹಾಗಂತ ಕಡ್ಲೆಪುರಿ ರೇಟಿಗೇನು ಐಫೋನ್ 6 ಸಿಗುತ್ತಿಲ್ಲ. ಕೊಂಡರೆ ನಿಮ್ಮಂಥ ಶ್ರೀಮಂತರು ಮತ್ತೊಬ್ಬರಿಲ್ಲ. ಬಡವರ ಪಾಲಿಗಂತೂ ಐಫೋನ್ 6 ಕನಸಿನ ಮಾತು. ಅದರಲ್ಲಿ ಅಂಥದೇನು ವಿಶೇಷವಿದೆಯೋ ಗ್ಯಾಡ್ಜೆಟ್ ಪರಿಣಿತರೇ ಬಲ್ಲರು. ಏನೇ ಇರಲಿ, ಇಡೀ ವಿಶ್ವದಾದ್ಯಂತ ಆಪಲ್ ಕಂಪನಿಯ ಈ ಲೇಟೆಸ್ಟ್ ಪ್ರಾಡಕ್ಟ್ ಭಾರೀ ಹವಾ ಹುಟ್ಟುಹಾಕಿದೆ. ಐಫೋನ್ 6ನ್ನು ಕೈಯಲ್ಲಿ ಹಿಡಿದುಕೊಂಡು ಅಡ್ಡಾಡುವುದು ಭಾರೀ ಪ್ರತಿಷ್ಠೆಯ ಪ್ರಶ್ನೆಯಾಗಲಿದೆ.

ಐಫೋನ್ ಕುರಿತಂತೆ ಕೆಲ ಆಸಕ್ತಿಕರ ಸಂಗತಿಗಳು

* ಮೊಟ್ಟಮೊದಲ ಐಫೋನ್ 6ನ್ನು ಕೊಂಡ ಆಸ್ಟ್ರೇಲಿಯಾದ ಸುರಸುಂದರಾಂಗ ಯುವಕನೊಬ್ಬ ಡಬ್ಬಿಯನ್ನು ತೆರೆದು ಫೋನಿನ ಅಂದವನ್ನು ನೋಡುವ ಉದ್ವೇಗದಲ್ಲಿ ಅದನ್ನು ಕೆಳಗೆ ಬೀಳಿಸಿದ್ದಾನೆ. ಪಾಪ, ಐಪೋನಿಗೆ ಏನೂ ಆಗಲಿಲ್ಲ.

* ಮೇಲಿನ ಸುದ್ದಿ ಒಂದು ರೀತಿಯದಾದರೆ, ಮಾರುಕಟ್ಟೆಗೆ ಬರುವ ಹೊಸ ಉತ್ಪನ್ನ ಗಟ್ಟಿಯಾಗಿದೆಯೆ ಎಂದು ಅದನ್ನು ನೆಲಕ್ಕೆ ಬೀಳಿಸಿ ಪರೀಕ್ಷಿಸುವ ಭೂಪನೊಬ್ಬ ಇದ್ದಾನೆ. ಆತ ನಡೆಸಿರುವ ಪರೀಕ್ಷೆಯ ಪ್ರಕಾರ, ಐಫೋನ್ 6 ಸ್ಕ್ರೀನ್ ಮುಖ ಕೆಳಗಾಗಿ ನೆಲಕ್ಕೆ ಬಿದ್ದರೆ, ಒಂದೇ ಏಟಿಗೆ ಗೋವಿಂದ ಗೋವಿಂದ!

* ಪೋಲಂಡ್ ದೇಶದ ವಿಚ್ಛೇದಿತ ಮನುಷ್ಯನೊಬ್ಬ ಐಫೋನ್ 6 ಕೊಂಡರೆ ತನ್ನ ಹೆಂಡತಿ ಮತ್ತು ಮಗಳು ತನ್ನ ಬಳಿ ಮತ್ತೆ ಖಂಡಿತ ಮರಳಿ ಬರುತ್ತಾರೆ ಎಂದು ನಂಬಿದ್ದು, ಸತತವಾಗಿ ಎರಡು ದಿನಗಳ ಕಾಲ ಕ್ಯೂನಲ್ಲಿ ನಿಂತು ಐಪೋನ್ 6 ಕೊಂಡಿದ್ದಾನೆ. ದೇವರು ಆತನ ಇಚ್ಛೆಯನ್ನು ಪೂರೈಸಲಿ.

