ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವ್ಹಾರೇ ವ್ಹಾ..! ಕೊರೊನಾ ವೈರಸ್ ಸೋಂಕಿತರ ಪತ್ತೆಗೆ ಮೊಬೈಲ್ ಆ್ಯಪ್!

|
Google Oneindia Kannada News

ನವದೆಹಲಿ, ಮೇ22: ಕೊರೊನಾ ವೈರಸ್ ಜಗತ್ತನ್ನು ಕಾಡುತ್ತಿರುವ ಮಾರಕ ರೋಗ ಯಾವಾಗ ಯಾರಿಗೆ ಹೇಗೆ ಅಂಟಿಕೊಳ್ಳುತ್ತೆ ಅನ್ನೋದೇ ಗೊತ್ತಾಗುತ್ತಿಲ್ಲ. ಡಿಸೆಂಬರ್ ಕೊನೆಯಲ್ಲಿ ಚೀನಾದ ವುಹಾನ್ ನಲ್ಲಿ ಮೊದಲಿಗೆ ಕಾಣಿಸಿಕೊಂಡ ಕೊವಿಡ್-19 ವಿಶ್ವದಾದ್ಯಂತ ಹರಡಿದ್ದು, 50 ಲಕ್ಷಕ್ಕಿಂತ ಅಧಿಕ ಮಂದಿಗೆ ಅಂಟಿಕೊಂಡಿದೆ.

Recommended Video

ವರ್ಕ್ ಫ್ರಂ ಹೋಂ‌ನಿಂದ ಆಗ್ತಿರೋ ಸಮಸ್ಯೆಗಳು ಅಷ್ಟಿಷ್ಟಲ್ಲ... | Oneindia Kannada

ಕೆಮ್ಮು, ಜ್ವರ, ಶೀತ, ಉಸಿರಾಟ ತೊಂದರೆ, ಸ್ನಾಯುಸೆಳೆತ, ಎದೆನೋವು, ಹೀಗೆ 9ಕ್ಕಿಂತ ಹೆಚ್ಚು ಲಕ್ಷಣಗಳಲ್ಲಿ ಒಂದಾದ್ರೂ ಲಕ್ಷಣ ಕೊರೊನಾ ವೈರಸ್ ಸೋಂಕಿತರಲ್ಲಿ ಕಾಣಿಸಿಕೊಳ್ಳುತ್ತವೆ. ಆದರೆ ಇತ್ತೀಚಿಗೆ ಭಾರತದಲ್ಲಿ ಶೇ.69ರಷ್ಟು ಸೋಂಕಿತರಲ್ಲಿ ಈ ರೀತಿಯ ಲಕ್ಷಣಗಳೇ ಕಾಣಿಸಿಕೊಂಡಿಲ್ಲ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.

ಕೊವಿಡ್-19 ಸಂದೇಶ: ಒಂದು ಕ್ಲಿಕ್ ಮಾಡಿದರೆ ಬ್ಯಾಂಕ್ ಅಕೌಂಟ್ ಹ್ಯಾಕ್!ಕೊವಿಡ್-19 ಸಂದೇಶ: ಒಂದು ಕ್ಲಿಕ್ ಮಾಡಿದರೆ ಬ್ಯಾಂಕ್ ಅಕೌಂಟ್ ಹ್ಯಾಕ್!

ಭಾರತದಲ್ಲಿ ಗುರುವಾರದ ಅಂಕಿ-ಅಂಶಗಳ ಪ್ರಕಾರ, 1,18,222 ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, 3,584 ಮಂದಿ ಕೊವಿಡ್-19ಗೆ ಬಲಿಯಾಗಿದ್ದಾರೆ. ಇದರ ನಡುವೆ ಕೊರೊನಾ ವೈರಸ್ ಸೋಂಕಿತರ ಪತ್ತೆಗೆ ಮೊಬೈಲ್ ಆ್ಯಪ್ ಒಂದು ಸಿದ್ಧಗೊಂಡಿದೆ.

