ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕದಲ್ಲಿ ಶೂಟೌಟ್: ಮತ್ತೊಬ್ಬ ಭಾರತೀಯನ ಬಲಿ

|
Google Oneindia Kannada News

ವಾಷಿಂಗ್ಟನ್, ಏಪ್ರಿಲ್ 8: ಅಮೆರಿಕದಲ್ಲಿ ಮತ್ತೊಂದು ಶೂಟೌಟ್ ಆಗಿದ್ದು, ಈ ಬಾರಿ ಪಂಜಾಬ್ ಮೂಲದ ವಿಕ್ರಮ್ ಜರ್ಯಾಲ್ (27) ಎಂಬಾತನನ್ನು ಗುಂಡಿಕ್ಕಿ ಕೊಲ್ಲಲಾಗಿದೆ.

ವಾಷಿಂಗ್ಟನ್ ಸ್ಟೇಟ್ ನ ಗ್ಯಾಸ್ ಬಂಕ್ ಒಂದರಲ್ಲಿ ಗುಮಾಸ್ತರಾಗಿ ಕಾರ್ಯ ನಿರ್ವಹಿಸತ್ತಿದ್ದ ವಿಕ್ರಮ್, ಏಪ್ರಿಲ್ 6ರ ರಾತ್ರಿ ಈ ಹತ್ಯೆಗೀಡಾಗಿದ್ದಾರೆಂದು ಹೇಳಲಾಗಿದೆ.

Another Indian killed in US

ದುರಂತವೆಂದರೆ, ಪಿಸ್ತೂಲು ತೋರಿಸಿ ದರೋಡೆಗಿಳಿದ ವ್ಯಕ್ತಿಗಳಿಗೆ ತನ್ನಲ್ಲಿದ್ದ ಪರ್ಸ್, ಮೊಬೈಲ್ ಮುಂತಾದವನ್ನು ಕೊಟ್ಟ ಮೇಲೂ ವಿಕ್ರಮ್ ಅವರ ಮೇಲೆ ಗುಂಡಿನ ದಾಳಿಯಾಗಿದೆ.

ಏಪ್ರಿಲ್ 6ರ ಮಧ್ಯರಾತ್ರಿ ಸುಮಾರು 1:30ರ ಸುಮಾರಿಗೆ (ಸ್ಥಳೀಯ ಕಾಲಮಾನ) ಗ್ಯಾಸ್ ಬಂಕ್ ಗೆ ಬಂದಿದ್ದ ಕೆಲ ದರೋಡೆಕೋರರು ಆತನನ್ನು ಬ ಬೆದರಿಸಿ ಸುಲಿಗೆ ಮಾಡುವುದರ ಜತೆಗೆ ಆತನ ಎದೆಗೆ ಗುಂಡು ಹಾರಿಸಿ ಹತ್ಯೆಗೈದಿದ್ದಾರೆ.

ದರೋಡೆ ಮಾಡಿದ ನಂತರವೂ ಗುಂಡು ಹಾರಿಸಿರುವುದು ಈ ಪ್ರಕರಣದ ಮೇಲೆ ಜನಾಂಗೀಯ ದ್ವೇಷದ ಛಾಯೆಯೂ ಆವರಿಸಿದೆ.

ಈ ಬಗ್ಗೆ ಸುಷ್ಮಾ ಸ್ವರಾಜ್ ಅವರು ಟ್ವೀಟರ್ ನಲ್ಲಿ ಪ್ರತಿಕ್ರಿಯಿಸಿದ್ದು, ಅಮೆರಿಕದಲ್ಲಿ ಮತ್ತೊಬ್ಬ ಭಾರತೀಯನ ಹತ್ಯೆಯಾಗಿರುವುದು ಬೇಸರ ತಂದಿದೆ. ಕಿರಿಯ ವಯಸ್ಸಿನ ಈತ ಕೇವಲ 15 ದಿನಗಳ ಹಿಂದಷ್ಟೇ ಅಮೆರಿಕಕ್ಕೆ ಹೋಗಿದ್ದ. ಅಲ್ಲಿ ಗ್ಯಾಸ್ ಬಂಕ್ ಒಂದರಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ.

ಅಲ್ಲಿನ ಪೊಲೀಸರೊಂದಿಗೆ ಭಾರತ ಸರ್ಕಾರವು ನಿರಂತರ ಸಂಪರ್ಕದಲ್ಲಿದ್ದು ಮೃತರ ಕುಟುಂಬಕ್ಕೆ ಬೇಕಾದ ನೆರವುಗಳನ್ನು ನೀಡಲು ಪ್ರಯತ್ನಿಸುತ್ತಿದೆ ಎಂದು ತಿಳಿಸಿದ್ದಾರೆ.

English summary
The 26 year old Punjabi man Vikram Jaryal, who's working as a clerk at AM-PM gas station in Washington state, was reportedly shot by a couple of robbers. According to police, Vikram was shot in head even after he handed over the money they demanded for. Also, they are investigating this case on the lines of hate crime.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X