* ದುಡ್ಡಿಲ್ಲದಿದ್ದರೇನಂತೆ ಐಪೋನ್ 6 ಕೊಳ್ಳುವ ಹುಚ್ಚು ಯುವಕನನ್ನು ಎಂಥ ಕೆಲಸಕ್ಕೆ ದೂಡಿದೆ ಗೊತ್ತಾ? ಆತ ತನ್ನ ಸ್ನೇಹಿತೆಯನ್ನು ಪ್ರತಿ ಗಂಟೆಗೆ 2 ಡಾಲರ್ ಲೆಕ್ಕದಂತೆ ಬಾಡಿಗೆ ನೀಡಿದ್ದಾನಂತೆ!

* ನೀವೂ ಕೊಳ್ಳಬೇಕೆಂದು ಲೆಕ್ಕ ಹಾಕುತ್ತಿದ್ದೀರಾ? ಮೊದಲು ಅದರ ಬೆಲೆ ಎಷ್ಟೆಂದು ತಿಳಿದುಕೊಳ್ಳಿ. ಭಾರತದಲ್ಲಿ ಅತ್ಯಂತ ಕಡಿಮೆಯೆಂದರೆ, ಕೇವಲ 68,500 ರು.ಗೆ ಐಫೋನ್ 6 ದೊರೆಯಲಿದೆ. ಕೊಳ್ಳುವುದೋ ಬಿಡುವುದೋ ನೀವೇ ನಿರ್ಧರಿಸಿ. ಸದ್ಯಕ್ಕೆ ಭಾರತಕ್ಕೆ ಐಫೋನ್ 6 ಇನ್ನೂ ಕಾಲಿಟ್ಟಿಲ್ಲ. [ಎಲ್ಲೆಲ್ಲಿ ಐಫೋನ್ 6 ಕೊಳ್ಳಬಹುದು]

* ಹೊಚ್ಚಹೊಸ ಐಫೋನ್ 6 ಕೈಯಿಂದ ಜಾರಿ ಬಿತ್ತೆನ್ನಿ. ವಾರಂಟಿ ಇರಲಿ ಬಿಡಲಿ ಅದರ ರಿಪೇರಿಗಾಗಿ ತೆರಬೇಕಾದ ಬೆಲೆ ತಿಳಿದರೆ ಅದರ ಸಹವಾಸಕ್ಕೇ ಹೋಗುವುದು ಬೇಡ ಎಂದು ನಿರ್ಧರಿಸುತ್ತೀರಿ. ಸ್ಕ್ರೀನ್ ಮತ್ತಿತರ ರಿಪೇರಿಗೆ ನೀವು ಕೈಹಾಕಿದರೆ ಕನಿಷ್ಠ 30 ಸಾವಿರ ರು. ಕೈಬಿಡುವದು ಖಚಿತ.

* ಹೀಗೊಂದು ಜೋಕೊಂದು ಟ್ವಿಟ್ಟರಲ್ಲಿ ಹರಿದಾಡುತ್ತಿದೆ. ಯುವತಿಯೊಬ್ಬಳು ಮಾಯಾದೀಪವನ್ನು ಉಜ್ಜಿ, ತನ್ನ ಗಂಡ ಎದ್ದಕೂಡಲೆ ದೇವರ ಫೋಟೋ ಬದಲಾಗಿ ತನ್ನನ್ನೇ ನೋಡಬೇಕೆಂದು, ಯಾವಾಗಲೂ ತನ್ನ ಬಗ್ಗೆಯೇ ದೇನಿಸುತ್ತಿರಬೇಕೆಂದು ಬೇಡಿಕೊಂಡಳಂತೆ. ಮಾಯಾದೀಪದಲ್ಲಿದ್ದ ಭೂತ ಆಕೆಯನ್ನು ಸ್ಮಾರ್ಟ್ ಫೋನಾಗಿ ಪರಿವರ್ತಿಸಿದನಂತೆ. [ವಿಶ್ವ ಕನ್ನಡ ಸಮ್ಮೇಳನಕ್ಕೊಂದು ಅಪ್ಲಿಕೇಷನ್]

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Apple Iphone 6 has created craze around the world. People are standing in queue like parents stand for school application to buy the gadget. Do you want to own this precious mobile? Then, read this article before buying it.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more