ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೀವು ಕಚೇರಿಗೆ ಕರೆದ್ರೆ ನಾವು ಕೆಲಸ ಬಿಡ್ತೀವಿ; ಆ್ಯಪಲ್, ಗೂಗಲ್ ಸಂಸ್ಥೆಗಳೇ ಕಂಗಾಲ್!?

|
Google Oneindia Kannada News

ನವದೆಹಲಿ, ಮೇ 4: ಕೊರೊನಾ ವೈರಸ್ ಸಾಂಕ್ರಾಮಿಕ ಪಿಡುಗು ಮುಗೀತು. ವರ್ಕ್ ಫ್ರಂ ಹೋಮ್ ಸಾಕು. ಇನ್ಮುಂದೆ ನೀವೆಲ್ಲ ಕಚೇರಿಗಳಿಗೆ ಹಾಜರ್ ಆಗಬೇಕು ಅನ್ನೋ ಒಂದೇ ಒಂದು ಸಂದೇಶವು ಆಪಲ್ ಕಂಪನಿ ಹಾಗೂ ಗೂಗಲ್ ಕಂಪನಿಯ ಸಾವಿರಾರು ಉದ್ಯೋಗಿಗಳ ನಿದ್ದೆಗೆಡಿಸಿದೆ.

ವರ್ಕ್ ಫ್ರಾಮ್ ಹೋಮ್ ಮುಗಿಸಿ ಕಚೇರಿಗೆ ಬನ್ನಿ ಎಂದಿದ್ದಕೆ ಉದ್ಯೋಗಿಗಳು ತಮ್ಮ ಕಂಪನಿಯನ್ನೇ ತೊರೆಯುವುದಕ್ಕೆ ನಿರ್ಧರಿಸಿದ್ದಾರಂತೆ. ಕೋವಿಡ್-19 ನಂತರದಲ್ಲಿ ಇಂಥದೊಂದು ಬೆಳವಣಿಗೆ ಐಟಿ ವಲಯದಲ್ಲಿ ಸಂಚಲನ ಸೃಷ್ಟಿಸುತ್ತಿದೆ.

Work From Home ಅಂತ್ಯ: ಉದ್ಯೋಗಿಗಳತ್ತ ಕೈ ಬೀಸುತ್ತಿರುವ ಕಂಪನಿಗಳು ಯಾವುವು?Work From Home ಅಂತ್ಯ: ಉದ್ಯೋಗಿಗಳತ್ತ ಕೈ ಬೀಸುತ್ತಿರುವ ಕಂಪನಿಗಳು ಯಾವುವು?

ಕಳೆದ ಎರಡು ವರ್ಷಗಳಿಂದ ವರ್ಕ್ ಫ್ರಂ ಹೋಮ್ ವೈಖರಿಗೆ ಒಗ್ಗಿಕೊಂಡಿರುವ ಉದ್ಯೋಗಿಗಳಿಗೆ ಈಗ ಕಚೇರಿಗೆ ಹಾಜರಾಗುವ ಮನಸ್ಸಿಲ್ಲ. ಇನ್ನು ಕೆಲವು ಉದ್ಯೋಗಿಗಳು ಕಚೇರಿಗೆ ಹೋಗುವುದಾದ್ರೂ ಹೊಸ ಕಂಪನಿಯನ್ನು ಹುಡುಕಿಕೊಂಡು ಹೋಗುವುದಕ್ಕೆ ಯೋಚಿಸುತ್ತಿದ್ದಾರೆ. ಅನಾಮಧೇಯ ಸಾಮಾಜಿಕ ಜಾಲತಾಣ ಬ್ಲೈಂಡ್ ನಡೆಸಿದ ಸಮೀಕ್ಷೆಯಲ್ಲಿ ಉಲ್ಲೇಖಿಸಿರುವ ಅಂಶಗಳು ಎಂಥವರನ್ನೂ ಹುಬ್ಬೇರಿಸುವಂತೆ ಮಾಡುತ್ತಿದೆ. ಈ ಕುರಿತು ಒಂದು ವಿಶೇಷ ವರದಿ ಇಲ್ಲಿದೆ ಓದಿ.

