ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜನಪ್ರಿಯ Anti-ವೈರಸ್ ತಂತ್ರಾಂಶ ಸೃಷ್ಟಿಕರ್ತ ಜೈಲಲ್ಲಿ ಆತ್ಮಹತ್ಯೆ

|
Google Oneindia Kannada News

ಬಾರ್ಸಿಲೋನಾ, ಜೂನ್ 24: ಜನಪ್ರಿಯ Anti-ವೈರಸ್ ಸೃಷ್ಟಿಕರ್ತ ಜಾನ್ ಮೆಕಾಫಿ(McAfee) ಇಲ್ಲಿನ ಜೈಲೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ತಂತ್ರಜ್ಞಾನ ಕ್ಷೇತ್ರದ ಪ್ರಮುಖ ವ್ಯಕ್ತಿ ಜಾನ್ ತೆರಿಗೆ ಸಂಬಂಧಿಸಿದ ಪ್ರಕರಣದಲ್ಲಿ ಅಪರಾಧಿ ಎನಿಸಿ, ಜೈಲುಪಾಲಾಗಿದ್ದಾರೆ. ಬಾರ್ಸಿಲೋನಾದ ಜೈಲಿನ ತಮ್ಮ ಸೆಲ್‌ನಲ್ಲಿ ಜಾನ್ ನೇಣು ಬಿಗಿದ ಸ್ಥಿತಿಯಲ್ಲಿ ಕಂಡು ಬಂದಿದ್ದಾರೆ.

75 ವರ್ಷ ವಯಸ್ಸಿನ ಅಮೆರಿಕ ಪೌರತ್ವ ಹೊಂದಿರುವ ವ್ಯಕ್ತಿ, ತೆರಿಗೆ ಪ್ರಕರಣದಲ್ಲಿ ಆ ದೇಶಕ್ಕೆ ಗಡಿಪಾರಾಗಬೇಕಿದ್ದವ ಮೃತನಾಗಿದ್ದಾನೆ ಎಂದು ಜೈಲಿನ ಅಧಿಕಾರಿಗಳು ಜಾನ್ ಹೆಸರು ಉಲ್ಲೇಖಿಸದೆ ಪ್ರಕಟಣೆ ಹೊರಡಿಸಲಾಗಿದೆ. ಆದರೆ, ಈ ಬಗ್ಗೆ ಪರಿಶೀಲಿಸಿ ವರದಿ ಮಾಡಿರುವ ಎಪಿ ಸಂಸ್ಥೆ ಮೃತ ವ್ಯಕ್ತಿ ಮೆಕಾಫಿ ಎಂದು ಖಚಿತಪಡಿಸಿದೆ.

Antivirus Software Creator John McAfee, Found Dead in Barcelona Prison

ಯಾರೀತ ಮೆಕಾಫಿ?
* ಕಂಪ್ಯೂಟರ್ ಪ್ರೋಗ್ರಾಮರ್, ಉದ್ಯಮಿ ಮೆಕಾಫಿ 1987ರಲ್ಲಿ ತಮ್ಮ ಒಡನಾಡಿಗಳ ಜೊತೆ Anti-ವೈರಸ್ ತಂತ್ರಾಂಶ ಉತ್ಪಾದನೆಗಾಗಿ ಐಟಿ ಸಂಸ್ಥೆ ಸ್ಥಾಪಿಸಿದರು. 1994ರ ತನಕ ಕಾರ್ಯನಿರ್ವಹಿಸಿದರು. 2011ರಲ್ಲಿ ಇಂಟೆಲ್ ಈ ತಂತ್ರಾಂಶವನ್ನು ಖರೀದಿಸಿತು.

* ಇದಕ್ಕೂ ಮುನ್ನ ನಾಸಾ, ಜೆರಾಕ್ಸ್, ಲಾಕ್ ಹೀಡ್ ಮಾರ್ಟಿನ್ ಮುಂತಾದ ಪ್ರತಿಷ್ಠಿತ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸಿದ್ದರು.

