ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಮಿಂಕ್’ ಭೂತದ ಭೀತಿ, ರೈತರ ಪರಿಸ್ಥಿತಿ ಕಂಡು ಪ್ರಧಾನಿ ಕಣ್ಣೀರು

|
Google Oneindia Kannada News

ಕೊರೊನಾ ವೈರಸ್ ದಾಳಿಯಿಂದ ಮಾನವರು ಮಾತ್ರ ಸಂಕಷ್ಟಕ್ಕೆ ತುತ್ತಾಗಿಲ್ಲ, ಪ್ರಾಣಿಗಳು ಕೂಡ ಕೊರೊನಾ ಕೂಪದಲ್ಲಿ ನರಳುತ್ತಿವೆ. ಅದರಲ್ಲೂ ಸ್ತನಿಗಳ ಪಾಡು ದೇವರಿಗೆ ಪ್ರೀತಿ ಎಂಬಂತಾಗಿದೆ. ಇದೇ ರೀತಿ ಡೆನ್ಮಾರ್ಕ್ ಸರ್ಕಾರ ತನ್ನ ದೇಶದಲ್ಲಿ ಕೋಟ್ಯಂತರ ಮಿಂಕ್‌ಗಳನ್ನ ಹತ್ಯೆ ಮಾಡಿತ್ತು. ಅಮೆರಿಕದಲ್ಲಿ ನಡೆದಿದ್ದ ಅಧ್ಯಯನದ ವರದಿ ಆಧಾರದಲ್ಲಿ ಮಿಂಕ್ ಪ್ರಾಣಿಗಳಿಂದ ಕೊರೊನಾ ವೈರಸ್ ಹರಡುವುದು ದೃಢವಾಗಿತ್ತು. ಈ ವರದಿ ತನ್ನ ಕೈಸೇರಿದ ತಕ್ಷಣ ತಡಮಾಡದ ಡೆನ್ಮಾರ್ಕ್ ಸರ್ಕಾರ ಸುಮಾರು 1 ಕೋಟಿ 70 ಲಕ್ಷ ಮಿಂಕ್‌ಗಳನ್ನ ಕೊಂದು ಹಾಕಿತ್ತು. ಆದರೆ ಸರ್ಕಾರದ ಕ್ರಮವೇ ಹೊಸ ಸಮಸ್ಯೆಗೆ ಕಾರಣವಾಗಿದೆ.

ಹೀಗೆ ಕೋಟ್ಯಂತರ ಮಿಂಕ್‌ಗಳನ್ನು ಹೂತು ಹಾಕಿದ ಪ್ರದೇಶದಲ್ಲಿ ಹೊಸ ಆತಂಕ ಎದುರಾಗಿದೆ. ಗುಂಡಿಯಲ್ಲಿ ಹೂತಿರುವ ಕೋಟ್ಯಂತರ ಮಿಂಕ್ ಸ್ತನಿಗಳು ಈಗ ಸಮಾಧಿಯಿಂದ ಹೊರಬರುತ್ತಿವೆ. ಮಿಂಕ್‌ಗಳ ದೇಹದಿಂದ ಬಿಡುಗಡೆಯಾಗುತ್ತಿರುವ ಗ್ಯಾಸ್ ಈ ಪ್ರಕ್ರಿಯೆಗೆ ಕಾರಣವಾಗಿದೆ ಎಂದು ತಜ್ಞರು ತಿಳಿಸಿದ್ದಾರೆ. ಡೆನ್ಮಾರ್ಕ್ ಶೀತ ವಲಯದಲ್ಲಿ ಬರುವ ಪ್ರದೇಶ, ಹೀಗಾಗಿ ಅಲ್ಲಿ ಅತಿಹೆಚ್ಚು ಚಳಿ ಇರುತ್ತದೆ.

ಹೀಗೆ ಚಳಿ ಇರುವ ಪ್ರದೇಶಗಳಲ್ಲಿ ಪ್ರಾಣಿಗಳ ದೇಹ ಅಷ್ಟು ಬೇಗ ಕೊಳೆಯುವುದಿಲ್ಲ. ಈಗ ಆಗಿರುವುದೂ ಅದೇ. ಮಣ್ಣು ಮಾಡಿ ತಿಂಗಳಾದರೂ ಅರ್ಧಂಬರ್ಧ ಕೊಳೆತಿರುವ ಮಿಂಕ್‌ಗಳ ದೇಹವನ್ನು ಅದೇ ಮಿಂಕ್‌ಗಳ ದೇಹದಿಂದ ಬಿಡೆಗಡೆ ಆಗುತ್ತಿರುವ ಗ್ಯಾಸ್ ಹೊರಗೆ ತಳ್ಳುತ್ತಿದೆ. ಹೀಗೆ ಮಿಂಕ್‌ಗಳ ಕೊಳೆತ ದೇಹ ಭೂಮಿ ಮೇಲೆ ಹರಡುತ್ತಿರುವುದು ಹೊಸ ರೋಗದ ಆತಂಕ ಸೃಷ್ಟಿಸಿದೆ.

