ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Langya Virus : ಇದು ಡ್ರ್ಯಾಗನ್ ರಾಷ್ಟ್ರನಾ? ವೈರಸ್ ರಾಷ್ಟ್ರನಾ? ಮತ್ತೊಂದು ವೈರಸ್ ಪತ್ತೆ

|
Google Oneindia Kannada News

ಬೀಜಿಂಗ್ ಆಗಸ್ಟ್ 10: ಚೀನಾವನ್ನು ಡ್ರ್ಯಾಗನ್ ರಾಷ್ಟ್ರ ಎನ್ನುವುದಕ್ಕಿಂತ ಭಯಾನಕ ವೈರಸ್‌ಗಳ ಸೃಷ್ಟಿಯ ದೇಶ ಎನ್ನುವುದು ಲೇಸು. ಯಾಕೆಂದರೆ ಚೀನಾ ಕೊರೊನಾದಂತಹ ವೈರಸ್‌ನನ್ನು ಜಗತ್ತಿಗೆ ಪರಿಚಯಿಸಿದ ಬಳಿಕ ಇಡೀ ವಿಶ್ವದ ಸ್ಥಿತಿಯೇ ಬದಲಾಗಿ ಹೋಗಿದೆ. ಈಗ ಮತ್ತೊಂದು ಹೊಸ ರೂಪಾದ ವೈರಸ್‌ ಚೀನಾದಲ್ಲಿ ಕಾಣಿಸಿಕೊಂಡಿದೆ. ಅಂದಹಾಗೆ ಈ ಹೊಸ ವೈರಸ್ ಹೆಸರು 'ಲಂಗ್ಯಾ' (Langya). ಪ್ರಾಣಿಯಿಂದ ಹರಡುತ್ತಿರುವ ಈ ಹೆನಿಪಾವೈರಸ್ ಚೀನಾದ ಶಾಂಡೊಂಗ್ ಮತ್ತು ಹೆನಾನ್ ಪ್ರಾಂತ್ಯಗಳಲ್ಲಿ ಕಂಡು ಬಂದಿದೆ. ಇದುವರೆಗೆ 35 ಜನರಿಗೆ ಈ ಸೋಂಕು ತಗುಲಿದೆ ಎಂದು ಅಧಿಕೃತ ಮಾಧ್ಯಮ ಮಂಗಳವಾರ ವರದಿ ಮಾಡಿದೆ.

ಹೊಸ ಪ್ರಕಾರದ ವೈರಸ್‌ ಅನ್ನು ಹೆನಿಪವೈರಸ್, ಲಂಗ್ಯಾ ಹೆನಿಪವೈರಸ್, ಲೇವಿ ಎಂದೂ ಸಹ ಹೆಸರಿಸಲಾಗಿದೆ. ಪೂರ್ವ ಚೀನಾದಲ್ಲಿ ಜ್ವರ ಕಂಡು ಬಂದ ರೋಗಿಗಳ ಗಂಟಲಿನ ಸ್ವ್ಯಾಬ್ ಮಾದರಿಗಳಲ್ಲಿ ಈ ವೈರಸ್ ಇರುವುದು ಕಂಡುಬಂದಿದೆ ಎಂದು ಸರ್ಕಾರಿ ಗ್ಲೋಬಲ್ ಟೈಮ್ಸ್ ಮಾಧ್ಯಮ ವರದಿಗಳಲ್ಲಿ ಉಲ್ಲೇಖಿಸಲಾಗಿದೆ.