* ಟ್ರೈಬಲ್ ವಾಯ್ಸ್, ಕ್ಯುರಂಎಕ್ಸ್, ಫ್ಯೂಚರ್ ಟೆನ್ಸ್ ಸೆಂಟ್ರಲ್ ಮುಂತಾದ ಸಂಸ್ಥೆ ಸ್ಥಾಪಿಸಿದರು, ಅನೇಕ ಸಂಸ್ಥೆಗಳ ಸ್ಥಾಪನೆಗೆ ಉತ್ತೇಜನ ನೀಡಿದರು.

* ಕ್ರಿಪ್ಟೋಕರೆನ್ಸಿ, ಆಪ್ಸ್, ಯೋಗ, ಹರ್ಬಲ್ ಆಂಟಿಬಯೋಟಿಕ್ಸ್ ಬಗ್ಗೆಜಾನ್ ಆಸಕ್ತಿ ಹೊಂದಿದ್ದರು.
* 2016ರಲ್ಲಿ ಯುಎಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಮೆಕಾಫಿ ಹೆಸರು ಕೇಳಿ ಬಂದಿತ್ತು. ಲಿಬರೇಟಿಯನ್ ಪಾರ್ಟಿಯಲ್ಲಿ ಕಾಣಿಸಿಕೊಂಡಿದ್ದರು.

* 2019ರಲ್ಲಿ ಬೆಲಿಜಿಯಲ್ಲಿ ನೆರೆ ಮನೆಯಾತನನ್ನು ಹತ್ಯೆ ಸಂಚು ರೂಪಿಸಿದ ಆರೋಪದ ಮೇಲೆ ಮೆಕಾಫಿಗೆ 25 ಮಿಲಿಯನ್ ಡಾಲರ್ ದಂಡ ವಿಧಿಸಲಾಯಿತು. ಆದರೆ, ಕೋರ್ಟ್ ಆದೇಶವನ್ನು ಜಾನ್ ಉಲ್ಲಂಘಿಸಿದರು.

* 2014 ರಿಂದ 2018ರ ಅವಧಿಯಲ್ಲಿ ಮೆಕಾಫಿ 12 ಮಿಲಿಯನ್ ಡಾಲರ್ ಆದಾಯ ಗಳಿಸಿದ್ದು, ತೆರಿಗೆ ಪಾವತಿಸಿಲ್ಲ ಎಂದು ಆರೋಪಿಸಲಾಗಿದೆ.

* ತೆರಿಗೆ ವಂಚನೆ ಪ್ರಕರಣದಲ್ಲಿ 2020ರ ಅಕ್ಟೋಬರ್ 6ರಂದು ಸ್ಪೇನ್ ನಗರವೊಂದರಲ್ಲಿ ಜಾನ್ ಬಂಧಿಸಲಾಯಿತು. ಆರೋಪ ಸಾಬೀತಾದರೆ 30 ವರ್ಷ ಶಿಕ್ಷೆ ವಿಧಿಸಬೇಕಾಗುತ್ತದೆ, ಅಮೆರಿಕಕ್ಕೆ ಗಡೀಪಾರು ಮಾಡುವಂತೆ ಯುಎಸ್ ಷೇರುಪೇಟೆ ಮನವಿ ಮಾಡಿತ್ತು. ಪ್ರಕರಣ ವಿಚಾರಣೆ ಹಂತದಲ್ಲಿದ್ದರಿಂದ ಬಾರ್ಸಿಲೋನಾದ ಜೈಲಿನಲ್ಲಿ ಜಾನ್ ಇರಿಸಲಾಗಿತ್ತು. ಆರೋಪಗಳನ್ನು ತಳ್ಳಿ ಹಾಕಿದ್ದ ಜಾನ್, ಜೀವನ ಪರ್ಯಂತ ಯುಎಸ್ ಜೈಲಿನಲ್ಲಿ ಕಾಲಕಳೆಯಲು ಸಿದ್ಧ ಎಂದಿದ್ದರು.

English summary
Tech gaint John McAfee, the creator of the leading antivirus software McAfee, was found dead in his cell in a jail near Barcelona.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X