ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ರಿಟನ್‌ನಲ್ಲಿ ಮತ್ತೊಂದು ಹೊಸ ಕೊರೊನಾವೈರಸ್ ಪತ್ತೆ!

|
Google Oneindia Kannada News

ಲಂಡನ್, ಡಿಸೆಂಬರ್ 24: ಕೊರೊನಾವೈರಸ್‌ಗೆ ಲಸಿಕೆ ಇನ್ನೇನು ಸಿಕ್ಕೇ ಬಿಟ್ಟಿತು ಎನ್ನುವಷ್ಟರಲ್ಲಿ ಇತ್ತೀಚೆಗಷ್ಟೇ ಹೊಸ ಕೊರೊನಾವೈರಸ್ ರೂಪಾಂತರವು ಬ್ರಿಟನ್‌ನಲ್ಲಿ ಪತ್ತೆಯಾಗಿ ಇಡೀ ವಿಶ್ವವನ್ನೇ ಆತಂಕಕ್ಕೆ ದೂಡಿತ್ತು. ಆದರೆ ಇದೀಗ ಮತ್ತೊಂದು ಕೊರೊನಾವೈರಸ್ ಪತ್ತೆಯಾಗುವ ಮೂಲಕ ಜಗತ್ತಿನ ಚಿಂತೆಯನ್ನ ಹೆಚ್ಚಿಸಿದೆ.

ಬ್ರಿಟನ್‌ನಲ್ಲಿ ಹೊಸ ಸೋಂಕು ಪತ್ತೆಯಾಗಿದೆ ಎಂದು ಬ್ರಿಟನ್‌ನ ಆರೋಗ್ಯ ಇಲಾಖೆಯ ಕಾರ್ಯದರ್ಶಿ ಮ್ಯಾಟ್‌ ಹ್ಯಾಂಕಾಕ್ ಹೇಳಿದ್ದಾರೆ. ದಕ್ಷಿಣ ಆಫ್ರಿಕಾಗೆ ಪ್ರಯಾಣಿಸಿದ್ದ ಇಬ್ಬರು ವ್ಯಕ್ತಿಗಳಲ್ಲಿ ಈ ಸೋಂಕು ಕಾಣಿಸಿಕೊಂಡಿದೆ. ಸೋಂಕು ದಕ್ಷಿಣ ಆಫ್ರಿಕಾ ಮೂಲ ಆಗಿರುವುದರಿಂದ ಬ್ರಿಟನ್‌ ಪ್ರಯಾಣಿಕರು ದಕ್ಷಿಣ ಆಫ್ರಿಕಾಕ್ಕೆ ಪ್ರಯಾಣಿಸುವುದನ್ನು ನಿರ್ಬಂಧಿಸಲಾಗಿದೆ.

3 ತಿಂಗಳಿಂದೀಚೆಗೆ ಅತಿ ಕಡಿಮೆ ಕೊರೊನಾ ಸೋಂಕಿತರ ಸಾವು ಕಂಡ ದೆಹಲಿ 3 ತಿಂಗಳಿಂದೀಚೆಗೆ ಅತಿ ಕಡಿಮೆ ಕೊರೊನಾ ಸೋಂಕಿತರ ಸಾವು ಕಂಡ ದೆಹಲಿ

ಇದರ ಜೊತೆಗೆ ಕಳೆದ 15 ದಿನಗಳಲ್ಲಿ ದಕ್ಷಿಣ ಆಫ್ರಿಕಾಕ್ಕೆ ಪ್ರಯಾಣ ಮಾಡಿದ ಬ್ರಿಟನ್ ಜನರ ಮೇಲೆ ನಿಗಾವಹಿಸಲು ಆರೋಗ್ಯ ಇಲಾಖೆ ಸೂಚನೆ ನೀಡಿದ್ದು, ಕ್ವಾರಂಟೈನ್ ಆಗಲು ತಿಳಿಸಿದೆ.

Another New Variant Of Coronavirus Detected In UK: Health Minister

ಇಂದು ಬೆಳಿಗ್ಗೆ 9ಗಂಟೆಯಿಂದಲೇ(ಬ್ರಿಟನ್ ಕಾಲಮಾನ) ಇಂಗ್ಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ವಿಮಾನಗಳ ಹಾರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಈಗಾಗಲೇ ಇಂಗ್ಲೆಂಡ್‌ ಭಾರತ ಸೇರಿದಂತೆ ಹಲವು ಯೂರೋಪಿಯನ್ ರಾಷ್ಟ್ರಗಳು ವಿಮಾನ ಹಾರಾಟ ಸ್ಥಗಿತಗೊಳಿಸಿವೆ.

ಪತ್ತೆಯಾಗಿರುವ ಹೊಸ ಸೋಂಕು, ಇತ್ತೀಚೆಗೆ ಪತ್ತೆಯಾಗಿದ್ದ ಕೊರೊನಾವೈರಸ್ ಹೊಸ ರೂಪಾಂತರಕ್ಕಿಂತ ಹೆಚ್ಚು ವೇಗವಾಗಿ ಹರಡಬಲ್ಲದು ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ. ಜೊತೆಗೆ ದಕ್ಷಿಣ ಆಫ್ರಿಕಾದಲ್ಲಿಯೂ ಇದರ ಹರಡುವಿಕೆಯ ಪ್ರಮಾಣ ತೀವ್ರವಾಗಿರಬಹುದು ಎಂದು ಅಂದಾಜಿಸಲಾಗಿದೆ.

ಮನೆಮನೆ ಮಾತಾದ ಗೋಲ್ಡ್ ವಿನ್ನರ್‌ನಿಂದ ಎಲ್ಡಿಯಾ ಶುದ್ಧ ಕೊಬ್ಬರಿ ಎಣ್ಣೆಮನೆಮನೆ ಮಾತಾದ ಗೋಲ್ಡ್ ವಿನ್ನರ್‌ನಿಂದ ಎಲ್ಡಿಯಾ ಶುದ್ಧ ಕೊಬ್ಬರಿ ಎಣ್ಣೆ

ಇದುವರೆಗೆ ದಕ್ಷಿಣ ಆಫ್ರಿಕಾದಲ್ಲಿ 9.54ಲಕ್ಷಕ್ಕಿಂತಲೂ ಅಧಿಕ ಪ್ರಕರಣಗಳು ದಾಖಲಾಗಿದ್ದು, 25 ಸಾವಿರ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

English summary
A new, potentially more infectious variant of the novel coronavirus that causes COVID-19 has been found in Britain in cases linked to South Africa.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X