ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ-ಪಾಕ್ ಸಂಘರ್ಷ ಇಡೀ ಜಗತ್ತಿಗೆ ಅಪಾಯಕಾರಿ: ವಿಶ್ವಸಂಸ್ಥೆ

|
Google Oneindia Kannada News

ವಿಶ್ವಸಂಸ್ಥೆ, ಜನವರಿ 29: ಭಾರತ ಮತ್ತು ಪಾಕಿಸ್ತಾನಗಳು ಮುಂದೆ ಬಂದು ತಮ್ಮ ಸಮಸ್ಯೆಗಳ ಬಗ್ಗೆ ಗಂಭೀರ ಚರ್ಚೆ ನಡೆಸುವುದು ಬಹಳ ಅಗತ್ಯವಾಗಿದೆ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟೆರಸ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ಎರಡೂ ದೇಶಗಳ ನಡುವಿನ ಯಾವುದೇ ಸೇನಾ ಮುಖಾಮುಖಿ ಸಂಘರ್ಷವು ಉಭಯ ದೇಶಗಳಿಗೆ ಮತ್ತು ಇಡೀ ಜಗತ್ತಗೆ ಅಪಾರ ಪ್ರಮಾಣದ ವಿಪತ್ತಿಗೆ ಕಾರಣವಾಗಲಿದೆ' ಎಂದು ಆತಂಕ ವ್ಯಕ್ತಪಡಿಸಿದರು.

18 ವರ್ಷದ ಬಳಿಕ ಪಾಕಿಸ್ತಾನ ಜೈಲಿನಿಂದ ಬಿಡುಗಡೆಯಾಗಿ ಭಾರತಕ್ಕೆ ಮರಳಿದ ಮಹಿಳೆ18 ವರ್ಷದ ಬಳಿಕ ಪಾಕಿಸ್ತಾನ ಜೈಲಿನಿಂದ ಬಿಡುಗಡೆಯಾಗಿ ಭಾರತಕ್ಕೆ ಮರಳಿದ ಮಹಿಳೆ

'ನಾನು ಹೇಳಿಕೆಯಲ್ಲಿ ತಿಳಿಸಿರುವಂತೆ... ನಾನು ಇಂದು ಹೇಳುವುದು ಕೂಡ ಅದೇ ಆಗಿರುತ್ತದೆ ಎನ್ನುವುದು ದುರದೃಷ್ಟಕರ. ನನ್ನ ಪ್ರಕಾರ ಈಗಿನ ಸನ್ನಿವೇಶದಲ್ಲಿ ಗಡಿ ನಿಯಂತ್ರಣ ರೇಖೆಗಳಿಂದ ಸೇನೆಗಳನ್ನು ತೆರವುಗೊಳಿಸುವುದು ಬಹಳ ಅವಶ್ಯಕವಾಗಿದೆ' ಎಂದು ಅವರು ತಿಳಿಸಿದರು.

Any Military Confrontation Between India, Pakistan Would Be Disaster: UN Chief

ಕಾಶ್ಮೀರದ ಸ್ಥಿತಿಗೆ ಸಂಬಂಧಿಸಿದಂತೆ ಭಾರತ ಮತ್ತು ಪಾಕಿಸ್ತಾನಗಳ ನಡುವೆ ಇರುವ ಉದ್ವಿಗ್ನತೆಯ ಕುರಿತು ಪಾಕಿಸ್ತಾನದ ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ಗುಟೆರಸ್ ಈ ಪ್ರತಿಕ್ರಿಯೆ ನೀಡಿದರು.

'ನೀವು ಪ್ರಸ್ತಾಪಿಸಿದ ಎಲ್ಲ ಪ್ರಾಂತ್ಯಗಳಲ್ಲಿಯೂ ಮಾನವಹಕ್ಕುಗಳನ್ನು ಸಂಪೂರ್ಣವಾಗಿ ಗೌರವಿಸುವುದು ಅತ್ಯಗತ್ಯ. ಸೇನೆಯನ್ನು ಬಳಸದೆಯೇ ಸಮಸ್ಯೆಗಳಿಗೆ ಶಾಂತಿಯುತ ಪರಿಹಾರ ಕಂಡುಕೊಳ್ಳಬೇಕು ಎನ್ನುವುದು ನಮ್ಮ ಒತ್ತಾಯ. ಭಾರತ ಮತ್ತು ಪಾಕಿಸ್ತಾನದ ನಡುವಿನ ವಿಚಾರವನ್ನು ಗಮನಿಸಿದಾಗ, ಇಲ್ಲಿ ಸೇನೆಯ ಬಳಕೆಯಿಂದ ಅಪಾಯ ಸಂಭವಿಸುವುದು ಸ್ಪಷ್ಟ. ಇದರಿಂದ ಆ ಎರಡು ದೇಶಗಳಿಗೆ ಮಾತ್ರವಲ್ಲ, ಇಡೀ ಜಗತ್ತಿಗೆ ತೊಂದರೆಯಾಗಲಿದೆ' ಎಂದರು.

English summary
United Nations Secretary General Antonio Guterres said, any military confrontation between India and Pakistan would be a disaster for both countried and the whole world.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X