ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿಯಾಗಿ ಗುಟೆರಸ್ ನೇಮಕ

|
Google Oneindia Kannada News

ವಿಶ್ವಸಂಸ್ಥೆ, ಅಕ್ಟೋಬರ್, 14 : ವಿಶ್ವಸಂಸ್ಥೆ ನೂತನ ಮಹಾ ಪ್ರಧಾನ ಕಾರ್ಯದರ್ಶಿಯಾಗಿ ಪೋರ್ಚುಗಲ್ ಮಾಜಿ ಪ್ರಧಾನಿ ಅಂಟೊನಿಯೊ ಗುಟೆರಸ್ ಅವರು ಗುರುವಾರ ಆಯ್ಕೆಯಾಗಿದ್ದಾರೆ.

193 ಸದಸ್ಯ ಬಲದ ವಿಶ್ವಸಂಸ್ಥೆ ಸಾಮಾನ್ಯ ಸಭೆಯು ಗುಟೆರಸ್ ಅವರನ್ನು ಮಹಾ ಪ್ರಧಾನ ಕಾರ್ಯದರ್ಶಿಯಾಗಿ ಸರ್ವಾನುಮತದಿಂದ ನಿರ್ಣಯ ಅಂಗೀಕರಿಸಿದೆ. 15 ರಾಷ್ಟಗಳ ಸದಸ್ಯರನ್ನೊಳಗೊಂಡ ಭದ್ರತಾ ಮಂಡಳಿ ಕಳುಹಿಸಿದ ಪ್ರಸ್ತಾವನೆಗೆ ಸಾಮಾನ್ಯ ಸಭೆ ಒಪ್ಪಿಗೆ ನೀಡಿದೆ.

ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿಯಾಗಿ ಗುಟೆರಸ್

ಹಾಲಿ ಮಹಾಪ್ರಧಾನ ಕಾರ್ಯದರ್ಶಿ ಬಾನ್-ಕಿ-ಮೂನ್ ಅವರ ಉತ್ತರಾಧಿಕಾರಿಯಾಗಿ ಕಾರ್ಯನಿರ್ವಹಿಸಲಿರುವ 67 ವರ್ಷದ ಗುಟೆರಸ್ ಅವರು ವಿಶ್ವಸಂಸ್ಥೆಯ 9ನೇ ಮಹಾ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ.[ಟ್ರಂಪ್ ಲೈಂಗಿಕ ಪುರಾಣವನ್ನು ಬಿಚ್ಚಿಟ್ಟ ಮಹಿಳಾಮಣಿಗಳು!]

2017 ಜನವರಿ 1ರಂದು ಅಧಿಕಾರವಹಿಸಿಕೊಳ್ಳುವ ಗುಟೇರಸ್ 2022ರ ಡಿಸೆಂಬರ್ 31ರ ವರೆಗೆ ಕಾರ್ಯನಿರ್ವಹಿಸಲಿದ್ದಾರೆ.

ಗುಟೆರಸ್ 1995ರಿಂದ 2002ರ ವರೆಗೆ ಪೋರ್ಚುಗಲ್ ಪ್ರಧಾನಿಯಾಗಿದ್ದರು. ನಂತರ 2005ರಿಂದ 2015ರ ವರೆಗೆ ವಿಶ್ವಸಂಸ್ಥೆ ನಿರಾಶ್ರೀತರ ಹೈ ಕಮಿಷನರ್ ಆಗಿದ್ದರು.

English summary
Portugal's former prime minister Antonio Guterres was appointed as the next Secretary-General of the United Nations by the General Assembly.ವಿಶ್ವಸಂಸ್ಥೆ ನೂತನ ಮಹಾ ಪ್ರಧಾನ ಕಾರ್ಯದರ್ಶಿಯಾಗಿ ಪೋರ್ಚುಗಲ್ ಮಾಜಿ ಪ್ರಧಾನಿ ಅಂಟೊನಿಯೊ ಗುಟೆರಸ್ ಅವರು ಗುರುವಾರ ಆಯ್ಕೆಯಾಗಿದ್ದಾರೆ.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X