ಅಧ್ಯಯನದಲ್ಲಿ ಭಾಗವಹಿಸಿದ ವಿದ್ವಾಂಸರು ಪ್ರಾಣಿಗಳಿಂದ ಬಂದಿರುವ ಈ ಹೊಸದಾಗಿ ಪತ್ತೆಯಾದ ಹೆನಿಪಾವೈರಸ್ ಕೆಲವು ಜ್ವರ ಪ್ರಕರಣಗಳಿಗೆ ಸಂಬಂಧಿಸಿದೆ. ಸೋಂಕಿತ ಜನರು ಜ್ವರ, ಆಯಾಸ, ಕೆಮ್ಮು, ಅನೋರೆಕ್ಸಿಯಾ, ಮೈಯಾಲ್ಜಿಯಾ ಮತ್ತು ವಾಕರಿಕೆ ಸೇರಿದಂತೆ ರೋಗಲಕ್ಷಣಗಳನ್ನು ಹೊಂದಿದ್ದಾರೆ ಎಂದು ಸೂಚಿಸಿದ್ದಾರೆ. ಹೆನಿಪಾವೈರಸ್‌ಗೆ ಪ್ರಸ್ತುತ ಯಾವುದೇ ಲಸಿಕೆ ಅಥವಾ ಚಿಕಿತ್ಸೆ ಇಲ್ಲ. ತೊಡಕುಗಳನ್ನು ನಿರ್ವಹಿಸಲು ಪೋಷಕ ಆರೈಕೆ ಮಾತ್ರ ಚಿಕಿತ್ಸೆಯಾಗಿದೆ.

Another virus detected in China: Langya virus for 35 people

ಇದುವರೆಗೆ ಲಾಂಗ್ಯಾ ಹೆನಿಪವೈರಸ್ ಪ್ರಕರಣಗಳು ಮಾರಣಾಂತಿಕವಾಗಿಲ್ಲ ಅಥವಾ ತುಂಬಾ ಗಂಭೀರವಾಗಿಲ್ಲ. ಆದ್ದರಿಂದ ಭಯಪಡುವ ಅಗತ್ಯವಿಲ್ಲ ಎಂದು ಅಧ್ಯಯನದಲ್ಲಿ ತೊಡಗಿರುವ ಡ್ಯೂಕ್-ಎನ್‌ಯುಎಸ್ ವೈದ್ಯಕೀಯ ಶಾಲೆಯ ಉದಯೋನ್ಮುಖ ಸಾಂಕ್ರಾಮಿಕ ರೋಗಗಳ ಕಾರ್ಯಕ್ರಮದ ಪ್ರಾಧ್ಯಾಪಕ ವಾಂಗ್ ಲಿನ್ಫಾ ಹೇಳಿದರು. ಪ್ರಕೃತಿಯಲ್ಲಿ ಅಸ್ತಿತ್ವದಲ್ಲಿರುವ ಅನೇಕ ವೈರಸ್‌ಗಳು ಮನುಷ್ಯರಿಗೆ ಸೋಂಕು ತಗುಲಿದಾಗ ಅನಿರೀಕ್ಷಿತ ಫಲಿತಾಂಶಗಳನ್ನು ಹೊಂದಿರುವುದರಿಂದ ಇದು ಎಚ್ಚರಿಕೆಗೆ ಕಾರಣವಾಗಿದೆ.

Another virus detected in China: Langya virus for 35 people

ಶಾಂಡೋಂಗ್ ಮತ್ತು ಹೆನಾನ್ ಪ್ರಾಂತ್ಯಗಳಲ್ಲಿ ಲಾಂಗ್ಯಾ ಹೆನಿಪಾವೈರಸ್ ಸೋಂಕಿನ 35 ಪ್ರಕರಣಗಳಲ್ಲಿ 26 ಜ್ವರ, ಕಿರಿಕಿರಿ, ಕೆಮ್ಮು, ಅನೋರೆಕ್ಸಿಯಾ, ಮೈಯಾಲ್ಜಿಯಾ, ವಾಕರಿಕೆ, ತಲೆನೋವು ಮತ್ತು ವಾಂತಿ ಮುಂತಾದ ವೈದ್ಯಕೀಯ ಲಕ್ಷಣಗಳನ್ನು ಅಭಿವೃದ್ಧಿಪಡಿಸಿದೆ ಎಂದು ಹೆಚ್ಚಿನ ತನಿಖೆಯು ಕಂಡುಹಿಡಿದಿದೆ ಎಂದು ವರದಿ ತಿಳಿಸಿದೆ.

English summary
This animal-borne henipavirus was found in Shandong and Henan provinces of China. So far 35 people have been infected. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X