 Apple ಉದ್ಯೋಗಿಗಳು ವಾರದಲ್ಲಿ 3 ದಿನವಾದ್ರೂ ಕಚೇರಿಗೆ ಹಾಜರ್

Apple ಉದ್ಯೋಗಿಗಳು ವಾರದಲ್ಲಿ 3 ದಿನವಾದ್ರೂ ಕಚೇರಿಗೆ ಹಾಜರ್

ಜಗತ್ತಿನ ಐಟಿ ವಲಯದ ದೈತ್ಯ ಕಂಪನಿ ಎನಿಸಿರುವ ಆಪಲ್ ಸಂಸ್ಥೆಯು ತಮ್ಮ ಉದ್ಯೋಗಿಗಳಿಗೆ ಕಚೇರಿಗೆ ವಾಪಸ್ ಆಗಮಿಸುವಂತೆ ರೂಪಿಸಿರುವ ನೀತಿಗೆ ಶೇ.76ರಷ್ಟು ಉದ್ಯೋಗಿಗಳು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಪ್ರಸ್ತುತ ಆಪಲ್ ಕಂಪನಿಯ ಉದ್ಯೋಗಿಗಳು ವಾರದಲ್ಲಿ ಕನಿಷ್ಠ ಒಂದು ದಿನ ಕಚೇರಿಗೆ ಹಾಜರಾಗುವ ನೀತಿಯಿದ್ದು, ಮೇ 23ರ ನಂತರದಲ್ಲಿ ವಾರದಲ್ಲಿ ಕನಿಷ್ಠ ಮೂರು ದಿನ ಕಚೇರಿಗೆ ಹಾಜರಾಗುವಂತೆ ಆಪಲ್ ಸಂಸ್ಥೆಯ ಸಿಇಓ ಟಿಮ್ ಕುಕ್ ಸೂಚನೆ ನೀಡಿದ್ದಾರೆ. ಇದು ಉದ್ಯೋಗಿಗಳಲ್ಲಿ ಹತಾಶೆ ಮೂಡಿಸಿದೆ.

 ಬ್ಲೈಂಡ್ ನಡೆಸಿದ ಸಮೀಕ್ಷೆಯಲ್ಲಿನ ಪ್ರಮುಖ ಅಂಶ

ಬ್ಲೈಂಡ್ ನಡೆಸಿದ ಸಮೀಕ್ಷೆಯಲ್ಲಿನ ಪ್ರಮುಖ ಅಂಶ

ವರ್ಕ್ ಫ್ರಂ ಹೋಮ್ ಅವಧಿಯನ್ನು ಮುಗಿಸಿ ಎಂದಿನಂತೆ ಕಚೇರಿಗೆ ಆಗಮಿಸಬೇಕು ಎಂಬ ಆಪಲ್ ನೀತಿಯಿಂದ ಅತಿಹೆಚ್ಚು ಉದ್ಯೋಗಿಗಳು ಹತಾಶರಾಗಿದ್ದಾರೆ ಎಂದು ಬ್ಲೈಂಡ್ ನಡೆಸಿದ ಸಮೀಕ್ಷೆಯಿಂದ ಗೊತ್ತಾಗಿದೆ. ಈ ಸಂಬಂಧ ಕಳೆದ ಏಪ್ರಿಲ್ 13 ರಿಂದ 19ರವರೆಗೆ ಆಪಲ್ ಕಂಪನಿಯ ಒಟ್ಟು 652 ಉದ್ಯೋಗಿಗಳನ್ನು ಪ್ರಶ್ನೆ ಮಾಡಲಾಯಿತು. ಕಚೇರಿಗೆ ಆಹ್ವಾನ ನೀಡಿರುವ ಸಂಸ್ಥೆಯ ನಿರ್ಧಾರದ ಬಗ್ಗೆ ಅಭಿಪ್ರಾಯ ಸಂಗ್ರಹಿಸಲಾಗಿತ್ತು. ಈ ವೇಳೆ ಅತಿಹೆಚ್ಚು ಉದ್ಯೋಗಿಗಳು ಸಂಸ್ಥೆಯ ನಿರ್ಧಾರವನ್ನು ವಿರೋಧಿಸಿದ್ದಾರೆ.

 ವರ್ಕ್ ಫ್ರಂ ಹೋಮ್ ಶುರುವಾಗಿದ್ದು ಯಾವಾಗ?