 ಕೊವಿಡ್-19 ಸೋಂಕಿತರ ಪತ್ತೆಗೆ ಸ್ಪೆಷಲ್ ಆ್ಯಪ್

ಕೊವಿಡ್-19 ಸೋಂಕಿತರ ಪತ್ತೆಗೆ ಸ್ಪೆಷಲ್ ಆ್ಯಪ್

ನೊವೆಲ್ ಕೊರೊನಾ ವೈರಸ್ ಸೋಂಕಿತರ ಪತ್ತೆಗಾಗಿ ಗೂಗಲ್ ಹಾಗೂ ಆಪಲ್ ಸಂಸ್ಥೆಗಳು ಸಾಫ್ಟ್ ವೇರ್ ಒಂದನ್ನು ಅಭಿವೃದ್ಧಿಪಡಿಸಿದ್ದಾರೆ. ಸಾರ್ವಜನಿಕ ಆರೋಗ್ಯ ಪ್ರಾಧಿಕಾರವು ವಿಶ್ವದಾದ್ಯಂತ ಹೊಸ ಅಪ್ಲಿಕೇಷನ್ ಬಳಸಲು ಅನುಮತಿ ನೀಡಲಾಗಿದೆ. ಈ ಆ್ಯಪ್ ಹೊಂದಿರುವವರ ಸುತ್ತಮುತ್ತಲಿನಲ್ಲಿ ಕೊವಿಡ್-19 ಸೋಂಕಿತರು ಸುಳಿದಾಡಿದರೆ ಅಲರ್ಟ್ ಮೆಸೇಜ್ ಬರುತ್ತದೆ.

 ಬ್ಲೂಟೂತ್ ತರಂಗಗಳನ್ನು ಬಳಸಿ ಆ್ಯಪ್ ಕಾರ್ಯ

ಬ್ಲೂಟೂತ್ ತರಂಗಗಳನ್ನು ಬಳಸಿ ಆ್ಯಪ್ ಕಾರ್ಯ

ಎರಡು ದೈತ್ಯ ತಂತ್ರಜ್ಞಾನಗಳನ್ನು ಈ ಆ್ಯಪ್ ನಲ್ಲಿ ಅಳವಡಿಸಲಾಗಿದೆ. ಇದರ ಜೊತೆಗೆ ಬ್ಲೂಟೂತ್ ತರಂಗಗಳನ್ನು ಬಳಸಿಕೊಂಡು ಸ್ಮಾರ್ಟ್ ಫೋನ್ ಗಳ ನಡುವೆ ಸಂಪರ್ಕವನ್ನು ಸಾಧಿಸಲಾಗುತ್ತದೆ. ಇತ್ತೀಚಿಗಷ್ಟೇ ಅಪ್ ಡೇಟ್ ಮಾಡಿರುವ ಆ್ಯಪ್ ನ್ನು ಗೂಗಲ್ ಹಾಗೂ ಆಪಲ್ ಕಂಪನಿಗಳು ಮಾರುಕಟ್ಟೆಗೆ ಪರಿಚಯಿಸಿವೆ.

 ಆ್ಯಪ್ ನ್ನು ಹೇಗೆ ಡೌನ್ ಲೋಡ್ ಮಾಡಿಕೊಳ್ಳಬೇಕು

ಆ್ಯಪ್ ನ್ನು ಹೇಗೆ ಡೌನ್ ಲೋಡ್ ಮಾಡಿಕೊಳ್ಳಬೇಕು

ರಾಜ್ಯ ಮತ್ತು ಫೆಡರಲ್ ಸರ್ಕಾರಗಳು ಕೊರೊನಾ ವೈರಸ್ ಸೋಂಕಿತರ ಸಂಪರ್ಕದಲ್ಲಿ ಇರುವವರನ್ನು ಪತ್ತೆ ಮಾಡುವುದಕ್ಕೂ ಕೂಡಾ ಈ ಆ್ಯಪ್ ಬಳಕೆ ಮಾಡಿಕೊಳ್ಳಲು ಸಾಧ್ಯವಿದೆ. ಗೂಗಲ್ ಪ್ಲೇ ಸ್ಟೋರ್ ಹಾಗೂ ಆಪಲ್ ಆ್ಯಪ್ ಸ್ಟೋರ್ ನಲ್ಲಿ ಈ ಕೊವಿಡ್-19 ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಬಹುದು. ಬ್ಲೂಟೂತ್ ಸಿಗ್ನಲ್ ಗಳು ವೇಗವಾಗಿ ಕಾರ್ಯನಿರ್ವಹಿಸಲು ಮೊಬೈಲ್ ಗಳನ್ನು ಅಪ್ ಡೇಟ್ ಮಾಡಿಕೊಳ್ಳಬೇಕಾಗುತ್ತದೆ.

 ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿದ ಸ್ಪೆಷಲ್ ಆ್ಯಪ್

ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿದ ಸ್ಪೆಷಲ್ ಆ್ಯಪ್

ನೊವೆಲ್ ಕೊರೊನಾ ವೈರಸ್ ಸೋಂಕಿತರಿಂದ ಅಂತರ ಕಾಯ್ದುಕೊಳ್ಳಲು ಅಮೆರಿಕಾ ಸೇರಿದಂತೆ 22 ರಾಷ್ಟ್ರಗಳಲ್ಲಿ ಪ್ರಜೆಗಳು ಈ ಸ್ಪೆಷಲ್ ಆ್ಯಪ್ ಮೊರೆ ಹೋಗಿದ್ದಾರೆ. ಆದರೆ ಯಾವ ರಾಷ್ಟ್ರಗಳಲ್ಲಿ ಈ ಆ್ಯಪ್ ಬಳಕೆಯಾಗುತ್ತಿದೆ ಎಂಬ ಪಟ್ಟಿಯನ್ನು ನೀಡುವುದಕ್ಕೆ ಸಂಸ್ಥೆಗಳು ನಿರಾಕರಿಸಿವೆ.

 ಆಪಲ್, ಗೂಗಲ್ ಕಂಪನಿಗೆ ಧನ್ಯವಾದ ತಿಳಿಸಿದ ಯುಎಸ್ಎ

ಆಪಲ್, ಗೂಗಲ್ ಕಂಪನಿಗೆ ಧನ್ಯವಾದ ತಿಳಿಸಿದ ಯುಎಸ್ಎ

ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದ ಮೂರು ರಾಜ್ಯಗಳಲ್ಲಿ ಗೂಗಲ್ ಮತ್ತು ಆಪಲ್ ಅಭಿವೃದ್ಧಿಪಡಿಸಿರುವ ಈ ಆ್ಯಪ್ ಬಳಕೆಯನ್ನು ದೃಢೀಕರಿಸಲಾಗಿದೆ. ಈ ಪೈಕಿ ನಾರ್ತ್ ದಾಕೋಟಾ ರಾಜ್ಯಪಾಲ ದೌಗ್ ಬರ್ಗಮ್ ಎರಡು ಕಂಪನಿಗಳಿಗೆ ಧನ್ಯವಾದ ತಿಳಿಸಿದ್ದಾರೆ. ನಾರ್ತ್ ಡಾಕೋಟಾ ಅತ್ಯಾಧುನಿಕ ತಂತ್ರಜ್ಞಾನದಿಂದ ಅಭಿವೃದ್ಧಿಪಡಿಸಿರುವ ಆ್ಯಪ್ ಬಳಸುತ್ತಿರುವ ಮೊದಲ ರಾಜ್ಯವಾಗಿದೆ. ಇದರಿಂದ ಪ್ರಜೆಗಳನ್ನು ಕೊರೊನಾ ವೈರಸ್ ಸೋಂಕಿತರಿಂದ ದೂರ ಇರಿಸಲು ಆ್ಯಪ್ ಸಹಕಾರಿಯಾಗಲಿದೆ ಎಂದು ಹೇಳಿದ್ದಾರೆ.