ರೈತರ ಸ್ಥಿತಿ ಕಂಡು ಪ್ರಧಾನಿ ಕಣ್ಣೀರು

ರೈತರ ಸ್ಥಿತಿ ಕಂಡು ಪ್ರಧಾನಿ ಕಣ್ಣೀರು

ಜಗತ್ತಿನಾದ್ಯಂತ ಅತಿಹೆಚ್ಚು ಮಿಂಕ್ ಸ್ತನಿಗಳನ್ನ ರಫ್ತು ಮಾಡುವ ದೇಶ ಡೆನ್ಮಾರ್ಕ್. ಅಷ್ಟಕ್ಕೂ ಈ ಮಿಂಕ್‌ಗಳ ಉಪಯೋಗ ಏನು ಎಂಬ ಪ್ರಶ್ನೆ ನಿಮ್ಮನ್ನು ಕಾಡಬಹುದು. ಮಿಂಕ್‌ಗಳ ತುಪ್ಪಳ ಅಂದರೆ ಅವುಗಳ ಚರ್ಮಕ್ಕೆ ಭಾರಿ ಬೇಡಿಕೆ ಇದೆ. ಈ ಚರ್ಮದಿಂದ ಕೋಟ್, ಬ್ಯಾಗ್ ಹೀಗೆ ವಿವಿಧ ರೀತಿ ವಸ್ತುಗಳನ್ನು ತಯಾರಿಸುತ್ತಾರೆ. ಒಂದೊಂದು ಮಿಂಕ್‌ನ ಚರ್ಮಕ್ಕೂ ಲಕ್ಷಾಂತರ ರೂಪಾಯಿ ಬೆಲೆ ಇದೆ.

ಮಿಂಕ್‌ ಸಾಕಾಣಿಕೆ ಬಹುದೊಡ್ಡ ಉದ್ಯೋಗ ಒದಗಿಸಿದೆ

ಮಿಂಕ್‌ ಸಾಕಾಣಿಕೆ ಬಹುದೊಡ್ಡ ಉದ್ಯೋಗ ಒದಗಿಸಿದೆ

ಡೆನ್ಮಾರ್ಕ್‌ನ ವಾತಾವರಣ ಮಿಂಕ್‌ ಸಾಕಾಣಿಕೆಗೆ ಉತ್ತಮ ಪರಿಸರ ಒದಗಿಸಿದೆ. ಹೀಗಾಗಿ ಅಲ್ಲಿ ಮಿಂಕ್‌ ಸಾಕಾಣಿಕೆ ಬಹುದೊಡ್ಡ ಉದ್ಯೋಗವನ್ನೂ ಒದಗಿಸಿಕೊಟ್ಟಿದೆ. ಆದರೆ ಕೊರೊನಾ ಕಾರಣಕ್ಕೆ ಮಿಂಕ್‌ಗಳ ಹತ್ಯೆ ಮಾಡಿದ್ದು, ಮಿಂಕ್ ಸಾಕಾಣಿಕೆ ಉದ್ಯಮದ ಬೆನ್ನೆಲುಬನ್ನೇ ಮುರಿದಿದೆ. ಇನ್ನು ವಾಸ್ತವ ಪರಿಶೀಲನೆಗೆ ಅಂತಾ ಮಿಂಕ್ ಸಾಕಾಣಿಕೆದಾರರ ಜಮೀನಿಗೆ ಭೇಟಿ ನೀಡಿದ್ದ ಡೆನ್ಮಾರ್ಕ್ ಪ್ರಧಾನಿ ಮೆಟ್ಟೆ ಫ್ರೆಡೆರಿಕ್ಸೆನ್, ರೈತರ ಸದ್ಯದ ಸ್ಥಿತಿ ಕಂಡು ಕಣ್ಣೀರು ಹಾಕಿದ್ದರು.