ವರ್ಕ್ ಫ್ರಂ ಹೋಮ್ ಶುರುವಾಗಿದ್ದು ಯಾವಾಗ?

ಕಳೆದ 2020ರಲ್ಲಿ ಜಾಗತಿಕ ಮಟ್ಟದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ಶುರುವಾದ ಹಿನ್ನೆಲೆ ವರ್ಕ್ ಫ್ರಂ ಹೋಮ್ ಎಂಬ ಆಯ್ಕೆಯನ್ನು ಐಟಿ ಸಂಸ್ಥೆಗಳು ಆಯ್ದುಕೊಂಡವು. ಐಟಿ ಕಂಪನಿಗಳು ನೀಡಿದ ವರ್ಕ್ ಫ್ರಂ ಹೋಮ್ ಆಯ್ಕೆಯು ಉದ್ಯೋಗಿಗಳಿಗೆ ಆರೋಗ್ಯ ಸುರಕ್ಷತೆ ಜೊತೆಗೆ ಭದ್ರತೆಯನ್ನು ಒದಗಿಸಿತು. ಅದೇ ವೈಖರಿಗೆ ಒಗ್ಗಿಕೊಂಡಿರುವ ಉದ್ಯೋಗಿಗಳು ಇದೀಗ ಕಚೇರಿಗಳಿಗೆ ಹಾಜರಾಗುವುದಕ್ಕೆ ಮನಸ್ಸು ಮಾಡುತ್ತಿಲ್ಲ. ಒಂದು ವೇಳೆ ಕಚೇರಿಗೆ ಹೋಗುವುದೇ ಆಗಿದ್ದಲ್ಲಿ, ಈಗಿರುವ ಸಂಸ್ಥೆಗಿಂತಲೂ ಉತ್ತಮವಾದ ಹೆಚ್ಚು ಅನುಕೂಲಗಳನ್ನು ಒದಗಿಸುವ ಬೇರೆ ಕಂಪನಿಗೆ ಸೇರಿಕೊಳ್ಳುವುದಕ್ಕೆ ಮನಸ್ಸು ಮಾಡುತ್ತಿದ್ದಾರೆ ಎಂದು ಸಮೀಕ್ಷೆಯು ತಿಳಿಸಿದೆ.

 ಉದ್ಯೋಗಿಗಳಿಗೆ ಆಹ್ವಾನ ನೀಡಿದ ಗೂಗಲ್

ಉದ್ಯೋಗಿಗಳಿಗೆ ಆಹ್ವಾನ ನೀಡಿದ ಗೂಗಲ್

ಗೂಗಲ್ ಸಂಸ್ಥೆಯು ಸಹ ಕಚೇರಿಗೆ ಆಗಮಿಸುವಂತೆ ತಮ್ಮ ಉದ್ಯೋಗಿಗಳಿಗೆ ಆಹ್ವಾನ ನೀಡಿದೆ. ಇದಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಉದ್ಯೋಗಿಗಳಿಗೆ ವಿದ್ಯುತ್ ಚಾಲಿತ ದ್ವಿಚಕ್ರ ವಾಹನಗಳನ್ನು ನೀಡುವುದಾಗಿ ಸಂಸ್ಥೆಯು ಆಫರ್ ಕೊಟ್ಟಿದೆ. ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನಾ ಸಂಸ್ಥೆ ಉನಾಗಿ ಜೊತೆಗೆ ಗೂಗಲ್ ಪಾಲುದಾರಿಕೆಯನ್ನು ಹೊಂದಿದೆ. ರೈಡ್ ಸ್ಕೂಟ್ ಯೋಜನೆಯ ಮೂಲಕ ತಮ್ಮ ಸಂಸ್ಥೆಯ ಉದ್ಯೋಗಿಗಳಿಗೆ ಸ್ಕೂಟರ್ ಅನ್ನು ಒದಗಿಸುವುದಕ್ಕೆ ಗೂಗಲ್ ನಿರ್ಧರಿಸಿದೆ. ಇಂಥ ಒಂದು ಸ್ಕೂಟರಿನ ಬೆಲೆಯು ಕನಿಷ್ಠ 75,000 ರೂಪಾಯಿ ಆಗಿದೆ.

English summary
Apple CEO Tim Cook has asked employees to be in office for at least three days a week From May 23. Majority of Apple employees are upset with the return of office policy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X