• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೂರು ತಿಂಗಳ ಬಳಿಕ ಸಾರ್ವಜನಿಕವಾಗಿ ಕಾಣಿಸಿಕೊಂಡ ಅಲಿಬಾಬಾ ಸಂಸ್ಥಾಪಕ ಜಾಕ್‌ ಮಾ

|

ಬೀಜಿಂಗ್, ಜನವರಿ 20: ಚೀನಾ ಸರ್ಕಾರದ ನೀತಿಗಳ ವಿರುದ್ಧ ವಿವಾದಾತ್ಮಕ ಹೇಳಿಕೆ ಬಳಿಕ ನಾಪತ್ತೆಯಾಗಿದ್ದ ಅಲಿಬಾಬಾ ಸಂಸ್ಥಾಪಕ ಜಾಕ್ ಮಾ ಅವರು ಹಲವು ವಾರಗಳ ಬಳಿಕ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ.

"ಚೀನಾದ ಗಡಿ ಅತಿಕ್ರಮಣದ ಹಿಂದೆ 40 ವರ್ಷದ ಇತಿಹಾಸ"

ಚೀನಾ ಸರ್ಕಾರವು ಸಿಟ್ಟಿನಿಂದ ಅಲಿಬಾಬಾ ವಿರುದ್ಧ ಕ್ರಮ ಕೈಗೊಂಡಿರಬಹುದು ಎಂಬ ತೀವ್ರವಾದ ಊಹಾಪೋಹಗಳ ಬಳಿಕ ಬಿಲಿಯನೇರ್ ಅಲಿಬಾಬಾ ಅವರು ಬುಧವಾರ ಕಾಣಿಸಿಕೊಂಡಿದ್ದು, ಕೋವಿಡ್-19 ಕಾರಣಗಳಿಂದ ವೀಡಿಯೋ ಕಾನ್ಫರೆನ್ಸ್ ಮೂಲಕ ಹಳ್ಳಿ ಶಿಕ್ಷಕರಿಗೆ ಶುಭಾಶಯ ತಿಳಿಸಿದ್ದಾರೆ.

ಆಫ್ರಿಕಾ ಬಿಜೆನೆಸ್ ಹೀರೋಸ್ ಎಂಬ ಪ್ರತಿಭಾನ್ವೇಷಣೆ ಕಾರ್ಯಕ್ರಮದಲ್ಲಿ ಪ್ರತಿ ಬಾರಿ ತಪ್ಪದೇ ಹಾಜರಾಗುತ್ತಿದ್ದ ಜಾಕ್‌ ಮಾ ಈ ಬಾರಿ ಗೈರಾಗಿದ್ದು, ಭಾರೀ ಅನುಮಾನಕ್ಕೆ ಕಾರಣವಾಗಿತ್ತು. ಜಾಕ್‌ ಮಾಗೆ ಸರ್ಕಾರವು ಕಿರುಕುಳ ನೀಡಲಾಗುತ್ತಿದೆ ಎಂಬ ಊಹಾಪೋಹ ಸುದ್ದಿ ಹರಿದಾಡಿತ್ತು.

ಜಾಕ್‌ ಮಾ ಸೇರಿದಂತೆ Ant ಸಂಸ್ಥೆಗೆ ಸೇರಿದ್ದ 37 ಬಿಲಿಯನ್ ಡಾಲರ್ ಮೌಲ್ಯದ ಅಮಾನ್ಯ ಮಾಡಿ ಚೀನಾ ಶಾಕ್ ನೀಡಿತ್ತು. ಇದಾದ ಬಳಿಕ ಅಕ್ಟೋಬರ್ 10ರಂದು ಕೊನೆಯ ಬಾರಿಗೆ ಜಾಕ್‌ ಮಾ ಟ್ವೀಟ್ ಮಾಡಿದ್ದರು. ಆದರೆ ಇದಾಗಿ ಮೂರು ತಿಂಗಳ ಬಳಿಕ ಜಾಕ್‌ ಮಾ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ.

English summary
Jack Ma resurfaced after months out of public view that fueled intense speculation about the plight of the billionaire grappling with escalating scrutiny over his internet empire.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X