ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿಲರಿ ಅಧ್ಯಕ್ಷರಾದರೆ ಮೂರನೇ ವಿಶ್ವಯುದ್ಧ ಗ್ಯಾರಂಟಿ!

By Prithviraj
|
Google Oneindia Kannada News

ವಾಷಿಂಗ್ಟನ್, ಅಕ್ಟೋಬರ್, 26: ಅಮೆರಿಕ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ ಹಿಲರಿ ಕ್ಲಿಂಟನ್ ಅವರು ಅನುಸರಿಸುತ್ತಿರುವ ಭವಿಷ್ಯದಲ್ಲಿ ಮೂರನೇ ಪ್ರಪಂಚ ಯುದ್ಧಕ್ಕೆ ದಾರಿಮಾಡಿಕೊಡುತ್ತದೆ ಎಂದು ರಿಪಬ್ಲಿಕನ್ ಪಕ್ಷದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆರೋಪಿಸಿದ್ದಾರೆ.

ಹಿಲರಿ ತಮ್ಮ ವಿದೇಶಾಂಗ ನೀತಿಯ ಭಾಗವಾಗಿ ಸಿರಿಯಾದಲ್ಲಿ ಕೈಗೊಳ್ಳುಲು ಉದ್ದೇಶಿಸಿರುವ ಕ್ರಮಗಳು ಸಾಕಾರವಾದರೆ ಮೂರನೇ ಪ್ರಪಂಚ ಯುದ್ಧ ಖಂಡಿತ ನಡೆಯುತ್ತದೆ ಎಂದು ದೂರಿದ್ದಾರೆ.

Another world war: clhintons Syria plan could spark third global war

ಭಯೋತ್ಪಾದನೆಯನ್ನು ಪೋಷಿಸಿ ಬೆಳೆಸುತ್ತಿರುವ ಐಸಿಸ್ ನಂತಹ ಉಗ್ರ ಸಂಘಟನೆಗಳನ್ನು ಬುಡ ಸಮೇತ ಕಿತ್ತುಹಾಕಬೇಕು ಆದರೆ, ಹಿಲರಿ ಅವರು ಕೇವಲ ಸಿರಿಯಾ ದೇಶದ ಅಧ್ಯಕ್ಷರನ್ನು ಕೆಳಗಿಳಿಸುವ ಕುರಿತು ಯೋಚನೆ ಮಾಡುತ್ತಿದ್ದಾರೆ. ಇದು ಯಾವುದೇ ಪ್ರಯೋಜನ ನೀಡುವುದಿಲ್ಲ ಎಂದು ಅವರು ಹೇಳಿದ್ದಾರೆ.

ಸಿರಿಯಾವನ್ನು 'ನೋ ಪ್ಲೈ' ಜೋನ್ ಆಗಿ ಸಿದ್ಧಪಡಿಸಬೇಕು ಎಂಬ ಹಿಲರಿ ಪ್ರತಿಪಾದನೆ ಸರಿಯಲ್ಲ ಎಂದು ಟ್ರಂಪ್ ಅಲ್ಲಗೆಳೆದಿದ್ದಾರೆ. ಅವರ ಯೋಚನೆ ರಷ್ಯಾದೊಂದಿಗೆ ಘರ್ಷಣೆಗೆ ಎಡೆಮಾಡಿಕೊಡುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದಷ್ಟೇ ಅಲ್ಲದೇ ಸ್ವಪಕ್ಷೀಯರ ವಿರುದ್ಧವೇ ಟ್ರಂಪ್ ಅಸಮಾಧಾನ ವ್ಯಕ್ತಪಡಿಸಿದ್ದು, ನಮ್ಮ ಪಕ್ಷದವರು ನನಗೆ ಸಂಪೂರ್ಣ ಬೆಂಬಲ ನೀಡಿದರೆ ಹಿಲರಿಯವರನ್ನು ಗೆಲ್ಲುವುದು ಕಷ್ಟವೇನೂ ಅಲ್ಲ ಎಂದು ಹೇಳಿದ್ದಾರೆ.

ಪ್ರಬಲ ಅಣ್ವಾಸ್ತ್ರಗಳನ್ನು ರಷ್ಯಾ ಹೊಂದಿದ್ದು, ರಷ್ಯಾ ವಿರುದ್ಧ ಸಿಡಿದೇಳುವ ದೇಶದ ವಿರುದ್ಧ ಅಣ್ವಸ್ತ್ರಾಗಳನ್ನು ಪ್ರಯೋಗಿಸುವಲ್ಲಿ ವಿವೇಚಿಸುವುದಿಲ್ಲ ಎಂದು ಎಚ್ಚರಿಸಿದರು.

ಪುಟಿನ್ ಮೇಲೆ ಹಿಲರಿ ಕ್ಲಿಂಟನ್ ಅವರು ವಾಗ್ದಾಳಿ ನಡೆಸುತ್ತಿದ್ದಾರೆ. ಒಂದು ವೇಳೆ ಹಿಲರಿ ಅಧ್ಯಕ್ಷರಾದರೆ ಪುಟಿನ್ ಜತೆ ಹೇಗೆ ಮಾತುಕತೆ ನಡೆಸುತ್ತಾರೆ ಎಂದು ಪ್ರಶ್ನಿಸಿದರು. ರಷ್ಯಾವನ್ನು ಶತ್ರುವಾಗಿ ಬಿಂಬಿಸಿ ಅಮೆರಿಕರನ್ನು ಭಯಪಡಿಸಲು ಹಿಲ್ಲರಿ ಮುಂದಾಗಿದ್ದಾರೆ ಎಂದು ಟ್ರಂಪ್ ಆಗ್ರಹಿಸಿದ್ದಾರೆ.

English summary
Democratic U.S. presidential nominee Hillary Clinton’s plan for Syria could “lead to World War III,” her rival Donald Trump said Tuesday. Trump emphasized the importance of focusing on the Islamic State terrorist group, also called ISIS, and not the war-torn country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X