 ಅತ್ಯಾಧುನಿಕ ತಂತ್ರಜ್ಞಾನವುಳ್ಳ ಆ್ಯಪ್ ನಲ್ಲೂ ಲೋಪದೋಷ

ಅತ್ಯಾಧುನಿಕ ತಂತ್ರಜ್ಞಾನವುಳ್ಳ ಆ್ಯಪ್ ನಲ್ಲೂ ಲೋಪದೋಷ

ಈ ಆ್ಯಪ್ ನಿಂದಾಗಿ ಕೊರೊನಾ ವೈರಸ್ ಸೋಂಕಿತರ ಜೊತೆಗೆ ಸಂಪರ್ಕದಲ್ಲಿ ಇರುವವರ ಮಾಹಿತಿ ಪಡೆಯಲು ಸಾಧ್ಯವಿದೆ. ಆದರೆ ಸೋಂಕಿತರ ಬಗ್ಗೆ ಯಾವುದೇ ರೀತಿ ಅಗತ್ಯ ಮತ್ತು ಎಚ್ಚರಿಕೆ ಸಂದೇಶಗಳು ಬರುವುದಿಲ್ಲ ಎಂದು ಸಾರ್ವಜನಿಕ ಆರೋಗ್ಯ ಪ್ರಾಧಿಕಾರಗಳು ದೂಷಿಸುತ್ತಿವೆ. ಇನ್ನು, ಕೊವಿಡ್-19 ಸೋಂಕಿತನ ಸಂಪರ್ಕದಲ್ಲಿದ್ದ ಜನರನ್ನು ಗುರುತಿಸಲು ಈ ಆ್ಯಪ್ ಖಂಡಿತವಾಗಿ ಸಹಕಾರಿ ಆಗಲಿದೆ. ಸೋಂಕಿತನು ಯಾವಾಗ ಎಲ್ಲಿ ತೆರಳಿದ್ದರು, ಯಾರೊಂದಿಗೆ ಸಂಪರ್ಕದಲ್ಲಿದ್ದರು ಎಂಬ ಮಾಹಿತಿ ಸಂಗ್ರಹಿಸಲು ಸಾರ್ವಜನಿಕ ಆರೋಗ್ಯ ಪ್ರಾಧಿಕಾರಕ್ಕೆ ಆ ಆ್ಯಪ್ ನಿಂದ ಸಹಾಯವಾಗಲಿದೆ.

 ಮೊದಲೇ ಅಭಿವೃದ್ಧಿಪಡಿಸಿರುವ ಆ್ಯಪ್ ಗಳಲ್ಲಿ ಸಮಸ್ಯೆ

ಮೊದಲೇ ಅಭಿವೃದ್ಧಿಪಡಿಸಿರುವ ಆ್ಯಪ್ ಗಳಲ್ಲಿ ಸಮಸ್ಯೆ

ಕೊರೊನಾ ವೈರಸ್ ಸೋಂಕಿತರು ಹಾಗೂ ಪ್ರಾಥಮಿಕ ಸಂಪರ್ಕದಲ್ಲಿ ಇರುವ ಬಗ್ಗೆ. ಸೋಂಕಿತರು ತಮ್ಮ ಸುತ್ತಮುತ್ತಲಿನಲ್ಲಿ ಸುಳಿದಾಡಿದರೆ ಎಚ್ಚರಿಕೆ ಸಂದೇಶಗಳು ಬರುವಂತೆ ಹಲವು ದೇಶಗಳಲ್ಲಿ ಸರ್ಕಾರಗಳೇ ಸ್ವಂತ ಆ್ಯಪ್ ಗಳನ್ನು ಅಭಿವೃದ್ಧಿಪಡಿಸಿವೆ. ಆದರೆ ಈ ಆ್ಯಪ್ ಗಳಲ್ಲಿ ನೂರೆಂಟು ಸಮಸ್ಯೆಗಳಿದ್ದು, ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿಲ್ಲ. ಅಲ್ಲದೇ ಆಪಲ್ ಕಂಪನಿ ಮೊಬೈಲ್ ಗಳಿಗೆ ಸಾಮಾನ್ಯ ಆ್ಯಪ್ ಗಳನ್ನು ಇನ್ ಸ್ಟಾಲ್ ಮಾಡಿಕೊಳ್ಳುವುದಕ್ಕೆ ಅವಕಾಶ ಇರುವುದಿಲ್ಲ.

ಆಪಲ್ ಮೊಬೈಲ್ ಗಳಲ್ಲಿ ಬೇರೆ ಕಂಪನಿ ಆ್ಯಪ್ ಗಳನ್ನು ಹಾಕಿಕೊಳ್ಳುವುದರಿಂದ ಮೊಬೈಲ್ ಗೆ ಧಕ್ಕೆ ಉಂಟಾಗುತ್ತದೆ. ಈ ಹಿನ್ನೆಲೆ ಬೇರೆ ಕಂಪನಿ ಆ್ಯಪ್ ಗಳಿಗೆ ಕಂಪನಿ ಅನುಮತಿ ನೀಡಿಲ್ಲ. ಹಾಗಾಗಿ ಗೂಗಲ್ ಮತ್ತು ಆಪಲ್ ಕಂಪನಿಗಳೇ ಹೊಸ ಸಾಫ್ಟ್ ವೇರ್ ನ್ನು ಅಭಿವೃದ್ಧಿಪಡಿಸಿವೆ.

English summary
Apple, Google Launch Coronavirus Tracking Tools for Operating System And Android Devices.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X