ಲಕ್ಷ ಲಕ್ಷ ಕೋಟಿ ಉದ್ಯಮ

ಲಕ್ಷ ಲಕ್ಷ ಕೋಟಿ ಉದ್ಯಮ

ಭಾರತದಲ್ಲಿ ಹೈನುಗಾರಿಕೆ ರೀತಿಯಲ್ಲೇ ಡೆನ್ಮಾರ್ಕ್ ಮಿಂಕ್ ಉದ್ಯಮವನ್ನು ಅವಲಂಬಿಸಿದೆ. ಯುರೋಪ್‌ನಲ್ಲಿ ಮಿಂಕ್ ಸಾಕಾಣಿಕೆ ಉದ್ಯಮ ಲಕ್ಷಾಂತರ ಕೋಟಿ ವಹಿವಾಟು ನಡೆಸುತ್ತದೆ. ಇದರಲ್ಲೂ ಡೆನ್ಮಾರ್ಕ್‌ನ ಪಾಲು ತುಸು ಹೆಚ್ಚಾಗಿದೆ. ಆದರೆ ಮಿಂಕ್ ಸಾಕಾಣಿಕೆ ಅಷ್ಟು ಸುಲಭದ ಮಾತಲ್ಲ. ಮಿಂಕ್‌ಗಳ ಕುರಿತು ತುಂಬಾ ಕೇರ್ ತೆಗೆದುಕೊಳ್ಳಬೇಕು. ಅದರಲ್ಲೂ ಚಳಿ ಹೆಚ್ಚಾಗಿರುವ ಡೆನ್ಮಾರ್ಕ್‌ ರೀತಿಯ ವಾತಾವರಣದಲ್ಲಿ ಬೆಚ್ಚನೆ ಗೂಡನ್ನು ನಿರ್ಮಿಸಬೇಕಾಗುತ್ತದೆ. ಹೀಗೆ ಒಬ್ಬೊಬ್ಬ ಡೆನ್ಮಾರ್ಕ್ ರೈತನೂ ಕೋಟ್ಯಂತರ ರೂಪಾಯಿ ಖರ್ಚು ಮಾಡಿ, ಈ ಮಿಂಕ್‌ಗಳನ್ನ ಸಾಕುತ್ತಾನೆ. ಆದರೆ ಈ ಪೀಡೆ ಕೊರೊನಾ ಡೆನ್ಮಾರ್ಕ್‌ನ ರೈತರ ಬದುಕನ್ನೂ ಬೀದಿಗೆ ತಳ್ಳಿದೆ.

ಅಮೆರಿಕ ರೈತರ ಪಾಡು ಭಿನ್ನವಾಗಿಲ್ಲ

ಅಮೆರಿಕ ರೈತರ ಪಾಡು ಭಿನ್ನವಾಗಿಲ್ಲ

ಇದು ಡೆನ್ಮಾರ್ಕ್‌ನ ರೈತರ ಬವಣೆ ಮಾತ್ರವಲ್ಲ. ಅಮೆರಿಕದಲ್ಲೂ ಮಿಂಕ್ ಸಾಕಾಣಿಕೆ ಉದ್ಯಮ ಬಹುದೊಡ್ಡ ಮಟ್ಟದಲ್ಲಿ ನಡೆಯುತ್ತದೆ. ಆದರೆ ಕೊರೊನಾ ಕಾರಣಕ್ಕೆ ಅಲ್ಲೂ ಕೋಟ್ಯಂತರ ಮಿಂಕ್‌ಗಳನ್ನ ಸಾಮೂಹಿಕವಾಗಿ ಹತ್ಯೆ ಮಾಡಿದ್ದಾರೆ. ಇದರಿಂದ ಅಮೆರಿಕದ ಮಿಂಕ್ ಸಾಕಾಣಿಕೆದಾರರು ಕೂಡ ಬೀದಿಗೆ ಬಿದ್ದಿದ್ದಾರೆ. ಕೋಟಿ, ಕೋಟಿ ದುಡಿಯುತ್ತಿದ್ದ ರೈತರು ದಿವಾಳಿಯಾಗಿ ದಿಕ್ಕೇ ಕಾಣದಂತಾಗಿದ್ದಾರೆ. ಆದರೆ ಮಿಂಕ್‌ಗಳ ಮುಖಾಂತರ ಮನುಷ್ಯನಿಗೆ ಕೊರೊನಾ ಹರಡುವುದು ದೃಢವಾಗುತ್ತಿದ್ದಂತೆ ಈ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿತ್ತು. ಇದು ಮಿಂಕ್‌ ಉದ್ಯಮದ ಜೊತೆಗೆ ಮಿಂಕ್ ಚರ್ಮ ಉತ್ಪನ್ನಗಳ ಉದ್ಯಮದ ಮೇಲೂ ಪ್ರಭಾವ ಬೀರಿದೆ.

English summary
Another problem occurred in Denmark after Mink mass grave. Dead Minks emerge from shallow graves due to gases after thousands buried to reduce Corona risk.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X